Monday, June 22, 2026
spot_imgspot_img
spot_imgspot_img

ಪುತ್ತೂರು: ಗಾಡಿ ಮಾರಾಟದ ವಿಚಾರವಾಗಿ ಇತ್ತಂಡಗಳ ನಡುವೆ ಮಾರಾಮಾರಿ; ಮೂವರು ಆಸ್ಪತ್ರೆಗೆ ದಾಖಲು

- Advertisement -
- Advertisement -

ಪುತ್ತೂರು: ಗಾಡಿ ಮಾರಾಟದ ವಿಚಾರವಾಗಿ ಮಾತಿಗೆ ಮಾತು ಬೆಳೆದು ಹಲ್ಲೆ ನಡೆದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಘಟನೆಯ ಪರಿಣಾಮ ಇತ್ತಂಡಗಳ ಮೂವರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಆಸ್ಪತ್ರೆಯಲ್ಲಿ ದಾಖಲಾದವರನ್ನು ಬುಳೇರಿಕಟ್ಟೆ ನಿವಾಸಿ ಅಲ್ತಾಫ್ ಹಾಗೂ ಬೆಳ್ತಂಗಡಿ ನಿವಾಸಿಗಳಾದ ರಿಜೀಶ್ ಮತ್ತು ರಕ್ಷಿತ್ ಎಂದು ಗುರುತಿಸಲಾಗಿದೆ.

ಗಾಡಿ ಮಾರಾಟ ವಿಚಾರವಾಗಿ ಹಲವು ದಿನಗಳಿಂದ ಇವರ ಮದ್ಯೆ ಮಾತು ಕತೆ ನಡೆಯುತ್ತಿದ್ದು, ಇಂದು ಅದು ಮಿತಿ ಮೀರಿ ಜಗಳಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದೆ. ಪುತ್ತೂರು ನಗರ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.

- Advertisement -

Related news

error: Content is protected !!