Saturday, April 20, 2024
spot_imgspot_img
spot_imgspot_img

ಪುತ್ತೂರು: ಡಾ|ನರೇಂದ್ರ ರೈ ದೇರ್ಲರವರ ಹನ್ನೆರಡು ಲೇಖನಗಳು ಕರ್ನಾಟಕ ಕೇರಳ ಕಾಲೇಜುಗಳ ಪಠ್ಯಕ್ಕೆ ಸೇರ್ಪಡೆ

- Advertisement -G L Acharya panikkar
- Advertisement -

ಪುತ್ತೂರು: ಬೆಂಗಳೂರು, ಕುವೆಂಪು, ಮಂಗಳೂರು ವಿಶ್ವವಿದ್ಯಾನಿಲಯವೂ ಸೇರಿದಂತೆ ಕರ್ನಾಟಕ-ಕೇರಳದ ಶಾಲಾ ಕಾಲೇಜು ಪಠ್ಯಗಳಲ್ಲಿ ಪುತ್ತೂರಿನ ಲೇಖಕ ಪ್ರಾಧ್ಯಾಪಕ, ಅಂಕಣಗಾರ, ಕೃಷಿಕ ಡಾ| ನರೇಂದ್ರ ರೈ ದೇರ್ಲ ಅವರ ಹನ್ನೆರಡು ಲೇಖನಗಳು ಪಠ್ಯಗಳಾಗಿವೆ ಎಂಬುದು ಹೆಮ್ಮೆಯ ಸಂಗತಿ. ಕರಾವಳಿ ಕರ್ನಾಟಕಕ್ಕೆ ಸಂಬಂಧಿಸಿದಂತೆ ಒಬ್ಬನೇ ಲೇಖಕನ ಇಷ್ಟೊಂದು ಬರಹಗಳು ಕಳೆದ ಎರಡು-ಮೂರು ವರ್ಷಗಳ ಅವಧಿಯಲ್ಲಿ ಪಾಠಗಳಾದುದು ಗಮನಾರ್ಹ.

ಬೆಂಗಳೂರು ವಿಶ್ವವಿದ್ಯಾನಿಲಯದ ದ್ವಿತೀಯ ಬಿ.ಎಸ್ಸಿ.ಗೆ ಸೋಲಿಗರ ಸುಸ್ಥಿರ ಬದುಕು’, ಕುವೆಂಪು ವಿ.ವಿ.ಯ ಪದವಿ ತರಗತಿಗೆ ಮಿತಿಯ ಕೃಷಿ ಅತಿ ಖುಷಿ’, ಬಿ.ಕಾಂ.ತರಗತಿಗೆ `ಅಮರ'(ಕವಿತೆ)., ಬಿ.ಎ.ತರಗತಿಗೆ ಚೇರ್ಕಾಡಿ ಪದವಿ ತರಗತಿಗೆ `ಮಿತಿಯ ಕೃಷಿ ಅತಿ ಖುಷಿ’, ಬಿ.ಕಾಂ.ತರಗತಿಗೆ `ಅಮರ'(ಕವಿತೆ)., ಬಿ.ಎ.ತರಗತಿಗೆ ಕೃಷಿ’. ಮಂಗಳೂರು ವಿ.ವಿ.ಯ ವಿವಿಧ ತರಗತಿಗಳಿಗೆ `ಬೀಜ ಬೇರು ಮೌಸ್ ಮಾನೀಟರ್’, `ನುಡಿಚಿತ್ರ’ `ತಿನ್ನುವ ಅನ್ನ’ ಮತ್ತು `ಬಹುತ್ವ’, `ಹಸಿರು ತುಂಡು ತುಕಡಿ’ಎಂಬ ಲೇಖನಗಳು ಪಠ್ಯದೊಳಗೆ ಪಾಠಗಳಾಗಿ ಸೇರಿವೆ.

ಡಾ| ದೇರ್ಲ ಅವರ ಇತ್ತೀಚಿನ ಬಹುಮುಖ್ಯ ಕೃತಿ ‘ಹಳ್ಳಿಯ ಆತ್ಮಕತೆ’ ರಾಜ್ಯದ ಪ್ರತಿಷ್ಠಿತ ಖಾಸಗಿ ವಿಶ್ವವಿದ್ಯಾನಿಲಯವೊಂದರ ಪದವಿ ತರಗತಿಗೆ ಉಪಪಠ್ಯವಾಗಿ ಮುಂದಿನ ವರ್ಷ ಸೇರಲಿದೆ. ಡಾ|ನರೇಂದ್ರ ರೈ ದೇರ್ಲ ಅವರ ಪರಿಸರ ಸಂಬಂಧೀ ಲೇಖನಗಳನ್ನು ಮೊದಲು ಪಠ್ಯಕ್ಕೆ ಆಯ್ಕೆ ಮಾಡಿದ್ದು ಕೇರಳ ಸರಕಾರ.ಅಲ್ಲಿಯ ಒಂಬತ್ತನೆಯ ತರಗತಿಯ `ಕೇರಳ ಪಾಠಾವಳಿ’ ಪುಸ್ತಕದಲ್ಲಿ `ಅಜ್ಜನ ಜಗಲಿಯಲ್ಲಿ ಆಕಾಶವಾಣಿ’ ಮತ್ತು `ಟಿ.ವಿ.ಇಲ್ಲದ ಮನೆ ಸಂಭ್ರಮ’ ಎಂಬ ಎರಡು ನುಡಿಚಿತ್ರಗಳು ಸೇರಿವೆ.ಇದೇ ಹೊತ್ತಿಗೆ ಕರ್ನಾಟಕದ ಏಳನೆಯ ತರಗತಿಯ `ಸಿರಿಕನ್ನಡ’ದಲ್ಲೂ `ಹಳ್ಳಿಮನೆ ಆಶ್ರಮವಾಗಲಿ’ ಎಂಬ ಲೇಖನ ಪಾಠವಾಗಿದೆ. ದ್ವಿತೀಯ ಪಿ.ಯು.ಸಿ.ಯಲ್ಲೂ ದೇರ್ಲರ ನುಡಿಚಿತ್ರವೊಂದು ಪಠ್ಯವಾದುದಲ್ಲದೆ ಮಂಗಳೂರಿನ ಯೇನೆಪೋಯ ವಿಶ್ವವಿದ್ಯಾನಿಲಯವೂ ಬಿ.ಕಾಂ., 29.29.3. ತರಗತಿಗಳಿಗೆ ಪರಿಸರ ಸಂಬಂಧೀ ಲೇಖನವೊಂದನ್ನು ಪಠ್ಯದೊಳಗೆ ಸಂಕಲಿಸಿದೆ.

ಕೇವಲ ಇಷ್ಟೇ ಅಲ್ಲ, ತಾನು ಬರೆದ ಪಾಠಗಳನ್ನು ತರಗತಿಯೊಳಗಡೆ ತಾನೇ ಪಾಠ ಮಾಡುವ ಭಾಗ್ಯ ಅದೃಷ್ಟವೂ ದೇರ್ಲ ಅವರದು. ಡಾ| ನರೇಂದ್ರ ರೈ ದೇರ್ಲ ಪ್ರಸ್ತುತ ಪುತ್ತೂರಿನ ಸರಕಾರಿ ಮಹಿಳಾ ಪದವಿ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯೂ ಸೇರಿ ಕುವೆಂಪು ಭಾಷಾಭಾರತಿ, ಪರಿಸರಪರ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ, ಡಾ| ಹಾ.ಮಾ. ನಾಯಕ ಅಂಕಣ ಪ್ರಶಸ್ತಿಯೂ ದೇರ್ಲರಿಗೆ ಲಭಿಸಿದೆ. ಈವರೆಗೆ ೩೨ ಪುಸ್ತಕಗಳನ್ನು ಬರೆದು ಪ್ರಕಟಿಸಿದ ದೇರ್ಲ ಅವರು ತರಂಗದಲ್ಲಿ ಏಳು ವರ್ಷಗಳ ಕಾಲ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

ಕರ್ನಾಟಕ-ಕೇರಳದ ಬಹುಪಾಲು ಪಠ್ಯಗಳಿಗೆ ಆಯ್ಕೆಯಾಗಿರುವ ಡಾ| ದೇರ್ಲರ ಗರಿಷ್ಠ ಲೇಖನಗಳು ಪರಿಸರ ಸಂಬಂಧೀ ಬರಹಗಳೇ ಆಗಿವೆ. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬಂದ ಮೇಲೆ ಕುವೆಂಪು ಮತ್ತು ಬೆಂಗಳೂರು ವಿಶ್ವವಿದ್ಯಾನಿಲಯಗಳು ದೇರ್ಲರನ್ನು ಸಂಪರ್ಕಿಸಿ ತಮ್ಮ ಪಠ್ಯಕ್ಕಾಗಿಯೇ ವಿಶೇಷ ಲೇಖನಗಳನ್ನು ಬರೆಸಿವೆ. ಉಳಿದಂತೆ ಬೇರೆ ಪಠ್ಯ ಮಂಡಳಿಗಳು ದೇರ್ಲರವರ ಪ್ರಕಟಿತ ಕೃತಿಗಳಿಂದಲೇ ಲೇಖನಗಳನ್ನು ಆಯ್ದು ಸಂಕಲಿಸಿವೆ. ಕಳೆದ ಒಂದು ದಶಕದಿಂದೀಚೆಗೆ ಭಾರತೀಯ ಭಾಷಿಕ ಪಠ್ಯದೊಳಗೆ ಪರಿಸರ ಸಂಬಂಧಿ ಲೇಖನಗಳನ್ನು ಹೆಚ್ಚು ಹೆಚ್ಚು ಬಳಸಲಾಗುತ್ತಿದ್ದು ಕನ್ನಡದಲ್ಲಿ ಪೂರ್ಣಚಂದ್ರ ತೇಜಸ್ವಿ, ನಾಗೇಶ ಹೆಗಡೆಯವರ ಪರಂಪರೆಯಲ್ಲಿ ಡಾ| ದೇರ್ಲರ ಪ್ರಕೃತಿಪರ ಬರಹಗಳು ಆಯ್ಕೆಯಾಗುತ್ತಿರುವುದು ಗಮನೀಯ.

- Advertisement -

Related news

error: Content is protected !!