Saturday, May 4, 2024
spot_imgspot_img
spot_imgspot_img

ಪುತ್ತೂರು: ನಗರದಲ್ಲಿ ಮಂಗಳಮುಖಿಯರ ಅಸಭ್ಯ ರೀತಿಯ ವರ್ತನೆಯಿಂದ ತೊಂದರೆ; ಪ್ರತಿಷ್ಠಿತ ಜವುಳಿ ಮಳಿಗೆಯ ಮಾಲೀಕರಿಂದ ಪೊಲೀಸ್ ಅಧೀಕ್ಷಕರಿಗೆ ದೂರು

- Advertisement -G L Acharya panikkar
- Advertisement -

ಪುತ್ತೂರು: ನಗರದಲ್ಲಿ ಮಂಗಳಮುಖಿಯರಿಂದ ತೊಂದರೆಯಾಗುತ್ತಿದೆ ಎಂದು ಪ್ರತಿಷ್ಠಿತ ಜವುಳಿ ಮಳಿಗೆಯ ಮಾಲೀಕರು ಕೈಗಾರಿಕೆ ಸಂಘದ ಅಧ್ಯಕ್ಷರಿಗೆ ಹಾಗೂ ಪುತ್ತೂರು ನಗರ ಠಾಣಾ ಪೊಲೀಸ್ ಅಧೀಕ್ಷಕರಿಗೆ ದೂರು ನೀಡಿದ್ದಾರೆ.

ಪುತ್ತೂರು ನಗರದಲ್ಲಿ ಮಂಗಳಮುಖಿಯರಿಂದ ತೊಂದರೆ ಹೆಚ್ಚಾಗುತ್ತಿದೆ. ಅವರಿಗೆ ಮಾನವೀಯ ನೆಲೆಯಿಂದ ನಾವು ಕೊಡುವ ಹಣವು, ಅವರ ನಿರೀಕ್ಷೆಯ ಮಟ್ಟದಲ್ಲಿ ಇಲ್ಲವಾದಾಗ ಹೆಚ್ಚಿನ ಮೊತ್ತಕ್ಕೆ ಬೇಡಿಕೆ ಇಡುತ್ತಾರೆ. ಅವರ ಬೇಡಿಕೆಯ ಮೊತ್ತ ಸಿಗದಿದ್ದರೇ ಕೊಟ್ಟ ಹಣವನ್ನು ಸ್ವೀಕರಿಸದೆ. ಆವಾಚ್ಯ ಶಬ್ದಗಳಿಂದ ಸಾರ್ವಜನಿಕವಾಗಿ ನಿಂದಿಸಿರುತ್ತಾರೆ ಹಾಗೂ ನಮ್ಮನ್ನು ಅವರಾಗಿ ಸ್ಪರ್ಶಿಸಿ ಹೀನಾಯವಾಗಿ, ಅಸಭ್ಯವಾಗಿ ವರ್ತಿಸಿರುತ್ತಾರೆ.

ಅ.30 ರಂದು ಮಧ್ಯಾಹ್ನ ಹಳದಿ ಬಣ್ಣದ (yellow kurthi, Rani pink leggin) ಡ್ರೆಸ್ ಹಾಕಿರುವ ಮಂಗಳಮುಖಿಯೋರ್ವರು ಮಾನವೀಯ ನೆಲೆಯಿಂದ ನಾವು ಕೊಟ್ಟ ಹಣವನ್ನು ತಿರಸ್ಕರಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಸರ್ಕಾರಿ ನಿಯಮಗಳಂತೆ, ಲೈಸನ್ಸ್ ಫೀಸ್, ವೃತ್ತಿ ತೆರಿಗೆ, ಜಿಎಸ್ ಟಿ ಟ್ಯಾಕ್ಸ್ , ಇನ್ ಕಮ್ ಟ್ಯಾಕ್ಸ್ ಇತ್ಯಾದಿ ತೆರಿಗೆಗಳನ್ನು ಪಾವತಿಸಿಕೊಂಡು ವ್ಯಾಪಾರ-ವ್ಯವಹಾರ ನಡೆಸುವಾಗ, ನಮಗೆ, ನಮ್ಮ ಗ್ರಾಹಕರಿಗೆ ಹಾಗೂ ಸಾರ್ವಜನಿಕರಿಗೆ ಈ ರೀತಿ ಕೆಲವೊಂದು ಮಂಗಳಮುಖಿಯರು ಅಸಭ್ಯ ರೀತಿಯಲ್ಲಿ ವರ್ತಿಸುವುರಿಂದ ತೊಂದರೆಯಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!