Friday, May 10, 2024
spot_imgspot_img
spot_imgspot_img

ಕುಡುಕ ಪತಿಯಿಂದ ನಿತ್ಯ ಕಿರುಕುಳ; ಮಕ್ಕಳಿಗೆ ವಿಷ ಕೊಟ್ಟು ತಾನು ವಿಷ ಉಂಡ ತಾಯಿ – ಪುತ್ರಿ ಮೃತ್ಯು..!

- Advertisement -G L Acharya panikkar
- Advertisement -

ಪ್ರತಿನಿತ್ಯ ಮದ್ಯಸೇವಿಸಿ ಬಂದು ಕಿರುಕುಳ ನೀಡುತ್ತಿದ್ದ ಗಂಡನಿಂದ ಬೇಸತ್ತ ಪತ್ನಿ ಇಬ್ಬರು ಮಕ್ಕಳಿಗೆ ವಿಷ ಕುಡಿಸಿ ತಾನೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ನಡೆದಿದೆ. ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿಯಲ್ಲಿ ನಡೆದಿದೆ. ಘಟನೆಯಲ್ಲಿ 8 ವರ್ಷದ ಮಗಳು ಸಿಂಧು ಸಾವನ್ನಪ್ಪಿದರೆ, ತಾಯಿ ಶೀಲಾ (25) ಮತ್ತು ಪುತ್ರ ಯಶವಂತನ (12) ಸ್ಥಿತಿ ಗಂಭೀರವಾಗಿದೆ.

ಮಾದೇಶ್ ವಿಪರೀತ ಕುಡಿಯುತ್ತಿದ್ದ, ಪ್ರತಿನಿತ್ಯ ಮದ್ಯಸೇವಿಸಿ ಬಂದು ಪತ್ನಿ ಶೀಲಾಗೆ ಕಿರುಕುಳ ನೀಡುತ್ತಿದ್ದ. ಇದರಿಂದ ನಿರಂತರವಾಗಿ ಗಂಡ ಹೆಂಡತಿ ಮಧ್ಯೆ ಜಗಳ ಆಗಿತ್ತು. ಇದರಿಂದ ಮನನೊಂದ ಶೀಲಾ ಜು.೧೨ರಂದು 6 ಗಂಟೆ ಸಮಯದಲ್ಲಿ ತನ್ನಿಬ್ಬರು ಮಕ್ಕಳಿಗೆ ವಿಷ ಕುಡಿಸಿ, ತಾನು ಕುಡಿದಿದ್ದಾಳೆ.

ಅತ್ತ ಸಾವಿಗೀಡಾದ ಪುತ್ರಿ ಮರಣ ಹೊಂದಿದ್ದಾಳೆ, ಪುತ್ರ, ಪತ್ನಿ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರೂ, ಪಾಪಿ ತಂದೆ ಮಾದೇಶ್​ ಆಸ್ಪತ್ರೆ ಬಂದಿಲ್ಲ. ಹೀಗಾಗಿ ಮಾದೇಶ್ ವಿರುದ್ದ ಶೀಲಾ ಸಂಬಂಧಿಕರು ಆಕ್ರೋಶ ಹೊರಹಾಕಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿರುವ ಶೀಲಾ ಮತ್ತು ಪುತ್ರ ಯಶ್ವಂತ್ ಗೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

- Advertisement -

Related news

error: Content is protected !!