Thursday, April 25, 2024
spot_imgspot_img
spot_imgspot_img

ಪುತ್ತೂರು: ಬೆಳ್ಳಿಪ್ಪಾಡಿ ಶ್ರೀ ಸಕಲೇಶ್ವರ ಪಂಚಲಿಂಗೇಶ್ವರ ಮಹಾದೇವ ದೇವಸ್ಥಾನದಲ್ಲಿ ಕಂಡು ಬಂದ ದೇವರ ಕಾರ್ಣಿಕ..! ಜೀಣೋದ್ಧಾರ ಕಾರ್ಯದ ವೇಳೆ ಹಿತ್ತಾಳೆ ಬುತ್ತಿಯಲ್ಲಿ ಪತ್ತೆಯಾಯ್ತು ನೀರು, ತುಳಸಿ, ದರ್ಬೆ, ಕೇಪುಳ

- Advertisement -G L Acharya panikkar
- Advertisement -

ಪುತ್ತೂರು ಉಪ್ಪಿನಂಗಡಿ ರಸ್ತೆಯಲ್ಲಿ ಸುಮಾರು ಎಂಟು ಕಿ.ಮೀ ದೂರಲ್ಲ ಬೆಳ್ಳಿಪ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಶ್ರೀ ಸಕಲೇಶ್ವರ ಪಂಚಲಿಂಗೇಶ್ವರ ದೇವಸ್ಥಾನ ಇದ್ದು ಇತರ ಧರ್ಮ ದೈವಗಳು ನೆಲೆನಿಂತ ಕ್ಷೇತ್ರವಾಗಿದೆ. ಸಂಪೂರ್ಣ ಅಜೀರ್ಣಾವಸ್ಥೆಯಲ್ಲಿದ್ದ ಸಕಲೇಶ್ವರ ಪಂಚಲಿಂಗೇಶ್ವರ ದೇವಸ್ಥಾನವನ್ನು ಜೀಣೋದ್ಧಾರಗೊಳಿಸಬೇಕೆಂದು ಊರ ಹಾಗೂ ಪರಊರ ಭಕ್ತರ ಒಮ್ಮತವಾಗಿತ್ತು, ಈ ಹಿನ್ನಲೆ ಜ್ಯೋತಿಷ್ಯ ವಿದ್ವಾಂಸರನ್ನು ಕರೆಸಿ ಅಷ್ಟಮಂಗಳ, ಸುವರ್ಣ ಪ್ರಶ್ನೆ ಇಟ್ಟಿದ್ದಾರೆ. ಈ ವೇಳೆ ಇದು ನೂರಾರು ವರ್ಷಗಳ ಪುರಾತನ ಕ್ಷೇತ್ರ ಎಂದು ತಿಳಿದುಬಂದಿದೆ.

ಜೀಣೋದ್ಧಾರ ಕಾರ್ಯದ ವೇಳೆ ಬೆಳಕಿಗೆ ಬಂದ ದೈವಿಕ ಶಕ್ತಿಯ ಕಾರ್ಣಿಕ
ಇನ್ನು ಜೀಣೋದ್ಧಾರ ಮಾಡುವ ವೇಳೆ ದೇವಾಲಯದ ಮಹಾಬಲಿ ಪೀಠವನ್ನು ಅಗೆಯುವ ಸಂದರ್ಭದಲ್ಲಿ ದೇವರ ಕಾರ್ಣಿಕ ಕಂಡು ಬಂದಿದೆ. ಕಲ್ಲಿನ ಒಳಭಾಗದಲ್ಲಿ ಹಿತ್ತಾಳೆ ಬುತ್ತಿಯೊಳಗೆ ನೀರು, ತುಳಸಿ, ಕೇಪುಳ, ದರ್ಬೆ ಕಂಡು ಬಂದಿದ್ದು ದೇವರ ಮಹಿಮೆ ಎನ್ನುವ ರೀತಿಯಲ್ಲಿ ಈವಾಗ ಗಿಡದಿಂದ ಕೊಯ್ದ ಸ್ಥಿತಿಯಲ್ಲಿ
ಇನ್ನೂ ಹಚ್ಚ ಹಸಿರಾಗಿ ಇದೆ.

ದೇವಸ್ಥಾನದ ಎದುರು ಮಹಾಬಲಿ ಪೀಠ ಅಗೆಯುವಾಗ ಈ ಕೌತುಕ ಕಂಡು ಬಂದಿದೆ. ಸುಮಾರು ವರ್ಷಗಳ ಹಿಂದೆ ಬ್ರಹ್ಮಕಲಶೋತ್ಸವ ನಡೆಯುವ ಸಂದರ್ಭದಲ್ಲಿ ಇದನ್ನು ಇಟ್ಟಿರಬಹುದು ಎನ್ನಲಾಗಿದೆ.

- Advertisement -

Related news

error: Content is protected !!