Wednesday, April 24, 2024
spot_imgspot_img
spot_imgspot_img

ಪುತ್ತೂರು: ಬೆಳ್ಳಿಪ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಿರುಷಷ್ಠಿ ಉತ್ಸವ

- Advertisement -G L Acharya panikkar
- Advertisement -
vtv vitla

ಪುತ್ತೂರು : ಬೆಳ್ಳಿಪ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಿರುಷಷ್ಠಿ ಉತ್ಸವವು ದಿನಾಂಕ 08-01-2022 ಮತ್ತು 09-01-2022ರಂದು ನಡೆಯಲಿದೆ.

ದಿನಾಂಕ 08-01-2022ನೇ ಶನಿವಾರ ಬೆಳಿಗ್ಗೆ ಗಂಟೆ 10-00ಕ್ಕೆ ಶ್ರೀ ಮಹಾಗಣಪತಿ ಹೋಮ ಮತ್ತು ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದ್ದು, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಬ್ರಹ್ಮಶ್ರೀ ವೇದಮೂರ್ತಿ ನಾಗೇಶ್ ತಂತ್ರಿಗಳವರ ನೇತೃತ್ವದಲ್ಲಿ ಕಿರುಷಷ್ಠಿ ಉತ್ಸವ ಮತ್ತು ಕಟ್ಟೆ ಪೂಜೆ ಜರಗಲಿದೆ.

ದಿನಾಂಕ 09-01-2022ನೇ ರವಿವಾರ ಬೆಳಿಗ್ಗೆ ಗಂಟೆ 9-00ಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ, ಮಹಾಪೂಜೆ, ಅನ್ನಸಂತರ್ಪಣೆ ಹಾಗೂ ಕೂಟೇಲಿನಿಂದ ಭಂಡಾರ ಬಂದು ಹುಲಿಚಾಮುಂಡಿ ನೇಮ ನಡೆಯಲಿದೆ. ಹಸಿರು ಹೊರಕಾಣಿಕೆಯು ದಿನಾಂಕ 07-01-2022ನೇ ಶುಕ್ರವಾರ ಸಾಯಂಕಾಲ ಗಂಟೆ 4.00ಕ್ಕೆ ಬೆಳ್ಳಿಪ್ಪಾಡಿ ಶ್ರೀ ಸಕಲೇಶ್ವರ ದೇವಸ್ಥಾನ ಮತ್ತು ಬೆಳ್ಳಿಪ್ಪಾಡಿ ಶ್ರೀ ಆದಿ ಮೊಗೇರ್ಕಳ ದೈವಸ್ಥಾನದಿಂದ ಶ್ರೀ ದೇವಸ್ಥಾನಕ್ಕೆ ಭವ್ಯ ಮೆರವಣಿಗೆಯೊಂದಿಗೆ ಹೊರಡಲಿರುವುದು.

ದಿನಾಂಕ 14-01-2022ನೇ ಶುಕ್ರವಾರ ಮಕರ ಸಂಕ್ರಮಣದ0ದು ಬೆಳ್ಳಿಪ್ಪಾಡಿ ಜತ್ತಿಬೆಟ್ಟು ಮಳುವೇಲು ಎಂಬಲ್ಲಿರುವ ಪುರಾತನ ವನಶಾಸ್ತವು(ಅಯ್ಯಪ್ಪ) ಪೂಜೆಯು ಜರಗಲಿರುವುದು. ದಿನಾಂಕ 14-01-2022ರವರೆಗೆ ಪ್ರತಿ ದಿನ ಬೆಳಿಗ್ಗೆ ಗಂಟೆ 5-00ಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಧನು ಪೂಜೆ ಜರಗಲಿರುವುದು. ದಿನಾಂಕ 02-01-2022ನೇ ರವಿವಾರ ಬೆ.ಗಂ. 9.00ಕ್ಕೆ ಚಪ್ಪರ ಮುಹೂರ್ತ ನಡೆದಿದೆ.

suvarna gold

vtv vitla
- Advertisement -

Related news

error: Content is protected !!