Sunday, June 14, 2026
spot_imgspot_img
spot_imgspot_img

ಪುತ್ತೂರು: ಲಯನ್ಸ್ ಜಿಲ್ಲೆ 317 ಡಿ, ಪ್ರಾಂತೀಯ 7 ಆದಿತ್ಯ ಸಮ್ಮೇಳನದ ಪ್ರೊಜೆಕ್ಟ್ “ಲಯನ್ಸ್ ಸೇವಾ ಭವನ”ಕ್ಕೆ ಅಳವಡಿಸಿದ ಟೈಲ್ಸ್ ಉದ್ಘಾಟನೆ

- Advertisement -
- Advertisement -

ಲಯನ್ಸ್ ಜಿಲ್ಲೆ 317 ಡಿ ಇದರ ಪ್ರಾಂತೀಯ 7 ಆದಿತ್ಯ ಸಮ್ಮೇಳನದ ಪ್ರೊಜೆಕ್ಟ್ ಲಯನ್ಸ್ ಸೇವಾ ಭವನ ಪುತ್ತೂರಿಗೆ ಸುಮಾರು 5 ಲಕ್ಷ ವೆಚ್ಚದಲ್ಲಿ ಟೈಲ್ಸ್ ಅಳವಡಿಸಿದ್ದು, ಕರ್ನಾಟಕ ಬ್ಯಾಂಕ್‌ನ ಡೆಪ್ಯುಟಿ ಪಿಆರ್‌ಒ ಸತ್ಯನಾರಾಯಣ್ PV ಉದ್ಘಾಟಿಸಿದರು.

ಈ ಸಭೆಯ ಅಧ್ಯಕ್ಷತೆಯನ್ನು ಪುತ್ತೂರು ಲಯನ್ಸ್ ಕ್ಲಬ್ ಅಧ್ಯಕ್ಷ ಕೇಶವ ನಾಯ್ಕ ವಹಿಸಿದ್ದರು. ಸಭೆಯಲ್ಲಿ ಪ್ರಾಂತೀಯ ಅಧ್ಯಕ್ಷ ಸುದರ್ಶನ್ ಪಡಿಯಾರ್, ಸಮ್ಮೇಳನ ಅಧ್ಯಕ್ಷ ಕೃಷ್ಣ ಪ್ರಶಾಂತ್, ಪ್ರಾಂತೀಯ ರಾಯಭಾರಿ ಅರವಿಂದ ಭಗವಾನ್, ವಲಯಾಧ್ಯಕ್ಷರುಗಳಾದ ಲ್ಯಾನ್ಸಿ ಮಸ್ಕರೇನ್ಹಸ್, ರಮೇಶ್ ರೈ , ನಿಕಟಪೂರ್ವ ಪ್ರಾಂತೀಯ ಅಧ್ಯಕ್ಷ ಹೇಮನಾಥ ಶೆಟ್ಟಿ ಕಾವು ಹಾಗೂ ಕಾರ್ಯದರ್ಶಿಗಳಾದ ಗಣೇಶ್ ಶೆಟ್ಟಿ ಹಾಗೂ ಪ್ರಾಂತೀಯ ಕೋಶಾಧಿಕಾರಿ ಓ.ಇ ಕೃಷ್ಣ, ರಝಾಕ್, ಲಯನ್ಸ್‌ನ ವಲಯ ನಿರ್ದೇಶಕರುಗಳಾದ ಸುಂದರ್ ಗೌಡ, ವಿಜಯ್ ಕುಮಾರ್ ರೈ, ಲಯನ್ಸ್ ಸದಸ್ಯರಾದ ಮೋಹನ್ ಕಟ್ಟೆ, ಜಯರಾಮ್ ಬಲ್ಲಾಳ್, ಹರೀಶ್ ಕುಮಾರ್, ದಿವಾಕರ್ ಆಳ್ವ ಮೊದಲಾದ ಲಯನ್ಸ್ ಸದಸ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕ.ಸ.ಪ ಪುತ್ತೂರಿನ ಅಧ್ಯಕ್ಷ ಕೊಡುಗೈದಾನಿ ಪುತ್ತೂರು ಉಮೇಶ್ ನಾಯಕ್ ಕೊಡಮಾಡಿದ ಸುಮಾರು 5000 ಮೊತ್ತದ ಪುಸ್ತಕವನ್ನು ಸಾಲುಮರ ಸರಕಾರಿ ಪ್ರಾಥಮಿಕ ಶಾಲೆಗೆ ಹಸ್ತಾಂತರಿಸಲಾಯಿತು. ಪ್ರಾಂತೀಯ ಸಮ್ಮೇಳನದ ಯಶಸ್ಸಿಗಾಗಿ ಹಾಗೂ ಪ್ರಾಜೆಕ್ಟ್‌ಗೆ ಸಹಕಾರ ಮಾಡಿದ ಕರ್ನಾಟಕ ಬ್ಯಾಂಕ್‌ನವರನ್ನು ಹಾಗೂ ಎಲ್ಲರನ್ನೂ ಅಭಿಂದಿಸಲಾಯಿತು.

- Advertisement -

Related news

error: Content is protected !!