Monday, May 6, 2024
spot_imgspot_img
spot_imgspot_img

ಶಿರಡಿಗೆ ಹೋಗುತ್ತಿದ್ದ ಬಸ್ಸು ಭೀಕರ ಅಪಘಾತ; 10 ಸಾವು

- Advertisement -G L Acharya panikkar
- Advertisement -

ಮುಂಬಯಿ : ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕನಿಷ್ಟ 10 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಬಸ್ಸೊಂದು ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಹತ್ತು ಮಂದಿ ಸಾವನ್ನಪ್ಪಿ ಹಲವರು ಗಾಯಗೊಂಡಿದ್ದಾರೆ. ಥಾಣೆ ಜಿಲ್ಲೆಯ ಅಂಬರ್‌ನಾಥ್‌ನಿಂದ ಹೊರಟಿದ್ದ ಖಾಸಗಿ ಐಷಾರಾಮಿ ಬಸ್ ಅಹಮದ್‌ನಗರ ಜಿಲ್ಲೆಯಲ್ಲಿರುವ ಪುಣ್ಯಕ್ಷೇತ್ರ ಶಿರಡಿಗೆ ತೆರಳುತ್ತಿತ್ತು. ಮುಂಬಯಿಯಿಂದ ಸುಮಾರು 180 ಕಿಮೀ ದೂರದಲ್ಲಿರುವ ನಾಸಿಕ್‌ನ ಸಿನ್ನಾ‌ರ್‍ ತಾಲೂಕಿನ ಪಥರೆಶಿವರ್‍ ಬಳಿ ಬೆಳಿಗ್ಗೆ 6.30ರ ಸುಮಾರಿಗೆ ಈ ಭೀಕರ ಅಪಘಾತ ಸಂಭವಿಸಿದೆ. ಬಸ್ ಅತಿ ವೇಗವಾಗಿ ಚಲಿಸುತ್ತಿತ್ತು ಎನ್ನಲಾಗಿದೆ.

ಪ್ರಾಥಮಿಕ ವರದಿಗಳ ಪ್ರಕಾರ, ಮೃತರಲ್ಲಿ ಏಳು ಮಹಿಳೆಯರು, ಇಬ್ಬರು ಸಣ್ಣ ಹುಡುಗರು ಮತ್ತು ಒಬ್ಬ ಪುರುಷ ಸೇರಿದ್ದಾರೆ. ಗಾಯಾಳುಗಳನ್ನು ಸಿನ್ನಾ‌ರ್‍ ಗ್ರಾಮಾಂತರ ಆಸ್ಪತ್ರೆ ಮತ್ತು ಸಿನ್ನಾರ್‌ನಲ್ಲಿರುವ ಯಶವಂತ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಗೆ ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಮೃತರ ಕುಟುಂಬ ಸದಸ್ಯರಿಗೆ ತಲಾ ರೂ. 5 ಲಕ್ಷ ಧನಸಹಾಯ ಘೋಷಿಸಿದ್ದಾರೆ. ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಅವರ ಕಚೇರಿಯ ಪ್ರಕಟಣೆ ತಿಳಿಸಿದೆ. ಶ್ರೀ ಶಿಂಧೆ ಅವರು ನಾಸಿಕ್ ವಿಭಾಗೀಯ ಆಯುಕ್ತರೊಂದಿಗೆ ಮಾತನಾಡಿ ಗಾಯಾಳುಗಳನ್ನು ತಕ್ಷಣವೇ ಚಿಕಿತ್ಸೆಗಾಗಿ ನಾಸಿಕ್ ಮತ್ತು ಶಿರಡಿಗೆ ಸ್ಥಳಾಂತರಿಸಲು ಮತ್ತು ಅಪಘಾತದ ಕಾರಣಗಳ ಬಗ್ಗೆ ವಿಚಾರಣೆ ನಡೆಸುವಂತೆ ಸೂಚಿಸಿದ್ದಾರೆ.

- Advertisement -

Related news

error: Content is protected !!