Saturday, September 5, 2026
spot_imgspot_img
spot_imgspot_img

ಪುತ್ತೂರು: ವಾಹನ ಸವಾರರಿಗೆ ಅಪಾಯಕಾರಿಯಾಗಿದ್ದ ಬೋರ್ಡ್ ತೆರವು

- Advertisement -
- Advertisement -

ಪುತ್ತೂರು ನಗರದ ಮಧ್ಯಭಾಗದಲ್ಲಿ ವಾಹನ ಸವಾರರಿಗೆ ಅಪಾಯಕಾರಿಯಾಗಿದ್ದ ಫ್ಲೆಕ್ಸ್’ಗಳನ್ನು ಇದೀಗ ತೆರವುಗೊಳಿಸಲಾಗಿದೆ. ಪುತ್ತೂರು ಮಹಿಳಾ ಪೋಲೀಸ್ ಠಾಣೆ ಬಳಿಯಿರುವ ಫೆಡರಲ್ ಬ್ಯಾಂಕ್ ಗೆ ಸಂ ಬಂಧಪಟ್ಟ ಎಟಿಎಂ ಕೇಂದ್ರದ ಬೋರ್ಡ್ ಇದಾಗಿದ್ದು, ಎಟಿಎಂ ಗೆ ಬರುವ ಗ್ರಾಹಕರು ಪಾರ್ಕಿಂಗ್ ನಡೆಸುವ ಜಾಗದಲ್ಲೇ ಈ ಬೋರ್ಡ್ ಹಾಕಲಾಗಿತ್ತು.

ಇದು ವಾಹನ ಸವಾರರಿಗೆ ತಕ್ಷಣಕ್ಕೆ ಗೋಚರವಾಗದೇ ಇದ್ದ ಕಾರಣ ಹಲವು ದ್ವಿಚಕ್ರ ವಾಹನ ಸವಾರರ ತಲೆಗೆ ಈ ಬೋರ್ಡ್ ನಿಂದಾಗಿ ಗಾಯಗಳಾಗಿದ್ದರು. ಇದೀಗ ಬ್ಯಾಂಕ್ ಅಧಿಕಾರಿಗಳು ಅಪಾಯಕಾರಿ ಬೋರ್ಡ್ ತೆರವುಗೊಳಿಸಿದ್ದಾರೆ.

- Advertisement -

Related news

error: Content is protected !!