Thursday, May 2, 2024
spot_imgspot_img
spot_imgspot_img

ಪುತ್ತೂರು: ಶಾಲೆಗೆಂದು ತೆರಳಿದ್ದ 30ಕ್ಕೂ ಅಧಿಕ ಮಕ್ಕಳು ಶಾಲೆಗೆ ಗೈರು; ಯಾರಿಗೂ ತಿಳಿಸದೇ ಪ್ರವಾಸ ಕರೆದುಕೊಂಡು ಹೋದ ಶಿಕ್ಷಕಿ..!!

- Advertisement -G L Acharya panikkar
- Advertisement -

ಪುತ್ತೂರು: ಮನೆಯಿಂದ ಶಾಲೆಗೆ ಹೊರಟ ವಿದ್ಯಾರ್ಥಿಗಳು ಶಾಲೆಗೆ ಹೋಗದೆ ಗೊಂದಲ ಸೃಷ್ಟಿಯಾಗಿದ್ದು ಪ್ರಕರಣ ಠಾಣೆ ಮೆಟ್ಟಿಲೇರಿದೆ.

ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ಗ್ರಾಮದ ಬೀರಹಿತ್ತು ಎಂಬಲ್ಲಿನ ದ. ಕ. ಜಿ. ಪಂ. ಹಿರಿಯ ಪ್ರಾಥಮಿಕ ಶಾಲೆಯ 30ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಶಾಲೆಗೆ ಬಾರದಿರುವುದು ಬೆಳಕಿಗೆ ಬರುತ್ತಿದ್ದಂತೆ ಪೋಷಕರು ಆತಂಕಗೊಂಡಿದ್ದಾರೆ.

ಚಿಕ್ಕಮುಡ್ನೂರು ದ. ಕ. ಜಿ. ಪಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಟ್ಟು 58 ವಿದ್ಯಾರ್ಥಿಗಳಿದ್ದು, ಶನಿವಾರ ಶಾಲೆಗೆ 38 ರಷ್ಟು ವಿದ್ಯಾರ್ಥಿಗಳು ಗೈರಾಗಿದ್ದರು. ಸ್ಥಳೀಯವಾಗಿ ಜಾತ್ರೆ ನಡೆಯುತ್ತಿದ್ದು, ಕೆಲವು ವಿದ್ಯಾರ್ಥಿಗಳು ಜಾತ್ರೆಯ ಕಾರಣಕ್ಕೆ ರಜಾ ಹಾಕಿರುವ ಸಾಧ್ಯತೆ ಇದೆ. ಆದರೆ ಇಷ್ಟೊಂದು ಮಕ್ಕಳು ರಜಾ ಹೇಗೆ ಎಂಬ ಬಗ್ಗೆ ಮಾತುಗಳು ಪೋಷಕರವರೆಗೆ ತಲುಪಿದ್ದು, ವಿದ್ಯಾರ್ಥಿಗಳು ಇಲ್ಲದ ಮಾಹಿತಿ ತಿಳಿಯುತ್ತಿದ್ದಂತೆ ಶಾಲೆಗೆ ಪೊಷಕರು ಹಾಗೂ ಸ್ಥಳೀಯ ಮುಖಂಡರು ಆಗಮಿಸಿ ಮಾಹಿತಿ ಪಡೆಯುವ ಕಾರ್ಯ ಮಾಡಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿವರೆಗೆ ಈ ಮಾಹಿತಿ ತಲುಪಿ, ಅವರು ಶಾಲೆಗೆ ಭೇಟಿ ನೀಡಿದ್ದಾರೆ.

ಶಾಲೆಯಲ್ಲಿ ಸರ್ಕಾರದಿಂದ ಇಬ್ಬರು ಶಿಕ್ಷಕರಿದ್ದು, ಮುಖ್ಯ ಶಿಕ್ಷಕರು ಹಾಗೂ ಅತಿಥಿ ಶಿಕ್ಷಕಿ ಹಾರಾಡಿಯಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಭಾಗಿಯಾಗಿದ್ದರು. ಇನ್ನೋರ್ವ ಶಿಕ್ಷಕಿ ಭಾರತಿ ನಾಪತ್ತೆಯಾಗಿದ್ದು, ದೂರವಾಣಿಯೂ ಸ್ವಿಚ್ ಆಪ್ ಮಾಡಿದ್ದಾರೆನ್ನಲಾಗಿದೆ. ಓರ್ವ ಅತಿಥಿ ಶಿಕ್ಷಕಿ ಹಾಗೂ ಮೂವರು ಅಕ್ಷರ ದಾಸೋಹ ಸಿಬ್ಬಂದಿ ಶಾಲೆಯಲ್ಲಿದ್ದು, 58 ವಿದ್ಯಾರ್ಥಿಗಳಿಗೂ ಊಟ ಸಿದ್ದ ಪಡಿಸಲಾಗಿತ್ತು.

ಶಾಲೆಯಲ್ಲಿ ಚೀಟಿ ಒಂದು ಪತ್ತೆಯಾಗಿದ್ದು, ಅದರಲ್ಲಿ ಪುತ್ತೂರು ಆಸುಪಾಸಿನ ಕೆಲವೊಂದು ಸ್ಥಳಗಳನ್ನು ಉಲ್ಲೇಖಿಸಲಾಗಿದೆ. ಇದರಲ್ಲಿ ಶಾಲೆಗೆ ಬರುವ ಸಂದರ್ಭ ಬಣ್ಣದ ಅಂಗಿಯನ್ನು ಹಾಕಿಕೊಂಡು ಜತೆಗೆ ೧೦೦ರೂ ಹಿಡಿದು ಬರುವಂತೆ ಸೂಚಿಸಲಾಗಿತ್ತೆನ್ನಲಾಗಿದೆ. ಶಿಕ್ಷಕಿಯ ಜೊತೆ ಮಕ್ಕಳು ಪ್ರವಾಸಕ್ಕೆ ತೆರಳಿದ್ದಾರೆ ಎಂದು ಪೋಷಕರು ಮತ್ತು ಸಾರ್ವಜನಿಕರು ಆರೋಪಿಸಿದ್ದಾರೆ.

ಶಾಲೆಯ ಮುಖ್ಯ ಶಿಕ್ಷಕಿಗಾಗಲೀ, ಎಸ್. ಡಿ.ಎಂ.ಸಿ. ಗಾಗಲೀ ಮಾಹಿತಿ ನೀಡದೆ ಶಿಕ್ಷಕಿಯ ಜತೆಗೆ ವಿದ್ಯಾರ್ಥಿಗಳು ನಾಪತ್ತೆಯಾಗಿರುವುದು ಎಲ್ಲರ ಆತಂಕಕ್ಕೆ ಕಾರಣವಾಗಿದೆ.

- Advertisement -

Related news

error: Content is protected !!