Thursday, June 18, 2026
spot_imgspot_img
spot_imgspot_img

ಪುತ್ತೂರು: ಹಿಂದೂ ಆಟೋ ಚಾಲಕನ ಮನೆಯಲ್ಲಿ ಮುಸ್ಲಿಂ ಮಹಿಳೆ.!

- Advertisement -
- Advertisement -

ಪುತ್ತೂರು: ಕೊಡಿಪ್ಪಾಡಿ ಸಮೀಪ ಹಿಂದೂ ಮನೆಯಲ್ಲಿ ಮುಸ್ಲಿಂ ಮಹಿಳೆ ಇರುವ ಕುರಿತು ಮಾಹಿತಿಯಂತೆ ಸ್ಥಳದಲ್ಲಿ ಎರಡೂ ಕೋಮಿನವರು ಜಮಾಯಿಸಿದ ಘಟನೆ ನಡೆದಿದೆ.

ಆಟೋ ಚಾಲಕರೊಬ್ಬರು ಮನೆಯ ಎದುರು ಬೀಗ ಹಾಕಿ ಹಿಂಬಾಗಿಲ ಮೂಲಕ ಮುಸ್ಲಿಂ ಮಹಿಳೆಯನ್ನು ಇರಿಸಿಕೊಂಡಿದ್ದಾರೆಂಬ ಮಾಹಿತಿ ಹರಿದಾಡುತ್ತಿದ್ದಂತೆ ಸ್ಥಳದಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯದವರು ಜಮಾಯಿಸಿದರು, ಮಾಹಿತಿ ಅರಿತ ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ಮನೆಗೆ ಬೀಗ ಹಾಕಿದ್ದು, ಮನೆಯೊಳಗೆ ಯಾರು ಇಲ್ಲ ಎಂದು ತಿಳಿದು ಸ್ಥಳದಲ್ಲಿ ಜಮಾಯಿಸಿದವರನ್ನು ಚದುರಿಸಿದ್ದಾರೆ. ಪೊಲೀಸರು ತೆರಳಿದ ಬಳಿಕ ಮನೆಯೊಳಗಿದ್ದ ಮಹಿಳೆ ಮತ್ತು ಚಾಲಕ ಹಿಂಬಾಗಿಲಿನಿಂದ ಪರಾರಿಯಾಗಿದ್ದಾರೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ. ಜೂ. 2ರಂದು ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!