Sunday, April 28, 2024
spot_imgspot_img
spot_imgspot_img

ಪುತ್ತೂರು: 21 ವರ್ಷಗಳ ಹಿಂದಿನ ಕಳ್ಳತನ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿ ಅಂದರ್‍..!!

- Advertisement -G L Acharya panikkar
- Advertisement -

ಪುತ್ತೂರು: ಸುಮಾರು 21 ವರ್ಷಗಳ ಹಿಂದೆ ಕಾರು ಬಾಡಿಗೆಗೆ ಪಡೆಡು ಹಲವಾರು ಕಡೆ ಸುತ್ತಾಡಿ ಕಾರು ಚಾಲಕನಿಗೆ ಬಾಡಿಗೆ ಕೊಡದ ಚಾಲಕನಿಲ್ಲದ ವೇಳೆ ಕಾರನ್ನು ಕದ್ದು ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದ ಇಬ್ಬರು ಆರೋಪಿಗಳು ಜಾಮೀನು ಪಡೆದು ತಲೆಮರೆಸಿಕೊಂಡಿದ್ದು,ಓರ್ವನನ್ನು ಈ ಮೊದಲೇ ಬಂಧಿಸಲಾಗಿದ್ದು, ಮತ್ತೋರ್ವ ಆರೋಪಿಯನ್ನು ಆ.16 ರಂದು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಮಂಗಳೂರು ಮೂಲದ ಸುಧೀರ್ ಪ್ರಭು ಎಂದು ಗುರುತಿಸಲಾಗಿದೆ.

2001 ರಲ್ಲಿ ಆರೋಪಿಗಳು ಮಂಗಳೂರು ಹಂಪನಕಟ್ಟೆಯಿಂದ ಜಯಂತ ಎಂಬವರ ಕಾರು ಬಾಡಿಗೆಗೆ ಪಡೆದು ಆರೋಪಿಗಳಾದ ಸುರೇಶ್ ಪ್ರಭು ಮತ್ತು ಬಿ.ಎಂ ಹನೀಫ್ ರವರುಗಳು ಬಾಡಿಗೆಗೆ ಪಡೆದು ಸಕಲೇಶ್ ಪುರ, ಹಾಸನ ಇತ್ಯಾದಿ ಕಡೆಗಳಲ್ಲಿ ಟಿಂಬರ್ ವ್ಯಾಪಾರದ ವಿಚಾರವಾಗಿ ಸುತ್ತಾಡಿ ಪುತ್ತೂರಿಗೆ ಬಂದು ಪುತ್ತೂರಿನ ಟೂರಿಸ್ಟ್ ಹೋಂ ನಲ್ಲಿ ತಂಗಿ ಬಾಡಿಗೆ ಕಾರನ್ನು ಅಲ್ಲಿಯೇ ಪಾರ್ಕ್ ಮಾಡಿಸಿ ಚಾಲಕನಿಗೆ ಬಾಡಿಗೆ ಕೊಡದೇ ಚಾಲಕನಿಗೆ ಅಲ್ಲಿಯೇ ತಂಗಲು ಹೇಳಿ ಅದೇ ದಿನ ಸಂಜೆ ಚಾಲಕ ಇಲ್ಲದ ಸಮಯದಲ್ಲಿ ಕಾರನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ನಂತರ ಕಳವು ಪ್ರಕರಣ ದಾಖಲಾಗಿ ಆರೋಪಿಗಳು ದಸ್ತಗಿರಿಯಾಗಿ ನ್ಯಾಯಾಂಗ ಬಂಧನವಾಗಿರುವುದಾಗಿದೆ ನಂತರ ಜಾಮೀನು ಪಡೆದುಕೊಂಡ 2 ಜನ ಆರೋಪಿಗಳು ತಲೆ ಮರೆಸಿಕೊಂಡಿದ್ದು, ಆರೋಪಿಯಾದ ಹನೀಫ್ ನನ್ನು 2018 ರಂದು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿ ಸುರೇಶ್ ಪ್ರಭು ರನ್ನು ಆ.16ರಂದು ಬಂಧಿಸಿ ದಸ್ತಗಿರಿ ಮಾಡಲಾಗಿದೆ.

ಕಾರ್ಯಾಚರಣೆಯಲ್ಲಿ ದ.ಕ.ಜಿಲ್ಲಾ ಪೊಲೀಸ್ ಅಧೀಕ್ಷಕರು, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ದ.ಕ ಜಿಲ್ಲೆ ಮಂಗಳೂರು ಮತ್ತು ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರ ಮಾರ್ಗದರ್ಶನದಂತೆ ಪುತ್ತೂರು ನಗರ ಠಾಣೆಯ ಪೊಲೀಸ್ ನಿರೀಕ್ಷಕರಾದ ಸುನೀಲ್ ಕುಮಾರ್ ಮತ್ತು ಪೊಲೀಸ್ ಉಪನಿರೀಕ್ಷಕರಾದ ಶ್ರೀಕಾಂತ್ ರಾಥೋಡ್ ರವರ ಆದೇಶದಂತೆ ಎಎಸ್‌ಐ ಚಂದ್ರ ಪರಮೇಶ್ವರ ರವರು ಪಾಲ್ಗೊಂಡಿದ್ದರು.

- Advertisement -

Related news

error: Content is protected !!