Saturday, August 8, 2026
spot_imgspot_img
spot_imgspot_img

ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳ ಮನೆಯನ್ನು ನೆಲಸಮಗೊಳಿಸಿದ ಜಿಲ್ಲಾಡಳಿತ

- Advertisement -
- Advertisement -

ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಆರೋಪದಲ್ಲಿ ಐದು ಕುಟುಂಬಗಳ ನಿವಾಸಗಳನ್ನು ನೆಲಸಮಗೊಳಿಸಿದ ಘಟನೆ ನಡೆದಿದೆ. ಅಸ್ಸಾಂನ ನಾಗಾಂವ್ ಜಿಲ್ಲೆಯಲ್ಲಿ ಶನಿವಾರ ಪೊಲೀಸ್ ಕಸ್ಟಡಿಯಲ್ಲಿ ಕ್ರಿಮಿನಲ್​ ಹಿನ್ನೆಲೆಯುಳ್ಳ ವ್ಯಕ್ತಿ ಸಾವನ್ನಪ್ಪಿದ್ದಾನೆ. ಇದರಿಂದ ಕೆರಳಿದ ತಂಡ ಆಕ್ರೋಶಗೊಂಡು ಬಟದ್ರವಾ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ್ದಾರೆ.

ಈ ಘಟನೆಗೆ ಪ್ರತಿಯಾಗಿ ದಾಳಿನಡೆಸಿದ ಐದು ಕುಟುಂಬಗಳ ನಿವಾಸವನ್ನು ನಾಗಾವ್ ಆಡಳಿತವು ನೆಲಸಮಗೊಳಿಸಿದೆ. ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದವರಲ್ಲಿ ಮೂವರನ್ನು ಬಂಧಿಸಲಾಗಿದೆ. ದಾಳಿಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಲೀನಾ ಡೋಲಿ ಹೇಳಿದ್ದಾರೆ.

ಕಸ್ಟಡಿಯಲ್ಲಿದ್ದ ಸಫೀಕುಲ್ ಇಸ್ಲಾಂನ ಮೃತ ವ್ಯಕ್ತಿ. ಈ ಕುರಿತಂತೆ ಪ್ರತಿಕ್ರಿಯಿಸಿದ ಡಿಜಿಪಿ ಠಾಣೆ ಮೇಲೆ ನಡೆದ ದಾಳಿಯು ನಿಯೋಜಿತ ಕೃತವಾಗಿದೆ. ದುಷ್ಕರ್ಮಿಗಳು ಕಾನೂನನ್ನು ತಮ್ಮ ಕೈಗೆ ಎತ್ತಿಕೊಂಡು ದಾಳಿ ನಡೆಸಿದ್ದಾರೆ. ಅಲ್ಲದೇ, ಮೃತ ವ್ಯಕ್ತಿ ಮತ್ತು ಆತನ ಸಂಬಂಧಿಕರು ಕ್ರಿಮಿನಲ್​ ಹಿನ್ನೆಲೆಯುಳ್ಳವರಾಗಿದ್ದಾರೆ ಎನ್ನಲಾಗಿದೆ. ಇವರ ದಾಖಲೆಗಳು ಕೂಡ ಠಾಣೆಯೊಳಗೆ ಇದ್ದವು. ಠಾಣೆಗೆ ಬೆಂಕಿ ಹಚ್ಚಿದ ಪರಿಣಾಮ ಠಾಣಾ ವ್ಯಾಪ್ತಿಯಲ್ಲಿದ್ದ ದಾಖಲೆಗಳು, ಪುರಾವೆಗಳು ಎಲ್ಲಾ ಸುಟ್ಟುಹೋಗಿವೆ. ದುಷ್ಕರ್ಮಿಗಳು ತಾವು ಪಾರಾಗಿದ್ದೇವೆ ಎಂದು ಭಾವಿಸಬಾರದು. ಯಾರೂ ಕೂಡ ಕಾನೂನಿನಿಂದ ತಪ್ಪಿಸಿಕೊಳ್ಳಲು ಬಿಡುವುದಿಲ್ಲ ಎಂದು ಡಿಜಿಪಿ ಎಚ್ಚರಿಕೆ ನೀಡಿದ್ದಾರೆ.

- Advertisement -

Related news

error: Content is protected !!