Saturday, April 27, 2024
spot_imgspot_img
spot_imgspot_img

‘ಭಾರತ ಪ್ರಜಾಪ್ರಭುತ್ವದ ತಾಯಿ’, ಮ್ಯೂನಿಚ್​ನಲ್ಲಿ ಭಾರತದ ಪ್ರಜಾಪ್ರಭುತ್ವ ಕುರಿತು ಮೋದಿ ಭಾಷಣ

- Advertisement -G L Acharya panikkar
- Advertisement -

ನವದೆಹಲಿ: ಜರ್ಮನಿ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮ್ಯೂನಿಚ್​ನಲ್ಲಿ ಎನ್​ಆರ್​ಐಗಳನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ. ಭಾಷಣದಲ್ಲಿ 1975ರ ತುರ್ತುಪರಿಸ್ಥಿತಿ ಬಗ್ಗೆ ಪ್ರಸ್ತಾಪಿಸಿದ್ದಾರೆ. ‘ಭಾರತ ಪ್ರಜಾಪ್ರಭುತ್ವದ ತಾಯಿ’, ಪ್ರಜಾಪ್ರಭುತ್ವ ವಿರೋಧಿಗಳಿಗೆ ಜನರು ತಕ್ಕ ಪಾಠ ಕಲಿಸಿದ್ದಾರೆ ಎಂದು ಜರ್ಮನಿಯ ಮ್ಯೂನಿಚ್​ನಲ್ಲೂ ಕಾಂಗ್ರೆಸ್​ ವಿರುದ್ಧ ಮೋದಿ ವಾಗ್ದಾಳಿ ನಡೆಸಿದ್ದಾರೆ.

ಭಾರತ ಇಂದು ಕೈಗಾರಿಕೆ, ಡಿಜಿಟಲ್​ ಎಕಾನಮಿಯಲ್ಲಿ ಅಗ್ರಸ್ಥಾನದಲ್ಲಿದೆ. ಕೈಗಾರಿಕಾ ಕ್ಷೇತ್ರವನ್ನು ಭಾರತ ಮುನ್ನಡೆಸುತ್ತಿದೆ. ಭಾರತ ದೇಶ ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿ ಹೊಂದುತ್ತಿದೆ. ಭಾರತ ಸಂಪೂರ್ಣ ಡಿಜಿಟಲ್​ ಆಗಿದೆ. ಭಾರತದ ಶಕ್ತಿಯನ್ನು ವಿಶ್ವ ಅರ್ಥಮಾಡಿಕೊಂಡಿದೆ. ಭಾರತ ಪ್ರತಿದಿನವೂ ಹೊಸ ದಾಖಲೆ ಬರೆಯುತ್ತಿದೆ ಎಂದರು.

ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಜರ್ಮನಿಯ ಮ್ಯೂನಿಚ್‌ಗೆ ಆಗಮಿಸಿದ್ದು ಮ್ಯೂನಿಚ್‌ನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. “ಜೂನ್ 26 ಎನ್ನುವುದು ಪ್ರಜಾಪ್ರಭುತ್ವವನ್ನು ತುಳಿದು ದಮನ ಮಾಡಿದ ದಿನವನ್ನು ನೆನಪಿಸುತ್ತದೆ” ನಾವು ಭಾರತೀಯರು ನಮ್ಮ ಪ್ರಜಾಪ್ರಭುತ್ವದ ಬಗ್ಗೆ ಹೆಮ್ಮೆಪಡುತ್ತೇವೆ. ಇಂದು ಭಾರತ ಪ್ರಜಾಪ್ರಭುತ್ವದ ತಾಯಿ ಎಂದು ಹೆಮ್ಮೆಯಿಂದ ಹೇಳಬಹುದು. ಸಂಸ್ಕೃತಿ, ಆಹಾರ, ಬಟ್ಟೆ, ಸಂಗೀತ ಮತ್ತು ಸಂಪ್ರದಾಯಗಳ ವೈವಿಧ್ಯತೆಯು ನಮ್ಮ ಪ್ರಜಾಪ್ರಭುತ್ವವನ್ನು ರೋಮಾಂಚಕಗೊಳಿಸುತ್ತದೆ”

4ನೇ ಕೈಗಾರಿಕಾ ಕ್ರಾಂತಿಯನ್ನು ಭಾರತ ಮುನ್ನಡೆಸುವುದು. ಕಳೆದ ಶತಮಾನದಲ್ಲಿ, ಜರ್ಮನಿ ಮತ್ತು ಇತರ ದೇಶಗಳು ಕೈಗಾರಿಕಾ ಕ್ರಾಂತಿಯ ಲಾಭವನ್ನು ಪಡೆದುಕೊಂಡವು. ಆಗ ಭಾರತವು ಗುಲಾಮವಾಗಿತ್ತು, ಅದಕ್ಕಾಗಿಯೇ ಅದು ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗಲಿಲ್ಲ. ಆದರೆ ಈಗ ಭಾರತವು 4ನೇ ಕೈಗಾರಿಕಾ ಕ್ರಾಂತಿಯಲ್ಲಿ ಹಿಂದೆ ಉಳಿಯುವುದಿಲ್ಲ, ಅದು ಈಗ ಜಗತ್ತನ್ನು ಮುನ್ನಡೆಸುತ್ತಿದೆ ಎಂದು ನರೇಂದ್ರ ಮೋದಿಯವರು ಹೇಳಿದ್ದಾರೆ.

- Advertisement -

Related news

error: Content is protected !!