Saturday, July 25, 2026
spot_imgspot_img
spot_imgspot_img

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ; ಎನ್.ಐ.ಎ ಅಧಿಕಾರಿಗಳಿಗೆ ಸಹಕರಿಸಲು 9 ಮಂದಿ ಪೊಲೀಸರ ನೇಮಕ; ವಿಟ್ಲ ಠಾಣೆಯ ಇಬ್ಬರು ಪೊಲೀಸರು ಆಯ್ಕೆ

- Advertisement -
- Advertisement -

ಪುತ್ತೂರು: ಜು.26ರಂದು ಹತ್ಯೆಯಾದ ಪ್ರವೀಣ್ ನೆಟ್ಟಾರು ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಗಿದ್ದು ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ ಕೈಗೆತ್ತಿಕೊಂಡಿದೆ. ಇದೀಗ ಎನ್.ಐ.ಎಗೆ ಸಹಕರಿಸಲು ಒಂಭತ್ತು ಮಂದಿ ಪೊಲೀಸರನ್ನು ನೇಮಿಸಿ ಎಡಿಜಿಪಿ ಡಾ.ಎಮ್.ಎ ಸಲೀಂ ಆದೇಶ ಹೊರಡಿಸಿದ್ದಾರೆ.

ಪುತ್ತೂರು ಗ್ರಾಮಾಂತರ ಠಾಣೆಯ ಪಿ.ಎಸ್.ಐ ಉದಯ ರವಿ, ಕಾರ್ಕಳ ಗ್ರಾಮಾಂತರ ಠಾಣಾ ಪಿಎಸ್‌ಐ ಪ್ರಸನ್ನ ವೇಣೂರು ಠಾಣೆಯ ಹೆಡ್ ಪ್ರವೀಣ್.ಎಮ್, ಪುತ್ತೂರು ಗ್ರಾಮಾಂತರ ಠಾಣೆಯ ಹೆಡ್ ಕಾನ್ನೋಬಲ್ ಅದ್ರಾಮ ಹಾಗೂ ಪ್ರವೀಣ್.ರೈ, ವಿಟ್ಲ ಪೊಲೀಸ್ ಠಾಣೆಯ ಹೆಡ್ ಕಾನ್ಸಿಬಲ್ ಉದಯ.ರೈ, ಬಂಟ್ವಾಳ ಸಂಚಾರಿ ಠಾಣೆಯ ವಿವೇಕ್.ರೈ ಮತ್ತು ಕುಮಾರ್, ಸುಳ್ಯ ಪೊಲೀಸ್ ಠಾಣೆಯ ಕಾನ್ಸೆಬಲ್ ಅನಿಲ್ ತಂಡವನ್ನು ಒಂದು ತಿಂಗಳವರೆಗೆ ಎ ಓಓಡಿ ಮೂಲಕ ನೇಮಕವಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೋನಾವಣೆ ಖಚಿತಪಡಿಸಿದ್ದಾರೆ.

- Advertisement -

Related news

error: Content is protected !!