Sunday, June 7, 2026
spot_imgspot_img
spot_imgspot_img

ಪ್ರಾಂಶುಪಾಲರಿಗೆ ಹನಿ ಟ್ರ್ಯಾಪ್; ಯುವತಿ ಸಹಿತ ಇಡೀ ಗ್ಯಾಂಗ್‌ ಅರೆಸ್ಟ್

- Advertisement -
- Advertisement -

ಬೆಂಗಳೂರಿನಲ್ಲಿ ಹನಿ ಟ್ರ್ಯಾಪ್ ಮಾಡುತ್ತಿದ್ದ ತಂಡವನ್ನು ಅರೆಸ್ಟ್ ಮಾಡಲಾಗಿದೆ. ಆರೋಪಿಗಳಾದ ತ್ರಿಶಾ, ಮುತ್ತು, ಪೆದ್ದರೆಡ್ಡಿ ಮತ್ತು ದಾಮೋದರ್ ಎಂಬುವವರು ಸೆರೆಯಾಗಿದ್ದಾರೆ. ಅರೆಸ್ಟ್ ಅಗಿರುವ ಗ್ಯಾಂಗ್ ಪ್ರಾಂಶುಪಾಲರಿಗೆ ಹನಿ ಟ್ರಾಪ್ ಮಾಡಿತ್ತು. ನಂತರ ಅವರು ನಂದಿನಿ ಲೇಔಟ್ ಠಾಣೆಗೆ ದೂರು ನೀಡಿದ್ದರು. ಸದ್ಯ ಅರೋಪಿಗಳನ್ನು ನಂದಿನಿ ಲೇಔಟ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಆರೋಪಿಗಳು ಫೋನ್‌ನಲ್ಲಿ ಮಾತನಾಡಿ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡಿದ್ದರು. ಮನೆಗೆ ಹೋದಾಗ ನಕಲಿ ಪ್ರೆಸ್ ಕಾರ್ಡ್ ತೋರಿಸಿ ಬೆದರಿಕೆ ಹಾಕಿದ್ದರು. 5 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟು 3 ಲಕ್ಷ ಪಡೆದು ಕಳಿಸಿದ್ದರು. ನಂದಿನಿ ಲೇಔಟ್‌ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಸದರಿ ಪ್ರಿನ್ಸಿಪಾಲ್ ಬಾರ್ ಲೈಸೆನ್ಸ್ ಪಡೆದುಕೊಳ್ಳಲು ಪ್ರಯತ್ನ ಮಾಡ್ತಿದ್ದರು. ಇದನ್ನೆ ಬಳಸಿಕೊಂಡು ಅರೋಪಿಗಳು ಹನಿ ಟ್ರಾಪ್​ ಮಾಡಲು ಮುಂದಾಗಿದ್ದರು. ಲೈಸೆನ್ಸ್ ಕೊಡಿಸುವುದಾಗಿ ಪರಿಚಯ ಮಾಡಿಕೊಂಡಿದ್ದರು. ನಂತರ ಫೋನ್ ನಲ್ಲಿ ಮಾತನಾಡಿ ಸಲುಗೆ ಪಡೆದು ಪ್ಲಾನ್ ಮಾಡಿದ್ದರು ಎನ್ನಲಾಗಿದೆ.

- Advertisement -

Related news

error: Content is protected !!