Tuesday, May 7, 2024
spot_imgspot_img
spot_imgspot_img

ಬಂಟ್ವಾಳ: ಆರೋಗ್ಯ ಇಲಾಖೆ, ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ(ರಿ) ಬಾಳ್ತಿಲ ಹಾಗೂ ರೋಟರಿ ಕ್ಲಬ್ ಮೊಡಂಕಾಪು ಇದರ ಸಹಯೋಗದಲ್ಲಿ “ಕ್ಯಾನ್ಸರ್ ಜಾಗೃತಿ ಕಾರ್ಯಗಾರ”

- Advertisement -G L Acharya panikkar
- Advertisement -

ಆರೋಗ್ಯ ಇಲಾಖೆ ಬಂಟ್ವಾಳ, ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ(ರಿ) ಬಾಳ್ತಿಲ ಮತ್ತು ರೋಟರಿ ಕ್ಲಬ್ ಮೊಡಂಕಾಪು ಇದರ ಸಹಯೋಗದೊಂದಿಗೆ, ಲಯನ್ಸ್ ಕ್ಲಬ್ ಬಿ ಸಿ ರೋಡ್ ನಲ್ಲಿ “ಕ್ಯಾನ್ಸರ್ ಜಾಗೃತಿ ಕಾರ್ಯಗಾರ” ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ತಾಲೂಕು ಆರೋಗ್ಯಾಧಿಕಾರಿ ಡಾಕ್ಟರ್ ಜಯಪ್ರಕಾಶ್ ಮಾಡಿ ಕಾರ್ಯಕ್ರಮದ ಸದುಪಯೋಗ ಎಲ್ಲರಿಗೂ ಪಡಕೊಳ್ಳಿ ಎಂದು ಶುಭಹಾರೈಸಿದರು.

vtv vitla
vtv vitla

ಮುಖ್ಯ ಅತಿಥಿಗಳಾಗಿ ಹಿರಿಯ ದಂತ ಆರೋಗ್ಯಧಿಕಾರಿ ಡಾಕ್ಟರ್ ಆರತಿ ಕುಲ್ಕರ್ಣಿ, ವಕೀಲರು, ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ(ರಿ) ಇದರ ಸಂಸ್ಥಾಪಕರು, ಜೆಸಿಐ ಜೋಡುಮಾರ್ಗ ನೇತ್ರಾತಿಯ ನಿಕಟ ಪೂರ್ವ ಅಧ್ಯಕ್ಷರು ಶೈಲಜಾ ರಾಜೇಶ್, ರೋಟರಿ ಕ್ಲಬ್ ಮೋಡಂಕಾಪು ನಿಯೋಜಿತ ಅಧ್ಯಕ್ಷರು ಪ್ರೊ.ಡಾಕ್ಟರ್.ಗೋವರ್ಧನ್ ರಾವ್, ಕಾರ್ಯದರ್ಶಿ ಪೀ ಯೇ ರಹೀಂ, ಹಿರಿಯ ಆರೋಗ್ಯ ನಿರೀಕ್ಷಿಣಾಧಿಕಾರಿ ಶ್ರೀಮತಿ ಕುಸುಮ ಉಪಸ್ಥಿತರಿದ್ದರು.

ಸಂಪನ್ಮೂಲ ವ್ಯಕ್ತಿ ಗಳಾಗಿ ಡಾಕ್ಟರ್.ಕೋಮಲ್ ಬಾಯಿ ಕ್ಯಾನ್ಸರ್,ಡಾಕ್ಟರ್.ಹರ್ಷಿತಾ ಸ್ತನ ಕ್ಯಾನ್ಸರ್,ಡಾಕ್ಟರ್ ನಿನಾದ ,ಗರ್ಭಕಂಠದ ಕ್ಯಾನ್ಸರ್ ಬಗೆಗೆ ಮಾಹಿತಿ ನೀಡಿದರು.

- Advertisement -

Related news

error: Content is protected !!