Friday, March 29, 2024
spot_imgspot_img
spot_imgspot_img

ಬಂಟ್ವಾಳ: ಕನ್ನಡ ಸಾಹಿತ್ಯ ಪರಿಷತ್ತು ನೂತನ ಪದಾಧಿಕಾರಿಗಳ ಸಮಾಲೋಚನಾ ಸಭೆ

- Advertisement -G L Acharya panikkar
- Advertisement -

ಬಂಟ್ವಾಳ: ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕಿನ ನೂತನ ಪದಾಧಿಕಾರಿಗಳ ಸಮಾಲೋಚನಾ ಸಭೆಯು ಬಿ.ಸಿ.ರೋಡ್ ಕನ್ನಡ ಭವನದಲ್ಲಿ ಶನಿವಾರ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ಕಸಾಪ ನೂತನ ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಮಾತನಾಡಿ ಬಂಟ್ವಾಳ ಕಸಾಪದ ಜವಾಬ್ದಾರಿ ನನಗೆ ಜಿಲ್ಲಾ ಕಸಾಪ ನೀಡಿರುತ್ತದೆ. ಸಿಕ್ಕಿದ ಈ ಅವಕಾಶದಲ್ಲಿ ಸಾಹಿತ್ಯವನ್ನು ಜನಸಾಮಾನ್ಯರ ಬಳಿಗೆ ಒಯ್ಯುವ ಆಲೋಚನೆ ಮತ್ತು ಯೋಜನೆಗಳಿವೆ. ಇದಕ್ಕೆ ಕನ್ನಡ ಸಾಹಿತಿಗಳ, ಕನ್ನಡಾಭಿಮಾನಿಗಳ, ಪರಿಷತ್ ನ ಪದಾಧಿಕಾರಿಗಳ, ಮಾರ್ಗದರ್ಶಕರ ಸರ್ವರ ಸಹಕಾರ ಅತೀ ಅಗತ್ಯವಾಗಿದೆ ಎಂದರು.

ಇದೇ ವೇಳೆ ಪರಿಷತ್ತಿನ ಪದಾಧಿಕಾರಿಗಳ ಹಾಗೂ ಮಾರ್ಗದರ್ಶಿ ಸಮಿತಿ ಸದಸ್ಯರುಗಳ ಪಟ್ಟಿಯನ್ನು ಪ್ರಕಟಿಸಲಾಯಿತು. ಕಸಾಪ ಜಿಲ್ಲಾ ಸಮಿತಿ ಸದಸ್ಯ ಪೂವಪ್ಪ ನೇರಳಕಟ್ಟೆ ಉಪಸ್ಥಿತರಿದ್ದರು. ಗೌರವ ಕಾರ್ಯದರ್ಶಿಗಳಾಗಿ ವಿ.ಸುಬ್ರಹ್ಮಣ್ಯ ಭಟ್ ಸ್ವಾಗತಿಸಿ, ರಮಾನಂದ ನೂಜಿಪ್ಪಾಡಿ ವಂದಿಸಿದರು.

vtv vitla
vtv vitla

ಕಾರ್ಯಕಾರೀ ಸಮಿತಿ ಸದಸ್ಯರು ಹಾಗೂ ಮಾರ್ಗದರ್ಶಿ ಸಲಹಾ ಮಂಡಳಿಯ ನೂತನ ಸದಸ್ಯರ ವಿವರ

ತಾಲೂಕು ಕಸಾಪದ ಅದ್ಯಕ್ಷರಾಗಿ ವಿಶ್ವನಾಥ ಬಂಟ್ವಾಳ, ನಿಕಟ ಪೂರ್ವ ಅಧ್ಯಕ್ಷರು ಕೆ. ಮೋಹನ್ ರಾವ್, ಗೌರವ ಕಾರ್ಯದರ್ಶಿಗಳಾಗಿ ವಿ.ಸುಬ್ರಹ್ಮಣ್ಯ ಭಟ್, ರಮಾನಂದ ನೂಜಿಪ್ಪಾಡಿ, ಗೌರವ ಕೋಶಾಧ್ಯಕ್ಷರಾಗಿ ಅಬ್ದುಲ್ ರಹಿಮಾನ್ ಡಿ.ಬಿ. ಪದನಿಮಿತ್ತ ಸದಸ್ಯರಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಬಂಟ್ವಾಳ, ಸಂಘ ಸಂಸ್ಥೆಗಳ ಪ್ರತಿನಿಧಿಯಾಗಿ ಅಬೂಬಕ್ಕರ್ ಅಮ್ಮುಂಜೆ.

ಮಹಿಳಾ ಪ್ರತಿನಿಧಿಗಳಾಗಿ ರಜನಿ ಚಿಕ್ಕಯ್ಯ ಮಠ, ಗೀತಾ ಕೋಂಕೋಡಿ, , ಸದಸ್ಯರುಗಳಾಗಿ ಉಮ್ಮರ್ ಮಂಚಿ, ಸುಭಾಶ್ಚಂದ್ರ ಜೈನ್, ಶಿವಪ್ಪ ಪೂಜಾರಿ, ಚೇತನ್ ಮುಂಡಾಜೆ, ಎಂ.ಡಿ.ಮಂಚಿ, ಸೋನಿತಾ ಕೆ.ನೇರಳಕಟ್ಟೆ, ಝಫರಿನ್ ಡೊಮೆನಿಕ್ ರೋಡ್ರಿಗಸ್, ಅನೀಶ್ ಬಾಳಿಕೆ ಹೋಬಳಿ ಸಂಚಾಲಕರುಗಳಾಗಿ ಗಣೇಶ ಪ್ರಸಾದ ಪಾಂಡೇಲು, ಎ.ಗೋಪಾಲ ಅಂಚನ್ ಆಲದಪದವು, ಪಿ.ಮಹಮ್ಮದ್ ಪಾಣೆಮಂಗಳೂರು ಅವರನ್ನು ಆಯ್ಕೆ ಮಾಡಲಾಯಿತು.

ಮಾರ್ಗದರ್ಶಕ ಮಂಡಳಿಯ ಗೌರವ ನಿರ್ದೇಶಕರುಗಳಾಗಿ ಎ.ಸಿ.ಭಂಡಾರಿ, ಆಶೋಕ್ ಶೆಟ್ಟಿ ಸರಪಾಡಿ, ಹರೀಶ್ ಮಾಂಬಾಡಿ, ಉದಯಶಂಕರ್ ನೀರ್ಪಾಜೆ, ಸಂಕಪ್ಪ ಶೆಟ್ಟಿ ಬಡಗಬೆಳ್ಳೂರು, ಸುದರ್ಶನ್ ಪಡಿಯಾರ್ ವಿಟ್ಲ, ಶಿವಶಂಕರ್ ಎನ್. ಗೌರವ ಸಲಹೆಗಾರರಾಗಿ ಬಿ.ಎಂ.ಅಬ್ಬಾಸ್ ಅಲಿ, ಮಂಜು ವಿಟ್ಲ, ರವೀಂದ್ರ ಕುಕ್ಕಾಜೆ, ಸಾಯಿರಾಂ ನಾಯಕ್, ಉಮೇಶ್ ಕುಮಾರ್ ವೈ, ಲತೀಫ್ ನೇರಳಕಟ್ಟೆ ಹಾಗೂ ಗೌರವ ಮಾಧ್ಯಮ ಪ್ರತಿನಿಧಿಯಾಗಿ ಜಯಾನಂದ ಪೆರಾಜೆ ಅವರನ್ನು ಆರಿಸಲಾಯಿತು.

vtv vitla
vtv vitla
- Advertisement -

Related news

error: Content is protected !!