Thursday, April 25, 2024
spot_imgspot_img
spot_imgspot_img

ಬಂಟ್ವಾಳ: “ಗಣಿಗಾರಿಕೆ ನಿಲ್ಲಿಸಿ, ಸುಳ್ಳಮಲೆ ಗುಹಾ ತೀರ್ಥ ಉಳಿಸಿ” – (ಮೇ.25) ನಾಗರಿಕಾ ಹಿತರಕ್ಷಣಾ ವೇದಿಕೆ ವತಿಯಿಂದ ‘ಬೃಹತ್ ಪ್ರತಿಭಟನೆ’

- Advertisement -G L Acharya panikkar
- Advertisement -

ಬಂಟ್ವಾಳ: ಪ್ರಾಚೀನ ಇತಿಹಾಸವಿರುವ ಸುಳ್ಳಮಲೆ ಗುಹಾತೀರ್ಥದ ಉಳಿವಿಗಾಗಿ ನಾಗರಿಕಾ ಹಿತರಕ್ಷಣಾ ವೇದಿಕೆ ಮಾಣಿ ಮತ್ತು ಅನಂತಾಡಿ ಇದರ ಆಶ್ರಯದಲ್ಲಿ ಗಣಿಗಾರಿಕೆ ನಿಲ್ಲಿಸಿ, ಸುಳ್ಳಮಲೆ ಗುಹಾ ತೀರ್ಥ ಉಳಿಸಿ’ ಎಂಬ ಶೀರ್ಷಿಕೆಯಡಿಯಲ್ಲಿ ಬೃಹತ್ ಪ್ರತಿಭಟನೆ ಮೇ.25 ರಂದು ಅನಂತಾಡಿಯ ಗೋಳಿಕಟ್ಟೆಯಲ್ಲಿ ನಡೆಯಲಿದೆ.

ತುಂಬೆಕೋಡಿಯಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದಾಗಿ ಹಲವು ವರ್ಷಗಳ ಇತಿಹಾಸವಿರುವ ಸುಳ್ಳಮಲೆ ಗುಡ್ಡಕ್ಕೆ ಹಾನಿಯುಂಟಾಗುತ್ತಿದ್ದು, ಇದರಿಂದಾಗಿ ವರ್ಷಕ್ಕೊಮ್ಮೆ ಸಾವಿರಾರು ಭಕ್ತರು ಪಾಲ್ಗೊಳ್ಳುವ ಸುಳ್ಳಮಲೆ ಗುಹಾತೀರ್ಥಕ್ಕೂ ಹಾನಿಯುಂಟಾಗುತ್ತಿದೆ ಎಂದು ಆರೋಪಿಸಲಾಗಿದೆ.

ಇತಿಹಾಸ ಪ್ರಸಿದ್ಧ ಕಾರಿಂಜಾ ಕ್ಷೇತ್ರದ ಸುತ್ತಮುತ್ತ ನಡೆಯುತ್ತಿರುವ ಗಣಿಗಾರಿಕೆಯನ್ನು ಪೂರ್ಣ ಪ್ರಮಾಣದಲ್ಲಿ ನಿಲ್ಲಿಸುವಂತೆ ಹಿಂದೂ ಜಾಗರಣ ವೇದಿಕೆ ಹೋರಾಟವನ್ನು ನಡೆಸುತ್ತಿದ್ದು, ಅದೇ ರೀತಿ ಈಗ ಮತ್ತೊಂದು ಇತಿಹಾಸ ಪ್ರಸಿದ್ಧ ಜಾಗವನ್ನು ಉಳಿಸುವಂತೆ ನಾಗರಿಕಾ ಹಿತರಕ್ಷಣಾ ವೇದಿಕೆ ಹೋರಾಟಕ್ಕೆ ಸಿದ್ಧವಾಗಿದೆ.

- Advertisement -

Related news

error: Content is protected !!