Monday, June 22, 2026
spot_imgspot_img
spot_imgspot_img

ಬಂಟ್ವಾಳ: ಚಿಪ್ಪು ಮೀನು(ನರ್ತೆ) ಹೆಕ್ಕಲು ಹೋಗಿ ಕಾಲು ಜಾರಿ ಬಿದ್ದು ಯುವಕ ಸಾವು

- Advertisement -
- Advertisement -

ಬಂಟ್ವಾಳ: ಗದ್ದೆಯಲ್ಲಿ ಚಿಪ್ಪು ಮೀನು(ನರ್ತೆ) ಹೆಕ್ಕಲು ತೆರಳಿದ್ದ ವ್ಯಕ್ತಿಯೊರ್ವ ಕಾಲು ಜಾರಿ ಬಿದ್ದು ಸಾವಿಗೀಡಾದ ಘಟನೆ ಪೊಳಲಿ ಸಮೀಪದ ಪುಂಚಮೆ ಎಂಬಲ್ಲಿ ಬುಧವಾರ ನಡೆದಿದೆ.

ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಸಾಣೂರು ಪದವು ನಿವಾಸಿ ದಾಮೋದರ(32) ಮೃತಪಟ್ಟ ದುರ್ದೈವಿ. ವೃತ್ತಿಯಲ್ಲಿ ಮೇಸ್ತ್ರಿ ಕೆಲಸ ಮಾಡುವ ದಾಮೋದರ್ ಬುಧವಾರ ಬೆಳಿಗ್ಗೆ ಪುಂಚಮೆ ಎಂಬಲ್ಲಿಗೆ ಗದ್ದೆಯಲ್ಲಿ ದೊರಯುವ ಚಿಪ್ಪು ಮೀನು(ನರ್ತೆ) ಹೆಕ್ಕಲು ಹೋಗಿದ್ದ ವೇಳೆ ಘಟನೆ ನಡೆದಿದೆ.

ಗದ್ದೆಯ ಬದುವಿನಿಂದ ಗದ್ದೆಗೆ ಇಳಿಯುವ ವೇಳೆ ದಾಮೋದರ್ ಆಯತಪ್ಪಿ ಮುಗ್ಗರಿಸಿ ಗದ್ದೆಗೆ ಬಿದ್ದಿದ್ದು, ತಲೆ ಗದ್ದೆಯಲ್ಲಿ ಹೂತು ಹೋಗಿ ಉಸಿರುಗಟ್ಟಿ ಸಾವನ್ನಪ್ಪಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ಬಂಟ್ವಾಳ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಮರಣೋತ್ತರ ಪರೀಕ್ಷೆ ರವಾನಿಸಿದ್ದಾರೆ.

- Advertisement -

Related news

error: Content is protected !!