Sunday, May 19, 2024
spot_imgspot_img
spot_imgspot_img

ಬಂಟ್ವಾಳ: ದ್ವಿಚಕ್ರ ವಾಹನದಲ್ಲಿ ದನದ ಮಾಂಸ ಮಾರಾಟ; ಓರ್ವನ ಬಂಧನ..!

- Advertisement -G L Acharya panikkar
- Advertisement -

ಬಂಟ್ವಾಳ: ದ್ವಿಚಕ್ರವಾಹನದಲ್ಲಿ ದನದ ಮಾಂಸ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಟ್ವಾಳ ನಗರ ಠಾಣಾ ಪೋಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಘಟನೆ ಭಾನುವಾರ ಗೂಡಿನಬಳಿಯಲ್ಲಿ ನಡೆದಿದೆ.

ಬೋಳಂತೂರು ನಿವಾಸಿ ಮಹಮ್ಮದ್ ಮುಸ್ತಫಾ ಬಂಧಿತ ಆರೋಪಿ.

vtv vitla
vtv vitla

ಆರೋಪಿಯ ದ್ವಿ ಚಕ್ರವಾಹನ ಹಾಗೂ ಅದರಲ್ಲಿದ್ದ 20 ಕೆ.ಜಿ‌.ಮಾಂಸವನ್ನು ಪೋಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಇನ್ನು ಆರೋಪಿ ಮಹಮ್ಮದ್ ಮುಸ್ತಫಾ ಹಾಗೂ ಸ್ನೇಹಿತ ಇಬ್ಬರು ಸೇರಿ ಅಕ್ರಮವಾಗಿ ದನಗಳನ್ನು ಕದ್ದು ತಂದು ಪ್ರತಿ ಆದಿತ್ಯವಾರ ದಿನ ಮನೆಯಲ್ಲಿ ಕಡಿದು ಮಾಂಸ ಮಾಡಿ ಬಳಿಕ ಮಾರಾಟ ಮಾಡುತ್ತಾರೆ ಎಂಬ ಮಾಹಿತಿ ಪೋಲೀಸರಿಗೆ ದೊರಕಿದೆ.

ಆರೋಪಿ ದ್ವಿ ಚಕ್ರದ ಮೂಲಕ ನಂದಾವರ, ಗೂಡಿನಬಳಿ, ಮಂಚಿ ಸಹಿತ ತಾಲೂಕಿನ ಆಯ್ದ ಕಡೆಗಳಿಗೆ ಮಾರಾಟ ಮಾಡುವು ಪೋಲೀಸರಿಗೆ ಮಾಹಿತಿ ದೊರಕಿದೆ.

vtv vitla
vtv vitla
- Advertisement -

Related news

error: Content is protected !!