Sunday, June 14, 2026
spot_imgspot_img
spot_imgspot_img

ಬಂಟ್ವಾಳ: ನರಹರಿ ಪರ್ವತದ ಪಾವಿತ್ರ‍್ಯತೆ ಹಾಳುಗೆಡುವುತ್ತಿರುವ ಷಡ್ಯಂತ್ರದ ವಿರುದ್ದ ಹಿಂ.ಜಾ.ವೇ. ವಿಟ್ಲ ತಾಲೂಕು ಇದರ ನೇತೃತ್ವದಲ್ಲಿ ಜನಜಾಗೃತಿ, ಪಾದಯಾತ್ರೆ, ಸಾರ್ವಜನಿಕ ಸಭೆ

- Advertisement -
- Advertisement -

ಬಂಟ್ವಾಳ:ಪ್ರವಾಸೋದ್ಯಮದ ಹೆಸರಿನಲ್ಲಿ ನರಹರಿ ಪರ್ವತದ ಪಾವಿತ್ರ‍್ಯತೆ ಹಾಳುಗೆಡುವುತ್ತಿರುವ ಷಡ್ಯಂತ್ರದ ವಿರುದ್ದ ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕು ಇದರ ನೇತೃತ್ವದಲ್ಲಿ ನಮ್ಮ ನಡಿಗೆ ನರಹರಿ ಕಡೆಗೆ ಎಂಬ ಧ್ಯೇಯ ವಾಕ್ಯದೊಂದಿಗೆ ಜನಜಾಗೃತಿ, ಪಾದಯಾತ್ರೆ, ಸಾರ್ವಜನಿಕ ಸಭೆ ನಡೆಯಿತು.

ಕಲ್ಲಡ್ಕ ಹಾಗೂ ಮೆಲ್ಕಾರ್‌ನಿಂದ ಪಾದಾಯಾತ್ರೆ ನಡೆಯಿತು. ನೂರಾರು ಹಿಂದೂ ಕಾರ್ಯಕರ್ತರು ಇದರಲ್ಲಿ ಭಾಗಿಯಾಗಿದ್ದರು. ಮುಖ್ಯ ಅತಿಥಿಗಳಾಗಿ ಖ್ಯಾತ ಬಾಲವಾಗ್ಮಿ ಹಾರಿಕಾ ಮಂಜುನಾಥ್ ರವರು ದಿಕ್ಸೂಚಿ ಭಾಷಣ ಮಾಡಿದರು.

ಹಿಂ.ಜಾ.ವೇ ಪುತ್ತೂರು ಜಿಲ್ಲೆ ಇದರ ಪ್ರಧಾನ ಕಾರ್ಯದರ್ಶಿ ಅಜಿತ್ ಹೊಸಮನೆ, ಹಿಂ.ಜಾ.ವೇ ಪುತ್ತೂರು ಜಿಲ್ಲೆ ಇದರ ಅಧ್ಯಕ್ಷ ಜಗದೀಶ್ ನೆತ್ತರಕೆರೆ, ಹಿಂ.ಜಾ.ವೇ ಪ್ರಾಂತ ಪ್ರಮುಖ್ ರಾಧಕೃಷ್ಣ ಅಡ್ಯಂತಾಯ, ಹಿಂ.ಜಾ.ವೇ ವಿಟ್ಲ ತಾಲೂಕು ಅಧ್ಯಕ್ಷ ಗಣೇಶ್ ಕೆದಿಲ, ಹಿಂಜಾವೇ ಸಂಪರ್ಕ್ ಪ್ರಮುಖ್ ನರಸಿಂಹ ಮಾಣಿ ಸೇರಿದಂತೆ ಗಣ್ಯಾತಿಗಣ್ಯರು ಹಾಗೂ ಕಾರ್ಯಕರ್ಯರು ಭಾಗಿಯಾಗಿದ್ದರು.

- Advertisement -

Related news

error: Content is protected !!