Saturday, May 4, 2024
spot_imgspot_img
spot_imgspot_img

ಬಂಟ್ವಾಳ: ಮೊಬೈಲ್‌ ಟವರ್‌ನ ಬ್ಯಾಟರಿಯನ್ನೇ ಎಗರಿಸಿದ ಖದೀಮರು

- Advertisement -G L Acharya panikkar
- Advertisement -

ಬಂಟ್ವಾಳ: ಮೊಬೈಲ್ ಟವರ್ ಒಂದರ ಬ್ಯಾಟರಿ ಕಳವು ನಡೆದ ಘಟನೆ ಮಾರ್ನಬೈಲು ಎಂಬಲ್ಲಿ ನಡೆದಿದೆ. ಮೊಬೈಲ್ ಟವರ್‌ನ ಟೆಕ್ನೀಷಿಯನ್ ನೀಡಿದ ದೂರಿನನ್ವಯ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾರ್ನಬೈಲು ಎಂಬಲ್ಲಿ ಕಾರ್ಯಚರಿಸುತ್ತಿರುವ ಮೊಬೈಲ್ ಟವರ್ ಒಂದರ ಸುಮಾರು 1 ಲಕ್ಷ ಮೌಲ್ಯದ ಬ್ಯಾಟರಿಯ ನ್ನು ಕಳವು ಮಾಡಲಾಗಿದೆ. ಕಳೆದ ನಾಲ್ಕು ತಿಂಗಳ ಹಿಂದೆ ಟವರ್ ನೆಟ್ ವರ್ಕ್ ನ ಕೆಲಸಕ್ಕಾಗಿ ಸುಮಾರು ೧ ಲಕ್ಷ ರೂ ಮೌಲ್ಯದ 24 ಬ್ಯಾಟರಿ ಬಾಕ್ಸ್ ಹಾಕಲಾಗಿತ್ತು. ಆದರೆ ಈ ಬ್ಯಾಟರಿ ಬಾಕ್ಸ್‌ಅನ್ನೇ ಕಳ್ಳತನ ಮಾಡಲಾಗಿದೆ ಎಂದು ಟೆಕ್ನಿಷಿಯನ್ ರಕ್ಷಿತ್ ಠಾಣೆಗೆ ದೂರು ನೀಡಿದ್ದಾರೆ.

vtv vitla
vtv vitla
- Advertisement -

Related news

error: Content is protected !!