Wednesday, July 29, 2026
spot_imgspot_img
spot_imgspot_img

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ರವರಿಗೆ ಮಾತೃವಿಯೋಗ

- Advertisement -
- Advertisement -

ಬಂಟ್ವಾಳ: ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಅವರ ತಾಯಿ, ಉಳಿಪ್ಪಾಡಿಗುತ್ತು ಸರೋಜಿನಿ ನಾಯ್ಕ್ (90) ಅವರು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ.

ಪೊಳಲಿ ದೇವಸ್ಥಾನದ ಆಡಳಿತದ ಒಂದು ಮನೆತನವಾದ ಉಳಿಪ್ಪಾಡಿಗುತ್ತು ದಿ| ರಮೇಶ್ ನಾಯ್ಕ್ ಅವರ ಪತ್ನಿ ಸರೋಜಿನಿ ಅವರು ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದು ನಿನ್ನೆ ರಾತ್ರಿ ಸುಮಾರು 10 ಗಂಟೆ ವೇಳೆ ಒಡ್ಡೂರು ಫಾರ್ಮ್ಸ್ ನ ಪುತ್ರನ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಇವರು ಪುತ್ರ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ , ಓರ್ವ ಪುತ್ರಿಯನ್ನು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇವರ ಅಂತ್ಯಕ್ರಿಯೆ ನಾಳೆ 10 ಗಂಟೆಗೆ ಒಡ್ಡೂರು ಫಾರ್ಮ್ಸ್ ನಲ್ಲಿ ನಡೆಯಲಿದೆ.

- Advertisement -

Related news

error: Content is protected !!