- Advertisement -
- Advertisement -


ಬಂಟ್ವಾಳ: ಸೂರಿಕುಮೇರುನಲ್ಲಿರುವ ಸೈಂಟ್ ಜೋಸೆಫ್ ಚರ್ಚ್ ನಲ್ಲಿ ಕನ್ಯಾ ಮರಿಯಮ್ಮನವರ ಹುಟ್ಟು ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.


ಚರ್ಚ್ ಧರ್ಮ ಗುರು ಫಾದರ್ ಗ್ರೆಗರಿ ಪಿರೇರಾರವರು ಹೊಸ ತೆನೆಯನ್ನು ಆಶೀರ್ವದಿಸಿ, ದಿವ್ಯ ಬಲಿ ಪೂಜೆಯನ್ನು ನೆರೆವೇರಿಸಿ ನೆರೆದ ಎಲ್ಲಾ ಭಕ್ತಾಧಿಗಳಿಗೆ ಆಶೀರ್ವದಿಸಿದರು. ಚರ್ಚ್ ಆರ್ಥಿಕ ಸಮಿತಿ, ಪಾಲನಾ ಸಮಿತಿ ಮತ್ತು ದಾನಿಗಳಿಗೆ ಹೊಸ ತೆನೆಯನ್ನು ನೀಡುವ ಮುಖಾಂತರ ಸನ್ಮಾನಿಸಿದರು. ನೆರೆದ ಎಲ್ಲಾ ಭಕ್ತಾಧಿಗಳಿಗೆ ಪೂಜೆಯ ಬಳಿಕ ಕಬ್ಬು ವಿತರಿಸಲಾಯಿತು.


ಅತಿಥಿ ಧರ್ಮ ಗುರುಗಳಾದ ಫಾದರ್ ವಿಕ್ಟರ್ ಡಾಯಾಸ್, ಚರ್ಚ್ ಉಪಾಧ್ಯಕ್ಷರಾದ ಎಲಿಯಾಸ್ ಪಿರೇರಾ, ಕಾರ್ಯದರ್ಶಿ ಮೇರಿ ಡಿಸೋಜ, ಸರ್ವ ಆಯೋಗಗಳ ಸಂಚಾಲಕರಾದ ಸ್ಟೀವನ್ ಆಲ್ವಿನ್ ಪಾಯ್ಸ್ ಮತ್ತು ಕಥೊಲಿಕ್ ಸಭಾ ಸೂರಿಕುಮೇರು ಘಟಕದ ಅಧ್ಯಕ್ಷರಾದ ಸ್ಟೀವನ್ ಪ್ರಕಾಶ್ ಮಾರ್ಟಿಸ್ ಹಾಜರಿದ್ದರು.

- Advertisement -








