Saturday, April 20, 2024
spot_imgspot_img
spot_imgspot_img

ಡಾ.ಗಿರಿಧರ್ ಕಜೆ ಅವರ ಮನೆಗೆ ಭೇಟಿ ನೀಡಿ ಅವರು ಮಾಡಿದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಶಾಸಕ ಸಂಜೀವ ಮಠಂದೂರು

- Advertisement -G L Acharya panikkar
- Advertisement -

ಪುತ್ತೂರು: ಕೊರೋನಾ (ಕೋವಿಡ್-19) ಮಹಾಮಾರಿ ದಿನದಿಂದ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಸೋಂಕು ಹರಡುವಿಕೆಯ ನಿಯಂತ್ರಣಕ್ಕೆ ಕ್ರಮಗಳನ್ನು ತರಲು ಸಮರೋಪಾದಿಯಲ್ಲಿ ಸಾಗುತ್ತಾ ಇದೆ. ಕೊರೋನಾ ಸೋಂಕು ಹರಡುವಿಕೆ ತಡೆಗಟ್ಟಲು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಕರೆಯಂತೆ ಆಯುರ್ವೇದ ಮತ್ತು ಮನೆ ಮದ್ದು ಉಪಯೋಗಿಸುವಂತೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಇದಕ್ಕೆ ಪೂರಕವಾಗಿ ನಮ್ಮ ಪುತ್ತೂರಿನ ಡಾ. ಗಿರಿಧರ್ ಕಜೆ ಅವರು ರಾಜ್ಯದಲ್ಲಿ (ಕೋವಿಡ್‌ 19) ವೈರಸ್‌ ಸೋಂಕಿತರಿಗೆ ನೀಡಿದ್ದ ಆಯುರ್ವೇದ ಚಿಕಿತ್ಸೆ ಯಶಸ್ವಿಯಾಗಿದೆ. ಇತರೆ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದವರೂ ಸೇರಿ 10 ಸೋಂಕಿತರು ಆಯುರ್ವೇದ ಮಾತ್ರೆಗಳನ್ನು ಸೇವಿಸಿ ಗುಣಮುಖರಾಗಿದ್ದಾರೆ.

(ಕೋವಿಡ್‌ 19) ಸೋಂಕಿಗೆ ಆಯುರ್ವೇದ ಔಷಧಗಳನ್ನು ಆಯುರ್ವೇದ ತಜ್ಞ ಡಾ.ಗಿರಿಧರ್‌ ಕಜೆ ಮತ್ತು ತಂಡ ಸಿದ್ಧಪಡಿಸಿತ್ತು. ಈ ಸಲುವಾಗಿ ಪುತ್ತೂರು ಶಾಸಕರಾದ ಶ್ರೀ ಸಂಜೀವ ಮಠಂದೂರು ಡಾ.ಗಿರಿಧರ್ ಕಜೆ ಅವರ ಮನೆಗೆ ಭೇಟಿ ನೀಡಿ ಅವರು ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಹಾಗೂ ಪುತ್ತೂರಿನ ಜನರ ಆರೋಗ್ಯ ಕಾಪಾಡಿಕೊಳ್ಳುವ ಹಿತದೃಷ್ಟಿಯಿಂದ ಇವರು ತಯಾರಿಸಿರುವ ಔಷಧಿಯು ಎಲ್ಲರಿಗೂ ತಲುಪುವಂತೆ ಆಗಬೇಕು ಎಂದು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ಶ್ರೀ ಮುರಳಿ ಕೃಷ್ಣ ಹಸಂತಡ್ಕ, ಡಾ.ಗಿರಿಧರ್ ಕಜೆ ಅವರ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

- Advertisement -

Related news

error: Content is protected !!