Tuesday, July 28, 2026
spot_imgspot_img
spot_imgspot_img

ಬಾವಿಯೊಳಗೆ ಬಿದ್ದ ಆನೆ ಮರಿಯ ರಕ್ಷಣೆ

- Advertisement -
- Advertisement -

ಚೆನ್ನೈ: ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಪಂಚಿಪಳ್ಳಿ ಗ್ರಾಮದ ಯೆಲಗುಂದೂರಿ ಎಂಬಲ್ಲಿ ತೆರೆದ ಬಾವಿಗೆ ಬಿದ್ದ ಮರಿ ಆನೆಯನ್ನು 15 ಗಂಟೆಗಳ ಕಾರ್ಯಾಚರಣೆ ಬಳಿಕ ರಕ್ಷಿಸಲಾಗಿದೆ. ಆಹಾರ ಹುಡುಕಿಕೊಂಡು ಹೋಗುತ್ತಿದ್ದ ವೇಳೆ ಮರಿ ಆನೆ ಬಾವಿಗೆ ಬಿದ್ದಿತ್ತು. ರಕ್ಷಿಸಲಾಗಿರುವ ಮರಿ ಆನೆ ಆರೋಗ್ಯವಾಗಿದೆ.

ಎರಡು ಕ್ರೇನ್ ಗಳನ್ನು ಬಳಸಿ ಆನೆಯನ್ನು ಮೇಲಕ್ಕೆ ಎತ್ತಲಾಯಿತು. ಆನೆಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಆನೆ ಕಾರಿಡಾರ್ ದಾರಿಯಲ್ಲಿ ಬಾವಿ ನಿರ್ಮಿಸಲಾಗಿದೆ ಎಂಬ ಆರೋಪ ಕೂಡ ಕೇಳಿ ಬಂದಿದೆ. ದುರಂತ ಮರುಕಳಿಸದಿರಲು ಅಗತ್ಯ ಕ್ರಮ ತೆಗೆದುಕೊಳ್ಳಲು ಜಿಲ್ಲಾಡಳಿತ ಸೂಚಿಸಿದೆ.

- Advertisement -

Related news

error: Content is protected !!