Friday, April 26, 2024
spot_imgspot_img
spot_imgspot_img

ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವರ ವರ್ಷಾವಧಿ ಜಾತ್ರೋತ್ಸವ ಆರಂಭ

- Advertisement -G L Acharya panikkar
- Advertisement -

ಬಿಳಿನೆಲೆ: ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವರ ವರ್ಷಾವಧಿ ಜಾತ್ರೋತ್ಸವ ಮತ್ತು ನಿಶಿ ಪೂರ್ಣ ಭಜನೆ ಆರಂಭವಾಗಿದೆ.

ಬ್ರಹ್ಮಶ್ರೀ ಉಚ್ಚಿಲ ಕೆ.ಯು. ಪದ್ಮನಾಭ ತಂತ್ರಿ ಅವರ ನೇತೃತ್ವದಲ್ಲಿ ವಿವಿಧ ತಾಂತ್ರಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಲಿದೆ.

ಫೆ . 7 ರಿಂದ ಫೆ . 9 ರ ವರೆಗೆ ವೈಭವಯುತವಾಗಿ ಜಾತ್ರೋತ್ಸವ ಜರಗಲಿದೆ. ಫೆ . 7 ರಂದು ಹೊರೆ ಕಾಣಿಕೆ ಸಮರ್ಪಣೆ , ಸಂಜೆ 6 ರಿಂದ ನಿಶಿಪೂರ್ಣ ಭಜನೆ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಭಜನ ಮಂಡಳಿ ಮತ್ತು ಶ್ರೀ ಕೃಷ್ಣ ಮಹಿಳಾ ಭಜನ ಮಂಡಳಿ ಪ್ರಾಯೋಜಕತ್ವದಲ್ಲಿ ನಡೆಯಲಿದೆ.

ಫೆ . 8 ರ ಸಂಜೆ ಸಾಮೂಹಿಕ ಪ್ರಾರ್ಥನೆ , ದೀಪಾರಾಧನೆ ನಡೆಯಲಿದೆ . ಫೆ . 9 ರ ರಾತ್ರಿ ಶ್ರೀ ದೇವರ ಬಲಿ ನೃತ್ಯೋತ್ಸವ , ಸುಡುಮದ್ದು ಪ್ರದರ್ಶನ ನಡೆಯಲಿದೆ.

vtv vitla
vtv vitla

ಫೆಬ್ರವರಿ 8 ರಂದು ಸಂಜೆ 6ಗಂಟೆಯಿಂದ ಸಾಮೂಹಿಕ ಪ್ರಾರ್ಥನೆ, ಪ್ರಸಾದ ಶುದ್ಧಿ, ವಾಸ್ತು ಬಲಿ, ವಾಸ್ತು ರಾಕ್ಷೋಘ್ನ, ದೀಪಾರಾಧನೆ, ಸಂಧ್ಯಾರಾಧನೆ ಇತ್ಯಾದಿ ಕಾರ್ಯಕ್ರಮ ನೆರವೇರಲಿದೆ.

ಫೆಬ್ರವರಿ 9ರಂದು ಬೆಳಿಗ್ಗೆ 6 ರಿಂದ ಗಣಪತಿ ಹವನ, ಕಲಶ ಪೂಜೆ, ಮಧ್ಯಾಹ್ನ ಕಲಶಾಭಿಷೇಕ, ತುಲಾಭಾರ ಸೇವೆ, ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ, ಸಂಜೆ 6 ಗಂಟೆಯಿಂದ ದೀಪಾರಾಧನೆ, ಸಂಧ್ಯಾ ವಂದನೆ ನಡೆಯಲಿದೆ.

ಸಂಜೆ 6.15 ರಿಂದ ಕರ್ನಾಟಕ ಸಂಗೀತ ಕಛೇರಿ ಏರ್ಪಡಿಸಲಾಗಿದೆ. ವಿದ್ವಾನ್ ಮುರಳಿ ಕೃಷ್ಣ ಕಾವು ಪಟ್ಟಾಜೆ (ಗಾಯನ), ಮಾಸ್ಟರ್ ಸುಮೇಧ ಕನ್ಯಾನ ಅಮೈ (ವಯಲಿನ್), ವಿದ್ವಾನ್ ಸುನಾದಕೃಷ್ಣ ಕನ್ಯಾನ ಅಮೈ (ಮೃದಂಗ), ಶಿವಕೀರ್ತನ ಬಿ.ಜಿ. ಮತ್ತು ಮಾನಸ ಎನ್.ಎಸ್. ಪ್ರಾಯೋಜಕತ್ವ ವಹಿಸುವರು.

ಸುಬ್ರಹ್ಮಣ್ಯ ಬಿಳಿನೆಲೆ ಡಾ. ವಿದ್ಯಾಭೂಷಣ ಅಭಿಮಾನಿ ಸಂಘದವರ ಸಹಕರಿಸುವರು. ರಾತ್ರಿ 9ರಿಂದ ಮಹಾಪೂಜೆ, ರಾತ್ರಿ 10 ರಿಂದ ರಾಜಾಂಗಣದಲ್ಲಿ ಶ್ರೀ ದೇವರ ಬಲಿ ನೃತ್ಯೋತ್ಸವ, ಬಟ್ಟಲು ಕಾಣಿಕೆ, ಮಹಾಪ್ರಸಾದ, ಮಹಾ ಮಂತ್ರಾಕ್ಷತೆ, ರಾತ್ರಿ 11 ಕ್ಕೆ ಸಿಡಿಮದ್ದು ಪ್ರದರ್ಶನ ನಡೆಯಲಿದೆ. ಪುತ್ತೂರು ಎಸ್.ಆರ್.ಕೆ. ಲ್ಯಾಡರ್ ನ ಕೇಶವ ಎ. ಪ್ರಾಯೋಜಕತ್ವ ವಹಿಸುವರು.

vtv vitla
vtv vitla
- Advertisement -

Related news

error: Content is protected !!