Sunday, May 5, 2024
spot_imgspot_img
spot_imgspot_img

ಬೂಟಿನೊಳಗೆ ಹೆಡೆಯೆತ್ತಿದ ನಾಗರ; ವಿಡಿಯೋ ವೈರಲ್

- Advertisement -G L Acharya panikkar
- Advertisement -

ಇದು ಮೈಸೂರಿನ ಮನೆಯೊಂದರಲ್ಲಿ ನಡೆದ ಘಟನೆ. ಬೂಟು ಹಾಕಿಕೊಳ್ಳಲು ಹೋದ ವ್ಯಕ್ತಿಗೆ ಹಾವು ಕಾಣಿಸಿಕೊಂಡಿದೆ. ನಂತರ ಅರಣ್ಯ ಇಲಾಖೆಗೆ ಈ ಹಾವನ್ನು ಒಪ್ಪಿಸಲಾಗಿದೆ.ವಿಡಿಯೋ ನೋಡಿ ಒಮ್ಮೆ.

ಈ ವಿಡಿಯೋದಲ್ಲಿರುವ ಬೂಟು ನೋಡಿದ ಯಾರಿಗೂ ಇದರೊಳಗೊಂದು ಇಂಥ ದೈತ್ಯ ನಾಗರಹಾವು ಅಡಗಿಕೊಂಡಿದೆ ಎನ್ನುವುದು, ಅದು ಹೆಡೆ ಎತ್ತುವ ತನಕ ಅರಿವಿಗೇ ಬಾರದು. ವೈರಲ್ ಆಗುತ್ತಿರುವ ಈ ವಿಡಿಯೋ ಮೈಸೂರು ಮೂಲದ್ದು. ಎಲ್ಲ ಪ್ರಾಣಿಗಳೂ ಸ್ನೇಹಜೀವಿಗಳಲ್ಲ, ಅದರಲ್ಲಿಯೂ ಹಾವು! ಯಾವತ್ತೂ ಮನುಷ್ಯ ಸುಲಭವಾಗಿ ಗಮನಿಸಲಾರದಂಥ ಜಾಗದಲ್ಲೇ ಅಡಗಿ ಕುಳಿತುಕೊಳ್ಳುವಂತಹ ಸಾಮರ್ಥ್ಯವನ್ನು ಹಾವುಗಳು ಪಡೆದುಕೊಂಡಿವೆ. ವಿಶೇಷವಾಗಿ ನಾಗರಹಾವು. ಅದಕ್ಕೆ ಹಾವಿನ ಕಡಿತಕ್ಕೆ ನೂರಾರು ಜನ ಬಲಿಯಾಗುವುದು.

ಮೈಸೂರಿನ ವ್ಯಕ್ತಿಯೊಬ್ಬರ ಮನೆಯಲ್ಲಿ ಈ ದೃಶ್ಯವನ್ನು ಸೆರೆಹಿಡಿಯಲಾಗಿದೆ. ಬೂಟು ಹಾಕಿಕೊಳ್ಳಲು ಹೋದಾಗ ಅದರಲ್ಲಿ ಹಾವು ಇರುವುದು ಪತ್ತೆಯಾಗಿದೆ. ತಕ್ಷಣವೇ ಚೂಪಾದ ಸಲಾಕೆಯಿಂದ ತಿವಿದು ಎಬ್ಬಿಸುವ ಪ್ರಯತ್ನ ಮಾಡಿದ್ದಾರೆ. ಪಕ್ಕನೆ ಅದು ಹೆಡೆ ಎತ್ತುವುದನ್ನು ನೋಡಿದರೆ… ನೆಟ್ಟಿಗರು ಭಯದಿಂದ ಈ ವಿಡಿಯೋ ನೋಡಿ ಮಾತನಾಡಿಕೊಳ್ಳುತ್ತಿದ್ದಾರೆ.

ನಂತರ ಈ ಹಾವನ್ನು ಅರಣ್ಯ ಇಲಾಖೆಗೆ ಒಪ್ಪಿಸಲಾಗಿದೆ.

- Advertisement -

Related news

error: Content is protected !!