Tuesday, April 16, 2024
spot_imgspot_img
spot_imgspot_img

ಬೆಂಗಳೂರು: ಟ್ಯಾಕ್ಸಿ ಚಾಲಕರ “ಕರಾಳ ದಿ‌ನ”- ಮೃತ ಕ್ಯಾಬ್ ಚಾಲಕ ಪ್ರತಾಪ್ ಕುಟುಂಬಕ್ಕೆ ಹೆಚ್ಚಿನ ಪರಿಹಾರವನ್ನು ಒತ್ತಾಯಿಸಿ ಸ್ಪಂದಿಸಿದ ಜಯಕರ್ನಾಟಕ ಜನಪರ ವೇದಿಕೆ

- Advertisement -G L Acharya panikkar
- Advertisement -

ಬೆಂಗಳೂರು: ಟ್ಯಾಕ್ಸಿಗಳ ದರದಲ್ಲಿ ಆಗುತ್ತಿರುವ ತಾರತಮ್ಯದಿಂದ ಕಂಗೆಟ್ಟು ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾಣ ನಿಲ್ದಾಣದಲ್ಲಿ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದ ರಾಮನಗರ ತಾಲ್ಲೂಕಿನ ತುಂಬೇನಹಳ್ಳಿಯ ಕ್ಯಾಬ್ ಚಾಲಕ ಪ್ರತಾಪ್ ಮನೆಗೆ ಜಯಕರ್ನಾಟಕ ಜನಪರ ವೇದಿಕೆಯ ಯುವ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಯುತ ಬಿ.ಗುಣರಂಜನ್ ಶೆಟ್ಟಿಯವರ ಸೂಚನೆ ಮೇರೆಗೆ ಜಯಕರ್ನಾಟಕ ಜನಪರ ವೇದಿಕೆಯ ಮುಖಂಡರು ತೆರಳಿ ಮೃತರ ಮನೆಯವರಿಗೆ ಸಾಂತ್ವನ ಹೇಳಿದ್ದಾರೆ.

ಜಯಕರ್ನಾಟಕ ಜನಪರ ವೇದಿಕೆಯ ಯುವ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಯುತ ಬಿ.ಗುಣರಂಜನ್ ಶೆಟ್ಟಿಯವರ ಸೂಚನೆ ಮೇರೆಗೆ ರಾಜ್ಯಾಧ್ಯಕ್ಷರಾದ ಆರ್.ಚಂದ್ರಪ್ಪ, ಬೆಂಗಳೂರು ಜಿಲ್ಲಾಧ್ಯಕ್ಷರಾದ ಶ್ರೀಯುತ ಜೆ.ಶ್ರೀನಿವಾಸ್, ಟ್ಯಾಕ್ಸಿ ಮೂರ್ತಿ ಮತ್ತು ತಂಡದವರು ಗುರುವಾರ ಭೇಟಿ ನೀಡಿ ಮೃತರ ತಂದೆ ತಾಯಿಗೆ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಚಂದ್ರಪ್ಪನವರು ‘ಬಹಳಷ್ಟು ಯುವಕರು ಸ್ವ ಉದ್ಯೋಗ ಮಾಡಬೇಕೆಂದು ಬ್ಯಾಂಕುಗಳಿಂದ ಸಾಲ ಸೌಲಭ್ಯ ಪಡೆದು ಅನೇಕ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ತುಂಬೇನಹಳ್ಳಿ ಗ್ರಾಮದ ಪ್ರತಾಪ್ ಸಹ ಸಾಲದ ನೆರವಿನಿಂದ ಕ್ಯಾಬ್ ಚಲಾಯಿಸುತ್ತಿದ್ದು, ಈ ಕ್ಷೇತ್ರದಲ್ಲಿ ಭಾರಿ ಪೈಪೋಟಿ ಇದೆ. ಕೆಎಸ್‍ಟಿಡಿಸಿ ಹಾಗೂ ಓಲಾ ಕ್ಯಾಬ್‍ಗಳ ನಡುವೆ ದರ ವ್ಯಾತ್ಯಾಸ ಇರುವುದರಿಂದ ಗ್ರಾಹಕರು ಕಡಿಮೆ ದರ ಇರುವ ಕಡೆ ಹೋಗುತ್ತಾರೆ.

ಇದರಿಂದ ಸಾಲ ಪಡೆದು ಟ್ಯಾಕ್ಸಿ ಚಲಾಯಿಸುತ್ತಿರುವವರಿಗೆ ಭಾರಿ ನಷ್ಟ ಉಂಟಾಗುತ್ತಿದ್ದರಿಂದ ಸರ್ಕಾರ ಇಂದು ಒಂದೇ ನಗರ, ಒಂದೇ ದರ ಎಂದು ಆದೇಶ ಹೊರಡಿಸಿದೆ ಎಂದು ತಿಳಿಸಿದರು.

‘ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಬೇಕೆಂದು ನಗರ ಪ್ರದೇಶಗಳಿಗೆ ವಲಸೆ ಬಂದಿರುವ ಗ್ರಾಮೀಣ ಯುವಕರಿಗೆ ಸರ್ಕಾರ ರಕ್ಷಣೆ ನೀಡಿ ಆಸರೆಯಾಗಿ ನಿಲ್ಲಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮೃತ ಪ್ರತಾಪ್ ಕುಟುಂಬಕ್ಕೆ ನಮ್ಮ ಜಯಕರ್ನಾಟಕ ಜನಪರ ವೇದಿಕೆಯಿಂದ 25,000/-ರೂ (ಇಪ್ಪತೈದು ಸಾವಿರ ರೂಗಳನ್ನು) ಪರಿಹಾರ ಧನವಾಗಿ ನೀಡಲಾಯಿತು.

ದಯಮಾಡಿ ಯಾರು ಆತುರದ ನಿರ್ಧಾರ ಮಾಡಿ ಆತ್ಮಹತ್ಯೆಗೆ ಮಾಡಿಕೊಂಡು ನಿಮ್ಮ ಕುಟುಂಬದವರಿಗೆ ನೋವುಂಟು ಮಾಡಬೇಡಿ.

ನಿಮ್ಮ ಜೊತೆಯಲ್ಲಿ ಕರ್ನಾಟಕದ ಜನತೆ ಹಾಗೂ ಎಲ್ಲಾ ಸಂಘ ಸಂಸ್ಥೆಗಳು, ಜೊತೆಗೆ ಜಯಕರ್ನಾಟಕ ಜನಪರ ವೇದಿಕೆ ನಿಮ್ಮೊಂದಿಗೆ ಇರುತ್ತದೆ ಎಂದು ಧೈರ್ಯ ತುಂಬಿದರು.

- Advertisement -

Related news

error: Content is protected !!