Wednesday, April 24, 2024
spot_imgspot_img
spot_imgspot_img

ಬೆಳ್ತಂಗಡಿ: “ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್”ನಲ್ಲಿ ಹೆಸರು ದಾಖಲಿಸಿಕೊಂಡ ‘ಸುರಕ್ಷಾ ಆಚಾರ್ಯ’

- Advertisement -G L Acharya panikkar
- Advertisement -

ಬೆಳ್ತಂಗಡಿ: ಕನ್ನಾಜೆಯ ಸುರಕ್ಷಾ ಆಚಾರ್ಯ ಅತಿ ಸಣ್ಣ ಮಂಡಲ ಆರ್ಟ್ ಬಿಡಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ನಲ್ಲಿ ಹೆಸರು ದಾಖಲಿಸಿಕೊಂಡಿದ್ದಾರೆ.

ಸುರಕ್ಷಾ ಅವರು ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಕನ್ನಾಜೆ ನಿವಾಸಿಗಳಾದ ಚಂದ್ರಶೇಖರ ಹಾಗೂ ಸರಸ್ವತಿ ದಂಪತಿಗಳ ಪುತ್ರಿ. ಸುರಕ್ಷಾ ಆಚಾರ್ಯ ಅವರು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ನಲ್ಲಿ ತನ್ನ ಹೆಸರು ದಾಖಲಿಕೊಳ್ಳುವ ಮುಲಕ ಸಾಧನೆ ಮಾಡಿದ್ದಾರೆ. ಇವರ ಸಾಧನೆಗೆ ಮನೆಯವರು ಹಾಗೂ ಸ್ನೇಹಿತರು ಸಂತಸಪಟ್ಟಿದು ಎಲ್ಲೆಡೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

ಸುರಕ್ಷಾ ಅವರು ಹವ್ಯಾಸಿ ಯಕ್ಷಗಾನ ಕಲಾವಿದೆಯಾಗಿದ್ದು ಹಲವಾರು ಯಕ್ಷಗಾನಗಳಲ್ಲಿ ತನ್ನ ಕಲಾ ಪ್ರತಿಭೆಯನ್ನು ಮೆರೆದಿದ್ದಾರೆ. ಇನ್ನು ಲೀಫ್ ಆರ್ಟ್, ಪೆನ್ಸಿಲ್ ಆರ್ಟ್’ಗಳನ್ನೂ ಮಾಡುವ ಇವರು ಭಜನಾ ತಂಡದಲ್ಲೂ ಕೂಡಾ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ಹಲವಾರು ಮಂಡಲ ಆರ್ಟ್’ಗಳನ್ನು ಬಿಡಿಸುವ ಮೂಲಕ ಗಮನ ಸೆಳೆದಿದ್ದ ಸುರಕ್ಷಾ ಆಚಾರ್ಯ ಇವರ ಹೆಸರು “ಇಂಡಿಯಾ ಬುಕ್ ಆಫ್ ರೆಕಾರ್ಡ್”ನಲ್ಲಿ ಸೇರಿಕೊಂಡಿದೆ.

- Advertisement -

Related news

error: Content is protected !!