Monday, June 15, 2026
spot_imgspot_img
spot_imgspot_img

ಬೆಳ್ತಂಗಡಿ: ಪಿಕಪ್‌ ವಾಹನ ಮತ್ತು ಬೈಕ್‌ ಅಪಘಾತ; ವಿದ್ಯಾರ್ಥಿ ದಾರುಣ ಸಾವು..!

- Advertisement -
- Advertisement -
vtv vitla

ಬೆಳ್ತಂಗಡಿ: ಕೋಳಿ ಸಾಗಾಟದ ಪಿಕಪ್ ವಾಹನ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ ಘಟನ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೊಕ್ರಾಡಿ ಬಳಿ ಇಂದು ಬೆಳಿಗ್ಗೆ ನಡೆದಿದೆ.

ಮೃತ ವಿದ್ಯಾರ್ಥಿಯನ್ನು ಕೊಕ್ರಾಡಿ ಸಮೀಪದ ಉಜ್ವಲ್ (19) ಎಂದು ಗುರುತಿಸಲಾಗಿದೆ.

ಉಜ್ವಲ್‌ ಪ್ರತಿದಿನ ಮೂಡಬಿದಿರೆ ಕಾಲೇಜಿಗೆ ಹೋಗಲು ಮನೆಯಿಂದ ಒಂದು ಕಿ.ಮೀ ದೂರದ ಕುಂಟಲಕಟ್ಟೆ ಎಂಬಲ್ಲಿಯವರೆಗೆ ಬೈಕಿನಲ್ಲಿ ತೆರಳಿ ಅಲ್ಲಿಂದ ಬಸ್ಸಿನಲ್ಲಿ ತೆರಳುತ್ತಿದ್ದರು.

ಆದರೆ ಇಂದು ಬೆಳಗ್ಗೆ ಕೊಲ್ಯಕಾರ್ ಎಂಬಲ್ಲಿ ಮೂಡಬಿದ್ರೆಯಿಂದ ಬೆಳ್ತಂಗಡಿ ಕಡೆಗೆ ಬರುತ್ತಿದ್ದ ಪಿಕಪ್ ವಾಹನ ವಿದ್ಯಾರ್ಥಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಉಜ್ವಲ್ ಅವರು ಗಂಭೀರ ಗಾಯಗೊಂಡಿದ್ದು ತಕ್ಷಣ ಬೆಳ್ತಂಗಡಿ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಆದಾಗಲೇ ಸಾವನ್ನಪ್ಪಿದಾರೆ ಎಂದು ತಿಳಿದು ಎಂದಿದೆ. ಕೋಳಿ ಸಾಗಾಟದ ಪಿಕಪ್ ವಾಹನ ಬೆಳ್ತಂಗಡಿಯದೆಂದು ತಿಳಿದು ಬಂದಿದೆ.

- Advertisement -

Related news

error: Content is protected !!