- Advertisement -
- Advertisement -




ಉಡುಪಿ: ಕಳ್ಳನೊಬ್ಬ ಹಾಡುಹಗಲೇ ವೃದ್ದೆಯ ಕತ್ತಿನಿಂದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ನಗರದ ಶಿವಳ್ಳಿ ಗ್ರಾಮದಲ್ಲಿ ನಡೆದಿದೆ.
ಉಡುಪಿಯ ಶಿವಳ್ಳಿ ಗ್ರಾಮ ನಿವಾಸಿ ಕಮಲಾ (70) ಎಂಬವರು ಶಿವಳ್ಳಿ ಗ್ರಾಮದ ಸಗ್ರಿನೋಲ್ ರಸ್ತೆಯಲ್ಲಿರುವ ತಿರುಮಲ ಪೌಲ್ಟ್ರಿ ಫಾರಂ ಬಳಿಯ ತನ್ನ ಸಹೋದರನ ಮನೆಗೆ ತೆರಳುತ್ತಿದ್ದಾಗ , ಪೆರಂಪಳ್ಳಿ ಕಡೆಯಿಂದ ಬಂದ ಅಪರಿಚಿತ ವ್ಯಕ್ತಿ ಕಮಲಾ ಅವರ ಹಿಂದಿನಿಂದ ಬಂದು ಕತ್ತಿನಲ್ಲಿದ್ದ 16 ಗ್ರಾಂ ಚಿನ್ನದ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದಾನೆ ಎಂದು ದೂರು ದಾಖಲಿಸಿದ್ದಾರೆ
ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
- Advertisement -








