Friday, May 17, 2024
spot_imgspot_img
spot_imgspot_img

ಬೈಂದೂರು: ಕೊಲೆಗೈದು ಕಾರು ಸುಟ್ಟ ಹಂತಕರು; ಮಹಿಳೆ ಸೇರಿ ಮೂವರ ಬಂಧನ

- Advertisement -G L Acharya panikkar
- Advertisement -

ಬೈಂದೂರು: ಇಲ್ಲಿನ ಹೇನುಬೇರು ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿ ಸುಟ್ಟುಹೋದ ಸ್ಥಿತಿಯಲ್ಲಿ ಕಾರು ಹಾಗೂ ಅದರೊಳಕ್ಕೆ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯ ಜಾಡು ಹಿಡಿದು ಹೊರಟ ಬೈಂದೂರು ಪೊಲೀಸರು, ಓರ್ವ ಮಹಿಳೆ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿ. ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯ 4 ದಿನಗಳ ಪೊಲೀಸ್ಟ ಕಸ್ಟಡಿಗೆ ನೀಡಿದೆ.

ಸುಟ್ಟು ಹೋದ ಕಾರಿನ ಚೆಸ್ಸಿಯನ್ನು ಫೊರೆನ್ಸಿಕ್ ತಜ್ಞರ ಸಹಾಯದಿಂದ ಪರಿಶೀಲಿಸಿ, ಮಾಲಕನ ವಿವರಗಳನ್ನು ಪತ್ತೆಹಚ್ಚಲಾಗಿತ್ತು. ಕಾರಿನ ಮಾಲಕ ಕಾರ್ಕಳ ತಾಲೂಕಿನ ಮಾಳ ಗ್ರಾಮದ ನಿವಾಸಿ ಸದಾನಂದ ಶೇರೆಗಾರ್ (54) ಎಂದು ಗುರುತಿಸಲಾಗಿದ್ದು ಆತನೇ ಕಾರಿಗೆ ಬೆಂಕಿ ಹಚ್ಚಿ ಕಾರ್ಕಳ ಮೂಲದ ಮೇಸ್ತ್ರಿ ಆನಂದ ದೇವಾಡಿಗ (55) ಎಂಬಾತನನ್ನು ಕೊಲೆಗೈದಿದ್ದಾನೆ ಎಂಬುದು ದೃಢಪಟ್ಟಿದೆ. ಘಟನೆಯ ಸಂಬಂಧ ಸದಾನಂದ ಶೇರುಗಾರ್ ಹಾಗೂ ಕೃತ್ಯಕ್ಕೆ ಸಹಕರಿಸಿದ ಮಹಿಳೆ ಶಿಲ್ಪಾ (34) ಎಂಬಾಕೆಯನ್ನು ಗುರುವಾರ ಬೆಳಿಗ್ಗೆ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಶಿಲ್ಪ ಎಂಬಾಕೆ ಸದಾನಂದ ಶೇರ್ವೆಗಾರನ ಪತ್ನಿ ಅಲ್ಲ ಪ್ರೇಯಸಿ ಎಂದು ತಿಳಿದುಬಂದಿದೆ. ಶಿಲ್ಪ ಕಾರ್ಕಳದ ಹಿರ್ಗಾನದಳಾಗಿದ್ದಾಳೆ. ಕಾರ್ಕಳದಲ್ಲಿ ಖಾಸಗಿ ಸರ್ವೆಯರ್ ಆಗಿರುವ ಸದಾನಂದ ವೃತ್ತಿಯಲ್ಲಿ ಲೋಪವೆಸಗಿದ್ದು ಪೊಲೀಸ್ ಠಾಣೆಯಲ್ಲಿ ಕೇಸುದಾಖಲಾಗಿತ್ತು್ಆತನ ವಿರುದ್ದ ನ್ಯಾಯಾಲದಿಂದ ಸಮಸ್ಸ್ ಜಾರಿಗೊಂಡಿದ್ದು ಬಂಧನ ಭೀತಿ ಎದುರಿಸುತ್ತಿದ್ದ.ಈ ಎಲ್ಲಾ ಬೆಳವಣಿಗೆಯ ನಡುವೆ ತಾನು ಆತ್ಮಹತ್ಯೆ ಗೈದಿರುವಂತೆ ಬಿಂಬಿಸಲು ಮುಂದಾಗಿರುವ ಸದಾನಂದ ಶೇರ್ವೆಗಾರ ಕೊಲೆ ಪ್ರಕರಣದಲ್ಲಿ ಸಿಲುಕಿದ್ದಾನೆ. ಅದಕ್ಕಾಗಿ ಆತ ಆಯ್ಕೆ ಮಾಡಿಕೊಂಡಿರುವುದು ಕಾರ್ಕಳದ ಕಾಬೆಟ್ಟು ಭಾರತ ಬೀಡಿ ನಿವಾಸಿ ಆನಂದ ದೇವಾಡಿಗ(65) ಎಂಬ ಅಮಾಯಕ ವೃದ್ಧನನ್ನು.

ಸದಾನಂದ ಶೇರೆಗಾರ್ ಜಾಗ ಹಾಗೂ ಹಣದ ವಿಚಾರದಲ್ಲಿನ ಅವ್ಯವಹಾರವನ್ನು ತನ್ನ ಮುಚ್ಚಿಹಾಕಲು, ತಾನೇ ಸತ್ತು ಸಲುವಾಗಿ ಬೇರೊಬ್ಬ ವ್ಯಕ್ತಿಯನ್ನು ತನ್ನ ಕಾರಿನಲ್ಲಿ ಕೂರಿಸಿ ಬೆಂಕಿ ಹಚ್ಚಿ ಕೊಲೆಗೈಯುವ ಪ್ಲಾನ್ ಸೃಷ್ಟಿಸಿದ್ದ. ಮೇ.12ರಂದು ತನಗೆ ಆಪ್ತವಾಗಿದ್ದ ಶಿಲ್ಪ ಎಂಬ ಮಹಿಳೆಯ ಸಹಕಾರ ಪಡೆದು, ಆಕೆಯ ಸ್ನೇಹಿತ ಕಾರ್ಕಳದಲ್ಲಿ ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯನ್ನು ಮಂಗಳವಾರ ಮಧ್ಯಾಹ್ನದ ನಂತರ ಕಾರ್ಕಳದ ಬಾರೊಂದಕ್ಕೆ ಕರೆಯಿಸಿ ಕಂಠಪೂರ್ತಿ ಕುಡಿಸಿದ್ದರು. ರಾತ್ರಿಯಾಗುತ್ತಿದ್ದಂತೆ ಆತನನ್ನು ಪುಸಲಾಯಿಸಿ ನಿದ್ರೆ ಮಾತ್ರೆಯನ್ನು ನುಂಗಿಸಿ ಬೈಂದೂರಿನ ಕಡೆಗೆ ಬಂದಿದ್ದರು. ಮಂಗಳವಾರ ರಾತ್ರಿ 12.30ರ ಸುಮಾರಿಗೆ ಸಾಸ್ತಾನ ಟೋಲ್ ಗೇಟಿನಲ್ಲಿ ಬೈಂದೂರು ಕಡೆಗೆ ತೆರಳಿರುವುದು ದೃಡಪಟ್ಟಿದ್ದಲ್ಲದೇ, ಟೋಲ್ ಗೇಟಿನಲ್ಲಿ ಮಹಿಳೆಯೋರ್ವಳು ಕಾರಿನಿಂದ ಇಳಿದು ಟೋಲ್ ನೀಡಿರುವ ದೃಶ್ಯ ಸೆರೆಯಾಗಿತ್ತು. ಅಲ್ಲಿಂದ ಬೈಂದೂರು ಒತ್ತಿನಣೆ ಸಮೀಪ ಹೇನುಬೇರು ನಿರ್ಜನ ಪ್ರದೇಶವೆಂಬದು ಅರಿತು ಅಲ್ಲಿಯೇ ಕಾರು ತಂದು ನಿಲ್ಲಿಸಿದ್ದಾರೆ. ನಿದ್ರೆ ಮಾತ್ರೆಯ ಮಂಪರಿನಲ್ಲಿದ್ದ ವ್ಯಕ್ತಿ ಕಾರಿನ ಒಳಕ್ಕೆ ಇರುವಾಗಲೇ ಕಾರಿಗೆ ಬೆಂಕಿ ಹಚ್ಚಿದ್ದಾರೆ. ಅಲ್ಲಿಂದ ಪರಾರಿಯಾಗಿದ್ದಾರೆ.

ನಂತರ ತಲೆಮರೆಸಿಕೊಳ್ಳುವ ಸಲುವಾಗಿ ಬೆಂಗಳೂರಿಗೆ ಬಸ್ಸಿನಲ್ಲಿ ಹೊರಟಿದ್ದ ಸದಾನಂದ ಹಾಗೂ ಶಿಲ್ಪ, ಬಸ್ ಹಾಳಾಗಿದ್ದರಿಂದ ಮತ್ತೆ ಮೂಡುಬಿದಿರೆಗೆ ವಾಪಾಸಾಗಿದ್ದಾರೆ. ಅಲ್ಲಿಂದ ಕಾರ್ಕಳಕ್ಕೆ ಬೆಳಿಗ್ಗೆ ಬಸ್ಸಿನಲ್ಲಿ ಬರುತ್ತಿದ್ದ ಸಂದರ್ಭ ಪೊಲೀಸರು ಗುರುವಾರ ವಶಕ್ಕೆ ಪಡೆದಿದ್ದಾರೆ. ಕೃತ್ಯಕ್ಕೆ ಸಹಕರಿಸಿದ ಸದಾನಂದನ ಸಂಬಂಧಿಗಳಾದ ಇಬ್ಬರು ವ್ಯಕ್ತಿಗಳನ್ನೂ ಇದಕ್ಕೂ ಮೊದಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತನಿಕೆಯ ಜಾಡು ಹಿಡಿದು ಹೊರಟ ಬೈಂದೂರು ಪೊಲೀಸರು ಶೀಘ್ರವಾಗಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ತನಿಖೆ ಮುಂದುವರಿಸಿದ್ದಾರೆ. ಅವರಿಗೆ ಸಹಕರಿಸಿದ್ದರು ಎನ್ನಲಾದ ಇಬ್ಬರನ್ನು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ಒಂದೇ ದಿನದಲ್ಲಿ ಪ್ರಕರಣ ಭೇದಿಸಿದ ಪೊಲೀಸರಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಉಡುಪಿ ಎಸ್‌ಪಿ ವಿಷ್ಣುವರ್ಧನ್ ಅವ ಮಾರ್ಗದರ್ಶನದಲ್ಲಿ ಎಎಸ್‌ಪಿ ಸಿದ್ಧಲಿಂಗಯ್ಯ ಹಾಗೂ ಡಿವೈಎಸ್‌ಪಿ ಶ್ರೀಕಾಂತ್ ಕೆ. ಅವರ ನಿರ್ದೇಶನದಲ್ಲಿ, ಬೈಂದೂರು ವೃತ್ತನಿರೀಕ್ಷಕ ಸಂತೋಷ್ ಕಾಯ್ಕಿಣಿ ಅವರ ನೇತೃತ್ವದಲ್ಲಿ ಬೈಂದೂರು ಪಿಎಸ್‌ಐ ಪವನ್ ನಾಯಕ್ ಗಂಗೊಳ್ಳಿ ಪಿಎಸ್‌ಐ ವಿನಯ ಕೊರ್ಲಹಳ್ಳಿ, ಪೊಲೀಸ್ ಕಾನ್ಸ್‌ಟೇಬಲ್‌ಗಳಾದ ನಾಗೇಂದ್ರ, ಮೋಹನ, ಕೃಷ್ಣ, ಶ್ರೀಧರ, ಪ್ರಿನ್ಸ್, ಚಂದ್ರ ಗಂಗೊಳ್ಳಿ, ಚಾಲಕ ಚಂದ್ರಶೇಖರ್, ಸುಜಿತ್, ಶ್ರೀನಿವಾಸ್, ಶಾಂತರಾಮ ಶೆಟ್ಟಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

- Advertisement -

Related news

error: Content is protected !!