Wednesday, July 1, 2026
spot_imgspot_img
spot_imgspot_img

ಬೈಕ್ ನಿಲ್ಲಿಸಿ ಡ್ರಾಪ್ ಕೇಳಿದ ಅಪರಿಚಿತ ಯುವತಿ; ನಿರ್ಜನ ಪ್ರದೇಶಕ್ಕೆ ಕರೆದೊಯ್ದಾಗ ಯುವಕನಿಗೆ ಬಿಗ್ ಶಾಕ್!

- Advertisement -
- Advertisement -

ವಿಜಯನಗರ: ಅಪರಿಚಿತ ಯುವತಿಯೊಬ್ಬಳು ಡ್ರಾಪ್​ ಕೇಳಿದಳೆಂದು ಆಕೆಯನ್ನು ಬೈಕ್​ ನಲ್ಲಿ ಕೂರಿಸಿಕೊಂಡು ಹೋದ ಯುವಕನಿಗೆ ಕಾದಿತ್ತೊಂದು ಬಿಗ್ ಶಾಕ್ ಘಟನೆ ಆಂಧ್ರ ಪ್ರದೇಶದ ವಿಜಯನಗರದಲ್ಲಿ ನಡೆದಿದೆ.

ವಿಜಯನಗರದಿಂದ ಗಜಪತಿ ನಗರದ ಕಡೆಗೆ ಬೈಕ್​ನಲ್ಲಿ ಬರುತ್ತಿದ್ದ ಯುವಕನ ಬಳಿ ಯುವತಿಯೊಬ್ಬಳು ಡ್ರಾಪ್ ಕೇಳಿದ್ದು, ಯುವಕ ಬೈಕ್​ ನಿಲ್ಲಿಸಿ ಆಕೆಯನ್ನು ಕೂರಿಸಿಕೊಂಡಿದ್ದಾನೆ. ಬಳಿಕ ದವಳಪೇಟೆ ಸೇತುವೆ ಬಳಿಕ ಬೈಕ್​ ನಿಲ್ಲಿಸುವಂತೆ ಹೇಳುತ್ತಾಳೆ. ಅಲ್ಲಿ ಸುತ್ತಮುತ್ತ ಯಾರು ಇಲ್ಲದಿರುವುದನ್ನು ಗಮನಿಸಿದ ಆಕೆ ಬೈಕ್​ ಅನ್ನು ಕೆಳಗಡೆ ತೆಗೆದುಕೊಂಡು ಹೋಗುವಂತೆ ಹೇಳುತ್ತಾಳೆ. ಸರಿ ಅಂತ ಆತ ಕೆಳಗಡೆ ತೆಗೆದುಕೊಂಡು ಹೋಗುತ್ತಾನೆ. ಬಳಿಕ ಬೈಕ್​ನಿಂದ ಕೆಳಗಿಳಿದ ಯುವತಿ ಯುವಕನನ್ನು ಬೆದರಿಸಿ ಆತನಿಂದ ಚಿನ್ನದ ಸರವನ್ನು ಕಸಿದುಕೊಂಡು ಅಲ್ಲಿಂದ ಪರಾರಿಯಾಗುತ್ತಾಳೆ.

ಇದಾದ ಬಳಿಕ ಯುವಕ ಜೋರಾಗಿ ಕೂಗಿಕೊಳ್ಳುತ್ತಾನೆ. ಅದನ್ನು ಕೇಳಿದ ಸ್ಥಳೀಯರು ಓಡಿ ಬಂದು ನೋಡಿದಾಗ ಆತ ಹೇಳಿದನ್ನು ಕೇಳಿ, ಯುವತಿ ಓಡಿ ಹೋಗುತ್ತಿರುವುದನ್ನು ನೋಡಿ ಆಕೆಯನ್ನು ಹಿಡಿದುಕೊಳ್ಳುತ್ತಾರೆ. ಕೂಡಲೇ ಆಕೆಯನ್ನು ಸ್ಥಳೀಯ ಪೊಲೀಸ್​ ಠಾಣೆಗೆ ಒಪ್ಪಿಸುತ್ತಾರೆ.

- Advertisement -

Related news

error: Content is protected !!