
ಬೈರಂಪಳ್ಳಿ 41ನೇ ಶೀರೂರು ನ್ಯೂ ಕಲ್ಲಾಳ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಕಾರ್ಯಕ್ರಮ ಬೈರಂಪಳ್ಳಿ ಗ್ರಾಂ ಪಂ ಸದಸ್ಯರಾದ ಸಂತೋಷ್ ಮಾ ರ್ಬೈರಂಪಳ್ಳಿಯವರ ಅಧ್ಯಕ್ಷತೆಯಲ್ಲಿ ಜರಗಿತು.

ಶಾಲಾ ಮಕ್ಕಳಲ್ಲಿ ಹೊಸತನದ ಹುಮ್ಮಸ್ಸಿನೊಂದಿಗೆ ಪುಷ್ಪ, ಬಲೂನ್, ಸಿಹಿ ತಿನಿಸುಗಳನ್ನು ಕೊಟ್ಟು ಪ್ರೀತಿಯಿಂದ ಬರಮಾಡಿಕೊಳ್ಳಲಾಯಿತು.

ಶ್ರಮಿಕ ತರುಣರ ತಂಡ ಬೈರಂಪಳ್ಳಿ ಸೇವಾಟ್ರಸ್ಟ್ ವತಿಯಿಂದ 2022 ರ 1ರಿಂದ 5ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷಕ್ಕೆ ಬೇಕಾದ ಸುಮಾರು 25000 ವೆಚ್ಚದ ಪಠ್ಯ ಪುಸ್ತಕಗಳನ್ನು, ಬ್ಯಾಗ್,ಛತ್ರಿ ಮತ್ತಿತರ ಸಾಮಗ್ರಿಗಳನ್ನು ತಂಡದ ಸಂಸ್ಥಾಪಕರಾದ ಸಂತೋಷ್ಕುಮಾರ್ಬೈರಂಪಳ್ಳಿ, ಗೌರವಾಧ್ಯಕ್ಷರಾದ ಪ್ರಕಾಶ್ಕುಲಾಲ್ , ಅಧ್ಯಕ್ಷರಾದ ರಘುನಾಥ್ ಪೂಜಾರಿ ತಂಡದ ಮಹಿಳಾ ಘಟಕದ ಅಧ್ಯಕ್ಷರಾದ ಸಂಪಾವತಿ ಪೂಜಾರಿ ಯವರುಗಳು ವಿತರಿಸಿ ಪುಟಾಣಿಗಳ ಭವಿಷ್ಯದ ಶೈಕ್ಷಣಿಕ ಜೀವನಕ್ಕೆ ಹಾಗೂ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರು ಉಮೇಶ್ ನಾಯ್ಕ ಮತ್ತು ಶಿಕ್ಷಕ ವರ್ಗ, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಶಶಿಕಲಾ_ಪೂಜಾರಿ ಮತ್ತು ಸರ್ವ ಸದಸ್ಯರು, ಶ್ರಮಿಕ ತರುಣರ ತಂಡ ಬೈರಂಪಳ್ಳಿ ಸರ್ವ ಸದಸ್ಯರು ಮತ್ತು ಮಕ್ಕಳ ಪೋಷಕರು, ಊರಿನ ಗಣ್ಯರು,ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.










