Wednesday, May 8, 2024
spot_imgspot_img
spot_imgspot_img

ಬೋರ್‌ವೆಲ್‌ ಹೊಂಡಕ್ಕೆ ಬಿದ್ದ ಬಾಲಕ – 110 ಗಂಟೆಗಳ ಕಾರ್ಯಾಚರಣೆ ಬಳಿಕ ರಕ್ಷಣೆ..!

- Advertisement -G L Acharya panikkar
- Advertisement -

ಭುವನೇಶ್ವರ: 110 ಗಂಟೆಗಳ ಪರಿಶ್ರಮದ ನಂತರ ಕರ್ಗತ್ತಲಿನ , ನೀರು ತುಂಬಿದ ಬೋರ್‌ವೆಲ್‌ನಲ್ಲಿ 80 ಅಡಿ ಆಳದಲ್ಲಿ ಸಿಲುಕಿದ್ದ ರಾಹುಲ್‌ ಸಾಗುವನ್ನು ಸೇನಾ ಸಿಬ್ಬಂದಿ ಅಂತಿಮವಾಗಿ ಮಂಗಳವಾರ ಮಧ್ಯರಾತ್ರಿಯ ಮೊದಲು ಹೊರತೆಗೆದಿದ್ದಾರೆ. 10 ವರ್ಷದ ರಾಹುಲ್ ಸಾಹುರನ್ನು ಸುರಂಗದ ಬಾವಿಯಿಂದ ಹೊರತೆಗೆದ ತಕ್ಷಣ ಪ್ರಥಮ ಚಿಕಿತ್ಸೆ ನೀಡಿ ನಂತರ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಪಿಹ್ರಿದ್ ಗ್ರಾಮದ ರಾಹುಲ್ ಶುಕ್ರವಾರ ಮಧ್ಯಾಹ್ನ ಮನೆಯ ಹಿಂದೆ ಆಟವಾಡುತ್ತಿದ್ದಾಗ ಬೋರ್‌ವೆಲ್‌ ಹೊಂಡಕ್ಕೆ ಬಿದ್ದಿದ್ದರು. ಘಟನೆಯ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ಲಭಿಸಿದ ತಕ್ಷಣ ಸಂಜೆಯಿಂದಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿತ್ತು. ಜಿಲ್ಲಾಧಿಕಾರಿ ಜಿತೇಂದ್ರ ಶುಕ್ಲಾ ನೇತೃತ್ವದ ಜಿಲ್ಲಾಡಳಿತ ತಂಡ ಪಿಹ್ರಿದ್ ಗ್ರಾಮಕ್ಕೆ ತಲುಪಿದ್ದು, ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದರು. 300 ಅಧಿಕಾರಿಗಳು ಮತ್ತು ನೌಕರರ ತಂಡ ಐದು ದಿನಗಳ ಕಾಲ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿತ್ತು.

ಮಗುವಿನ ಧೈರ್ಯ ಮತ್ತು ಸ್ಥಿತಪ್ರಜ್ಞತೆಯೇ ರಕ್ಷಣಾ ತಂಡಕ್ಕೆ ಕಾರ್ಯಾಚರಣೆಯ ಯಶಸ್ವಿಗೊಳಿಸುವ ಭರವಸೆಯನ್ನು ಸುಮಾರು ಐದು ದಿನಗಳವರೆಗೆ ನೀಡಿತು. ಬೋರ್‌ವೆಲ್‌ನಲ್ಲಿ ರಾಹುಲ್ ಜೊತೆಗೆ ಹಾವು , ಕಪ್ಪೆಗಳು ಇದ್ದು ಈ ವಿಚಾರ ಈಗ ಹಂಚಿಕೊಳ್ಳುತ್ತಿದ್ದೇನೆ. ಆತ ಅದರೊಂದಿಗೆ ಹೋರಾಡಿದ್ದ ಎಂಬ ಆಲೋಚನೆಯು ನನ್ನನ್ನು ಒಳಗಿನಿಂದ ಭೀತಗೊಳಿಸುತ್ತದೆ ಎಂದು ಕಾರ್ಯಾಚರಣೆಯ ವೇಳೆ ಸ್ಥಳದಲ್ಲೇ ಇದ್ದ ಜಿಲ್ಲಾಧಿಕಾರಿ ಜಿತೇಂದ್ರ ಶುಕ್ಲಾ ಪ್ರತಿಕ್ರಿಯಿಸಿದ್ದಾರೆ.

ಶುಕ್ರವಾರ ಮಧ್ಯಾಹ್ನ 2 ಗಂಟೆಯಿಂದ 80 ಅಡಿ ಆಳದ ಬೋರ್‌ವೆಲ್‌ನಲ್ಲಿ ಸಿಕ್ಕಿಬಿದ್ದ ರಾಹುಲ್ ಸೋಮವಾರದ ಬಳಿಕ ತೀರಾ ದುರ್ಬಲಗೊಂಡಿದ್ದ, ಮಂಗಳವಾರ, ಅವರ ಪ್ರತಿಕ್ರಿಯೆಗಳು ದುರ್ಬಲಗೊಂಡವು, ಹಗ್ಗದ ಮೂಲಕ ನೀಡಲಾದ ಆಹಾರವನ್ನು ಸ್ವೀಕರಿಸಿರಲಿಲ್ಲ.ಆದರೆ ಅವರು ಪ್ರತಿ ಬಾರಿಯೂ ರಕ್ಷಣಾ ತಂಡಕ್ಕೆ ಪ್ರತಿಕ್ರಿಯಿಸಲು ಪ್ರಯತ್ನಿಸುತ್ತಿದ್ದ. ಬೋರ್‌ವೆಲ್‌ಗೆ ಇಳಿಸಲಾಗಿದ್ದ ಕ್ಯಾಮೆರಾಗಳು, ಕತ್ತಲೆಯಾದ ಒದ್ದೆಯಾದ ಬೋರ್‌ವೆಲ್‌ನಲ್ಲಿ ಅಲುಗಾಡಲು ಜಾಗವಿಲ್ಲದೆ ರಾಹುಲ್ ತನ್ನ ಕುಳಿತಿರುವುದನ್ನು ತೋರಿಸುತ್ತಿತ್ತು.

ಸೋಮವಾರ ಬೋರ್‌ವೆಲ್‌ನಲ್ಲಿ ನೀರು ತುಂಬಿದ್ದರಿಂದ ರಾಹುಲ್‌ನ ದೇಹದ ಅರ್ಧಕ್ಕೂ ಹೆಚ್ಚು ಭಾಗ ನೀರಿನಲ್ಲಿ ಮುಳುಗಿತ್ತು. ಜಿಲ್ಲಾಧಿಕಾರಿ ತಕ್ಷಣವೇ ಹತ್ತಿರದ ಎರಡು ಅಣೆಕಟ್ಟುಗಳನ್ನು ತೆರೆಯಲು ಅಧಿಕಾರಿಗಳಿಗೆ ಆದೇಶಿಸಿದರು . ಇದಲ್ಲದೆ ತಮ್ಮ ಬೋರ್‌ಗಳನ್ನು ಹೆಚ್ಚು ಹೆಚ್ಚು ಬಳಸಿಕೊಳ್ಳಲು ಗ್ರಾಮಸ್ಥರಲ್ಲಿ ಮನವಿ ಮಾಡಿದರು. ನೀರಿನ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡಿತು. ರಕ್ಷಣಾ ತಂಡದಲ್ಲಿ ಭಾಗಿಯಾಗಿರುವ ಎಲ್ಲಾ ಅಧಿಕಾರಿಗಳು ಮತ್ತು ನೌಕರರನ್ನು ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅಭಿನಂದಿಸಿದ್ದಾರೆ.

- Advertisement -

Related news

error: Content is protected !!