
ಉಡುಪಿ: ಬೆಂಗಳೂರಿನ ಜೋಡಿ ಇಂದು ಬೆಳಿಗ್ಗೆ ಉಡುಪಿಯ ಮಂದಾರ್ತಿ ಬಳಿ ಕಾರಿನಲ್ಲಿ ಆತ್ಮಹತ್ಯೆ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಹೊತ್ತಿ ಉರಿಯುತ್ತಿರುವ ಕಾರಿನಲ್ಲಿ ಪತ್ತೆಯಾದ ಮೃತದೇಹ ಕಂಡು ಸಾರ್ವಜನಿಕರು ಪೊಲೀಸರಿಗೆ ತಿಳಿಸಿದ್ದರು. ಇದೀಗ ಸಾವಿಗೆ ಸಂಬಂದಿಸಿ ಮಹತ್ವದ ಮಾಹಿತಿ ಸಿಕ್ಕಿದೆ.

ಬೆಂಗಳೂರಿನ ಹೆಬ್ಬಾಳದ ಯಶವಂತ್ (23) ಮತ್ತು ಜ್ಯೋತಿ (23) ಆತ್ಮಹತ್ಯೆ ಮಾಡಿಕೊಂಡಿದ್ದರು. ಇವರು ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು.
ಮಂಗಳೂರಿಗೆ ಬೆಂಗಳೂರಿನಿಂದ ಬೈಕ್ ನಲ್ಲಿ ಬಂದ ಜೋಡಿ ಆತ್ಮಹತ್ಯೆಗೆ ಮೊದಲು ಮಂಗಳೂರಿನ ಬೀಚ್ ಸೇರಿ ಹಲವೆಡೆ ಸುತ್ತಾಡಿದ್ದರು.

ನಿನ್ನೆ ಜೋಡಿ ಮದುವೆ ಮಾಡಿಕೊಂಡ ನಂತರ ಮನೆಗೆ ಕರೆ ಮಾಡಿದ್ದಾರೆ. ಆದರೆ ಮನೆಯವರು ಇದಕ್ಕೆ ವಿರೋಧಿಸಿದ ಕಾರಣ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಇವರು ಮದುವೆ ಮಾಡಿಕೊಂಡು ಪೋಟೋಗಳನ್ನು ಕುಟುಂಬಸ್ತರಿಗೆ ಕಳುಹಿಸಿದ್ದಾರೆ. ಇದಕ್ಕೆ ಕುಟುಂಬಸ್ಥರು ನಿರಾಕರಿಸಿದ್ದಾರೆ. ಈ ಹಿನ್ನೆಲೆ ಸಂಜೆ ವೇಳೆಗೆ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದರು.

ಮಂಗಳೂರಿನಿಂದ ಕಾರು ಬಾಡಿಗೆಗೆ ಪಡೆದ ಜೋಡಿ ಬಾಟೆಲ್ ನಲ್ಲಿ ಪೆಟ್ರೋಲ್ ತೆಗೆದುಕೊಂಡು ಮಧ್ಯ ರಾತ್ರಿವರೆಗೂ ಸುತ್ತಾಡಿ ಬಳಿಕ ತಡ ರಾತ್ರಿ 2 ಗಂಟೆಗೆ ಕುಟುಂಬಸ್ಥರಿಗೆ ಮೆಸೇಜ್ ಮಾಡಿದ್ದಾರೆ.
ಪ್ರೀತಿಸಿದವರನ್ನು ಬಿಡಲು ಸಾಧ್ಯವಿಲ್ಲ. ಇದರಿಂದಾಗಿ ನಾವು ಆತ್ಮಹತ್ಯೆ ಮಾಡುತ್ತೇವೆ ನಮ್ಮನ್ನು ಕ್ಷಮಿಸಿಬಿಡಿ ಎಂದು ಪೋಷಕರಿಗೆ ಮೆಸೇಜ್ ಮಾಡಿದ್ದಾರೆ. ಮೆಸೇಜ್ ನಂತರ ಕುಟುಂಬಸ್ಥರಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಳದಿಂದ ಲೋಕೇಶನ್ ಹಂಚಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.









