Thursday, May 2, 2024
spot_imgspot_img
spot_imgspot_img

ಭಾರತದಲ್ಲಿ ರಾಷ್ಟ್ರೀಯ ನಾಗರಿಕರ ನೋಂದಣಿ ಪ್ರಕ್ರಿಯೆ ಆರಂಭ

- Advertisement -G L Acharya panikkar
- Advertisement -

ನವದೆಹಲಿ: ಕೇಂದ್ರ ಗೃಹ ಸಚಿವಾಲಯವು ಎಲ್ಲಾ ಭಾರತೀಯ ನಾಗರಿಕರ ರಾಷ್ಟ್ರೀಯ ಅಂಕಿ-ಅಂಶಗಳನ್ನು ನೋಂದಣಿ ಮಾಡಿಕೊಳ್ಳುವ ಯೋಜನೆಯನ್ನು ಆರಂಭಿಸಿದೆ.

ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವ ಕೊನೆಯ ಪ್ರಸ್ತಾಪವು ಸ್ವಯಂಪ್ರೇರಿತವಾಗಿದ್ದರೂ, ಚುನಾವಣಾ ಆಯೋಗವು ಜನಪ್ರತಿನಿಧಿ ಕಾಯ್ದೆಯನ್ನು ತಿದ್ದುಪಡಿ ಮಾಡಲು ಶಿಫಾರಸು ಮಾಡಿದಾಗ ಸಂಸತ್ತಿನಲ್ಲಿ ತೀವ್ರ ವಿರೋಧಕ್ಕೆ ಕಾರಣವಾಗಿದ್ದು, ಈಗ ಸರ್ಕಾರವು ಈ ಡೇಟಾಬೇಸ್ ಅನ್ನು ಜನಸಂಖ್ಯೆಯ ನೋಂದಣಿ ಮತ್ತು ಮತದಾರರ ಪಟ್ಟಿಗಳು, ಆಧಾರ್ ಕಾರ್ಡ್, ಪಡಿತರ ಚೀಟಿ, ಪಾಸ್‌ಪೋರ್ಟ್ ಮತ್ತು ಡ್ರೈವಿಂಗ್ ಲೈಸೆನ್ಸ್‌ಗಳೊಂದಿಗೆ ಸಂಯೋಜಿಸಲು ಬಯಸಿದೆ. ಜನನ ಮತ್ತು ಮರಣಗಳ ನೋಂದಣಿ ಕಾಯ್ದೆಗೆ ತಿದ್ದುಪಡಿ ಮಾಡಲು ಕ್ಯಾಬಿನೆಟ್ ಟಿಪ್ಪಣಿಯನ್ನು ಮುಂದಿಟ್ಟಿದೆ.

ಇನ್ನು ಭಾರತದ ರಿಜಿಸ್ಟ್ರಾರ್ ಜನರಲ್ ಈ ಡೇಟಾಬೇಸ್ ಅನ್ನು ನಿರ್ವಹಿಸುತ್ತಾರೆ. ಇದನ್ನು ನಿರ್ವಹಿಸಲು ರಾಜ್ಯಗಳಲ್ಲಿನ ಮುಖ್ಯ ರಿಜಿಸ್ಟ್ರಾರ್‌ಗಳೊಂದಿಗೆ ಅವರು ಕೆಲಸ ಮಾಡುತ್ತಾರೆ.

ಆಧಾರ್, ಪಡಿತರ ಚೀಟಿಗಳು, ಮತದಾರರ ಪಟ್ಟಿಗಳು, ಪಾಸ್‌ಪೋರ್ಟ್‌ಗಳು ಮತ್ತು ಡ್ರೈವಿಂಗ್ ಲೈಸೆನ್ಸ್‌ಗಳ ಉಸ್ತುವಾರಿ ಹೊಂದಿರುವ ವಿವಿಧ ಏಜೆನ್ಸಿಗಳೊಂದಿಗೆ ಇದು ನಿಯತಕಾಲಿಕವಾಗಿ ಅಪ್ ಡೇಟ್ ಆಗುತ್ತಿರುತ್ತದೆ.

- Advertisement -

Related news

error: Content is protected !!