Friday, July 30, 2021
spot_imgspot_img
spot_imgspot_img

ಮದುವೆಗೆ ಒಪ್ಪದ ಬಾಲಕಿಯನ್ನು 1 ಲಕ್ಷ ರೂ. ಗೆ ಮಾರಾಟ ಮಾಡಿದ ಹೆತ್ತವರು!

- Advertisement -
- Advertisement -

ಜೈಪುರ್: ಅಪ್ರಾಪ್ತ ವಯಸ್ಸಿನ ಬಾಲಕಿ ಮದುವೆಯಾಗಲು ನಿರಾಕರಿಸಿದಾಗ, ಹೆತ್ತವರು 1 ಲಕ್ಷರೂಪಾಯಿಗೆ ಮಗಳನ್ನು ಮಾರಾಟ ಮಾಡಿರುವ ಘಟನೆ ರಾಜಸ್ಥಾನದ ಬರಾನ್ ಜಿಲ್ಲೆಯಲ್ಲಿ ನೆಡೆದಿದೆ.13 ವರ್ಷದ ಅಪ್ರಾಪ್ತ ಬಾಲಕಿ ಬಿಹಾರ ಮೂಲದವಳಾಗಿದ್ದಾಳೆ.

ಮದುವೆ ನೆಪದಲ್ಲಿ ಬಾಲಕಿಯನ್ನು ಬೇರೆಯವರಿಗೆ ಮಾರಾಟ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಮಾನವ ಕಳ್ಳಸಾಗಣೆ ಆರೋಪದ ಮೇಲೆ ಬಾಲಕಿಯ ತಾಯಿ ಸೇರಿದಂತೆ ಐವರನ್ನು ಬಂಧಿಸಿದ್ದೇವೆ. ಬಾಲಕಿಯನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಸುದ್ದಿಯನ್ನು ತಿಳಿದ ನಾವು ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ್ದೇವೆ. ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಿದ್ದೇವೆ ಎಂದು ಬಾರನ್ ಜಿಲ್ಲೆಯ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ವಿಜಯ್ ಸ್ವರೂಪ್ ಅವರು ಈ ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದಾರೆ.

ಬಾಲಕಿ ಕುಟುಂಬ 1ಲಕ್ಷ ರೂಪಾಯಿಗೆ ಆಕೆಯನ್ನುಮಾರಾಟ ಮಾಡಿದೆ. ಬಾಲಕಿ ಮದುವೆಗೆ ಒಪ್ಪಿಲ್ಲ ಆಗ ಆಕೆಯನ್ನು ಮಾರಾಟ ಮಾಡಲಾಗಿದೆ ಎಂದು ತಿಳಿದು ಬಂದಿದೆ ಎಂದು ತಿಳಿಸಿದ್ದಾರೆ. ಮದುವೆಯಾಗಲು ನಾನು ಒಪ್ಪದೇ ಇದ್ದಾಗ ನನ್ನನ್ನು ಹೆತ್ತವರು ಚಂಡಿಕೇಡಿಯಲ್ಲಿ ವಾಸಿಸುತ್ತಿದ್ದ ಗೀತಾ ಸಿಂಗ್ ಅವರ ಬಳಿಗೆ ಕರೆತಂದರು. ಆಗ ಅಲ್ಲಿ 1 ಲಕ್ಷದ 21 ಸಾವಿರ ರೂ.ಗೆ ನನ್ನನ್ನು ಮಾರಿದ್ದಾರೆ.

ನಂತರ ಡಿಸೆಂಬರ್ 24 ರಂದು ಮುಖೇಶ್ ಎಂಬ ವ್ಯಕ್ತಿಯೊಂದಿಗೆ ನನ್ನ ಮದುವೆ ಮಾಡಿದ್ದಾರೆ ಎಂದು ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ. ಪೊಲೀಸರು 8 ಜನರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. 5 ಜನರನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

- Advertisement -
- Advertisement -

MOST POPULAR

HOT NEWS

Related news

error: Content is protected !!