Wednesday, April 24, 2024
spot_imgspot_img
spot_imgspot_img

ಏರ್ಟೆಲ್, ವೊಡಾಫೋನ್ ಬಳಿಕ ಈಗ ಜಿಯೋ ರೀಚಾರ್ಜ್ ದರದಲ್ಲಿ ಏರಿಕೆ..!

- Advertisement -G L Acharya panikkar
- Advertisement -
vtv vitla
vtv vitla
vtv vitla

ಭಾರತಿ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ನಂತರ ಭಾರತದ ನಂಬರ್ ಒನ್ ಮೊಬೈಲ್ ಆಪರೇಟರ್ ರಿಲಯನ್ಸ್ ಜಿಯೋ ಕೂಡ ದರ ಏರಿಕೆ ಶಾಕ್ ನೀಡಿದ್ದು, ಮುಂದಿನ ತಿಂಗಳಿನಿಂದ ತನ್ನ ಪ್ರಿಪೇಯ್ಡ್ ದರಗಳಲ್ಲಿ ಶೇಕಡಾ 21 ರಷ್ಟು ಹೆಚ್ಚಳ ಮಾಡುವುದಾಗಿ ಘೋಷಿಸಿದೆ.

ದೇಶದ ಪ್ರಮುಖ ಖಾಸಾಗಿ ಟೆಲಿಕಾಂ ಕಂಪೆನಿಗಳಾದ ಜಿಯೋ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ (Vi) ಎಲ್ಲವೂ ಒಂದು ವಾರದೊಳಗೆ ಪ್ರೀಪೇಡ್ ರೀಚಾರ್ಜ್ ಬೆಲೆಗಳ ಹೆಚ್ಚಳವನ್ನು ಘೋಷಿಸಿವೆ.

ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಕಂಪೆನಿಗಳು ಬೆಲೆ ಏರಿಕೆ ಬಗ್ಗೆ ಅಷ್ಟೇನೂ ಚಿಂತಿಸಿದ ಗ್ರಾಹಕರಿಗೆ ಇದು ಬರಸಿಡಿಲಿನಂತೆ ಎದುರಾದ ಸುದ್ದಿಯಾಗಿದ್ದು, ರಿಲಯನ್ಸ್ ಜಿಯೋ ಕೂಡ ತನ್ನ ಪ್ರಿಪೇಡ್ ಬೆಲೆಗಳನ್ನು ಹೆಚ್ಚಿಸಿರುವುದನ್ನು ನೋಡಿ ದೇಶದ ಬೆಸ್ತುಬಿದ್ದಿದ್ದಾರೆ. ಜಿಯೋ ಈಗ ತನ್ನ ತನ್ನ ಕೆಲವು ಜನಪ್ರಿಯ ಯೋಜನೆಗಳ ಬೆಲೆಗಳನ್ನು 480 ರೂ. ವರೆಗೆ ಹೆಚ್ಚಿಸುವ ಮೂಲಕ ಗ್ರಾಹಕರಿಗೆ ದೊಡ್ಡ ಶಾಕ್ ನೀಡಿದೆ.

vtv vitla

ಜಿಯೋದ ಡಾಟಾ ಟಾಪ್‌ಅಪ್‌ ಪ್ಲಾನ್‌ಗಳ ದರಗಳೂ ಏರಿಕೆಯಾಗಲಿವೆ. ಈಗ 6GB ಡೇಟಾಗೆ 51 ರೂ. ದರವಿದ್ದು ಇದು 61 ರೂ. ಗೆ ಏರಿಕೆಯಾಗಲಿದೆ. 12GB ಡೇಟಾ ದರ 101 ರೂ. ನಿಂದ 121 ರೂ. ಗೆ, 50GB ಡೇಟಾ ದರ 251 ರೂ. ನಿಂದ 301 ರೂ. ಗೆ ಹೆಚ್ಚಳ ಮಾಡಲಾಗಿದೆ.

vtv vitla
- Advertisement -

Related news

error: Content is protected !!