Monday, June 15, 2026
spot_imgspot_img
spot_imgspot_img

ಭಾರತದಲ್ಲಿ ಸೆಮಿಕಂಡಕ್ಟರ್ ಉತ್ತೇಜನಕ್ಕೆ ₹76 ಸಾವಿರ ಕೋಟಿ ಘೋಷಣೆ

- Advertisement -
- Advertisement -
vtv vitla
vtv vitla

ನವದೆಹಲಿ: ಇಂದು ಇಡೀ ವಿಶ್ವದಲ್ಲಿ ಬಂಗಾರಕ್ಕಿಂತ ಮಹತ್ವದ್ದು ಯಾವುದ್ದಾದ್ರೂ ಇದ್ರೆ ಅದು ಸೆಮಿಕಂಡಕ್ಟರ್ಸ್​​​. ಇಂದು ಇಡೀ ವಿಶ್ವವೇ ಸೆಮಿಕಂಡಕ್ಟರ್ ಚಿಪ್​ಗಳ ಅಭಾವವನ್ನು ಎದುರಿಸುತ್ತಿದೆ. ಇಷ್ಟು ದಿನ ಸೆಮಿಕಂಡಕ್ಟರ್​​​ಗಾಗಿ ಚೀನಾದ ಮೇಲೆ ಇಡೀ ವಿಶ್ವ ಅವಲಂಬಿತವಾಗಿತ್ತು. ಜೊತೆಗೆ ತೈವಾನ್ ಕೂಡ ಸಾಕಷ್ಟು ಮುಂಚೂಣಿಯನ್ನು ಈ ರಂಗದಲ್ಲಿ ಕಾಯ್ದುಕೊಂಡಿದೆ. ಆದ್ರೆ ಕೋವಿಡ್, ಅಮೆರಿಕನ್ ಸ್ಯಾಂಕ್ಷನ್ಸ್​ ಮುಂತಾದ ಹಲವು ಅಡತಡೆಗಳಿಂದಾಗಿ, ಇಡೀ ಜಗತ್ತು ಇಂದು ಚಿಪ್​ಗಳ ಅಭಾವವನ್ನು ಎದುರಿಸುತ್ತಿದೆ.

76 ಸಾವಿರ ಕೋಟಿ ರೂಪಾಯಿ ಯೋಜನೆಗೆ ಚಾಲನೆ
ಇದೇ ಕಾರಣದಿಂದಾಗಿ ಎಲೆಕ್ಟ್ರಾನಿಕ್ಸ್​​​​ ಕ್ಷೇತ್ರದಲ್ಲಿ ಸಾಕಷ್ಟು ಮಂದಗತಿಯ ಬೆಳವಣಿಗೆ ಕಾಣುತ್ತಿದೆ. ಇದೇ ಕಾರಣದಿಂದಾಗಿ, ಭಾರತವನ್ನು ಸೆಮಿಕಂಡಕ್ಟರ್ ಉತ್ಪಾದನೆ ವಲಯವನ್ನಾಗಿ ಮಾಡುವ ಗುರಿಯನ್ನು ಪ್ರಧಾನಮಂತ್ರಿ ಮೋದಿ ಹೊಂದಿದ್ದು, ಅದಕ್ಕಾಗಿಯೇ ಸುಮಾರು 76 ಸಾವಿರ ಕೋಟಿ ರೂಪಾಯಿಯ ಯೋಜನೆಗೆ ಇಂದು ಅನುಮತಿಯನ್ನು ನೀಡಲಾಗಿದೆ.

vtv vitla
vtv vitla

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ‘ಮೇಕ್​ ಇನ್ ಇಂಡಿಯಾ’ ಅಡಿಯಲ್ಲಿ ದೇಶವು ಡಿಜಿಟಿಲೀಕರಣ ವಿಚಾರದಲ್ಲಿ ಮತ್ತಷ್ಟು ಸದೃಢರಾಗಲು ಮಹತ್ವದ ನಿರ್ಧಾರವನ್ನ ತೆಗೆದುಕೊಂಡಿದೆ. ಸೆಮಿಕಂಡಕ್ಟರ್ & ಡಿಸ್​ಪ್ಲೇ ಬೋರ್ಡ್​ ತಯಾರಿಕಾ ಪಿಎಲ್​ಐ ಯೋಜನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಚಿಪ್​ಗಳ ಕೊರತೆ ನೀಗಿಸಲು ಮಹತ್ವದ ನಿರ್ಧಾರ
ಈ ಯೋಜನೆಗೆ ಒಟ್ಟು 76 ಸಾವಿರ ಕೋಟಿಯನ್ನ ಮೀಸಲಿಡಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. 6 ವರ್ಷಗಳ ಅವಧಿಯಲ್ಲಿ ಸೆಮಿಕಂಡಕ್ಟರ್ & ಡಿಸ್​ಪ್ಲೇ ಬೋರ್ಡ್ ನಿರ್ಮಾಣಕ್ಕೆ ಈ ಬಂಡವಾಳ ಹೂಡಿಕೆ  ಆಗಲಿದೆ. ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿರುವ ಕೇಂದ್ರ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್, ಸೆಮಿಕಂಡಕ್ಟರ್ ಮತ್ತು ಡಿಸ್​​ಪ್ಲೇ ಬೋರ್ಡ್‌ಗಳ ಉತ್ಪಾದನೆಯನ್ನು ಉತ್ತೇಜಿಸುವ ಉದ್ದೇಶದಿಂದ PLI ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ತಿಳಿಸಿದ್ದಾರೆ.

ಈ ಸೆಮಿ ಕಂಡಂಕ್ಟರ್​ ಮತ್ತು ಡಿಸ್​​ಪ್ಲೇ ಬೋರ್ಡ್​ಗಳನ್ನ ಸಂಪೂರ್ಣವಾಗಿ ಎಕೋಸಿಸ್ಟಮ್ ರೀತಿಯಲ್ಲಿ ಅಭಿವೃದ್ಧಿ ಪಡಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದಕ್ಕಾಗಿ ಇಂದು 76 ಸಾವಿರ ಕೋಟಿ ರೂಪಾಯಿಗಳನ್ನ ಹೂಡಿಕೆಗೆ ಅನುಮೋದನೆ ನೀಡಲಾಗಿದೆ. ಈ ಯೋಜನೆಯ ಮೂಲಕ, ಕೇಂದ್ರ ಸರ್ಕಾರವು ದೇಶವನ್ನು ಎಲೆಕ್ಟ್ರಾನಿಕ್ ಹಬ್ ಆಗಿ ಅಭಿವೃದ್ಧಿಪಡಿಸಲು ಬಯಸುತ್ತದೆ ಎಂದಿದ್ದಾರೆ. ಏಕೆಂದರೆ ಮೈಕ್ರೋಚಿಪ್‌ಗಳ ಕೊರತೆಯು ಕೈಗಾರಿಕೆಗಳ ಉತ್ಪಾದನೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇಂದು ಮಹತ್ವದ ನಿರ್ಧಾರವನ್ನ ತೆಗೆದುಕೊಂಡಿದೆ ಎಂದು ಅವರು ತಿಳಿಸಿದ್ದಾರೆ.

vtv vitla
vtv vitla
- Advertisement -

Related news

error: Content is protected !!