Wednesday, May 22, 2024
spot_imgspot_img
spot_imgspot_img

ಭಾರತದ ಮೊದಲ ನೀರೊಳಗಿನ ಸುರಂಗ ಮಾರ್ಗ ಸಿದ್ದ

- Advertisement -G L Acharya panikkar
- Advertisement -

ಕೋಲ್ಕತಾ: ಭಾರತದ ಮೊದಲ ನೀರೊಳಗಿನ ಸುರಂಗ ಮಾರ್ಗ ಪಶ್ಚಿಮ ಬಂಗಾಳದ ಹೂಗ್ಲಿ ನದಿಯ ಅಡಿಯಲ್ಲಿ ನಿರ್ಮಾಣಗೊಂಡಿದ್ದು, ಭಾರತದ ಹಿರಿಮೆಯ ಸಾಲಿನಲ್ಲಿ ಹೊಸ ಸೇರ್ಪಡೆಯಾಗಲಿದೆ. ಬಹುತೇಕ ಮುಂದಿನ ವರ್ಷಾಂತ್ಯಕ್ಕೆ ಈ ಸುರಂಗ ಮಾರ್ಗ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ.

ಈಸ್ಟ್ ವೆಸ್ಟ್ ಮೆಟ್ರೋ ಕಾರಿಡಾರ್‌ನ ಭಾಗವಾಗಿ ಸುಮಾರು 120 ಕೋಟಿ ರೂ. ವೆಚ್ಚದಲ್ಲಿ ನೀರೊಳಗಿನ ಸುರಂಗ ಮಾರ್ಗ ನಿಮಾರ್ಣಗೊಂಡಿದೆ. 520 ಮೀಟರ್ ಉದ್ದದ ಸುರಂಗ ಮಾರ್ಗ ಇದಾಗಿದ್ದು, ಕೇವಲ 45 ಸೆಕೆಂಡುಗಳಲ್ಲಿ ಸುರಂಗ ಮಾರ್ಗದ ಸಂಚಾರ ಕೊನೆಗೊಳ್ಳಲಿದೆ. ಆ ಮೂಲಕ ಪ್ರಯಾಣಿಕರಿಗೆ ಹೊಸ ಅನುಭವವನ್ನು ಇದು ನೀಡಲಿದೆ.

ಈ ಸುರಂಗ ಮಾರ್ಗವನ್ನು ನದಿಪಾತ್ರದಿಂದ 13 ಮೀಟರ್ ಕೆಳಗೆ ಮತ್ತು ನೆಲದ ಮಟ್ಟದಿಂದ 33 ಮೀಟರ್ ಕೆಳಗೆ ನಿರ್ಮಿಸಲಾಗುತ್ತಿದೆ. ಯುರೋಸ್ಟಾರ್‌ನ ಲಂಡನ್-ಪ್ಯಾರಿಸ್ ಕಾರಿಡಾರ್‌ ಸುರಂಗ ಮಾರ್ಗವನ್ನು ನಿರ್ಮಾಣ ಮಾಡಿದ್ದು, ನಿರ್ಮಾಣ ಕಾಮಗಾರಿ ಅಂತ್ಯಗೊಂಡಿದೆ. ಕೆಲವೊಂದು ಅಂತಿಮ ಪ್ರಕ್ರಿಯೆಗಳು ಬಾಕಿಯಾಗಿದ್ದು, 2023ರ ಡಿಸೆಂಬರ್‌ ವೇಳೆಗೆ ಪ್ರಯಾಣಿಕರ ಬಳಕೆಗೆ ಇದನ್ನು ಮುಕ್ತಗೊಳಿಸಲಾಗತ್ತದೆ ಎಂದು ಕೋಲ್ಕತಾ ಮೆಟ್ರೋ ರೈಲು ನಿಗಮದ ಜನರಲ್ ಮ್ಯಾನೇಜರ್ (ಸಿವಿಲ್) ಸೈಲೇಶ್ ಕುಮಾರ್ ಹೇಳಿದ್ದಾರೆ.

ಪೂರ್ವ-ಪಶ್ಚಿಮ ಕಾರಿಡಾರ್‌ಗೆ ಸುರಂಗ ಮಾರ್ಗ ಅಗತ್ಯವಾಗಿತ್ತು. ಆದರೆ ತಾಂತ್ರಿಕ ಸಮಸ್ಯೆಗಳು ಮತ್ತು ಜನವಸತಿ ಪ್ರದೇಶಗಳ ಕಾರಣದಿಂದಾಗಿ ನದಿಯ ಅಡಿಯಲ್ಲಿ ಇದನ್ನು ನಿರ್ಮಿಸಲಾಗಿದೆ. ಪ್ರಯಾಣಿಕರಿಗೂ ಇದು ಹೊಸ ಅನುಭವವಾಗಲಿದೆ ಎಂದವರು ವಿವರಿಸಿದ್ದಾರೆ.

- Advertisement -

Related news

error: Content is protected !!