
ಭಾರತ್ ಜೋಡೋ ಯಾತ್ರೆ ಮಧ್ಯಪ್ರದೇಶಕ್ಕೆ ಪ್ರವೇಶಕ್ಕೆ ಮುನ್ನ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರಿಗೆ ಕೊಲೆ ಬೆದರಿಕೆ ಬಂದಿರುವ ಬಗ್ಗೆ ವರದಿಯಾಗಿದೆ. ರಾಹುಲ್ ಗಾಂಧಿ ಅವರಿಗೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಜುನಿ ಪೊಲೀಸ್ ಠಾಣೆ ವ್ಯಾಪ್ತಿಯ ಇಂದೋರ್‌ನ ಸಿಹಿತಿಂಡಿ ಅಂಗಡಿಯೊಂದರ ಹೊರಗೆ ರಾಹುಲ್ ಗಾಂಧಿಯನ್ನು ಕೊಲ್ಲುವುದಾಗಿ ಬೆದರಿಕೆ ಪತ್ರವೊಂದು ಪತ್ತೆಯಾಗಿದೆ. ಪೊಲೀಸರು ಆ ಪ್ರದೇಶದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ಮಾಡಲು ಪ್ರಾರಂಭಿಸಿದ್ದಾರೆ ಮತ್ತು ಪತ್ರವನ್ನು ಸಿಹಿತಿಂಡಿ ಅಂಗಡಿಯ ಹೊರಗೆ ಬಿಟ್ಟುಹೋದ ವ್ಯಕ್ತಿಯನ್ನು ಹುಡುಕುತ್ತಿದ್ದಾರೆ.

ಇದೀಗ ಅಪರಿಚಿತ ವ್ಯಕ್ತಿಯ ವಿರುದ್ಧ ಸೆಕ್ಷನ್ 507 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಹುಲ್ ಗಾಂಧಿ ಅವರು ಸಾವರ್ಕರ್ ಗೆ ಬಗ್ಗೆ ಹೇಳಿಕೆ ಕೊಟ್ಟ ಒಂದು ದಿನದ ನಂತರ ಬೆದರಿಕೆ ಪತ್ರ ಬಂದಿದೆ, ಅವರು ಬ್ರಿಟಿಷ್ ಆಡಳಿತಗಾರರಿಗೆ ಸಹಾಯ ಮಾಡಿದ್ದಾರೆ ಮತ್ತು ಭಯದಿಂದ ಅವರಿಗೆ ಕ್ಷಮಾದಾನ ಅರ್ಜಿಯನ್ನು ಬರೆದಿದ್ದಾರೆ ಎಂದು ಹೇಳಿದ್ದರು.
- ಟೆರೇಸ್ಗೆ ವಾಯುವಿಹಾರಕ್ಕೆ ತೆರಳಿದ್ದ ಮಹಿಳೆ ಮೇಲೆ ಅತ್ಯಾಚಾರ-ಕೆಲಸಕ್ಕೆ ಸೇರಿದ ನಾಲ್ಕೇ ದಿನಕ್ಕೆ ಕೃತ್ಯ- ಸೆಕ್ಯುರಿಟಿ ಗಾರ್ಡ್ ಅರೆಸ್ಟ್
- ಸಂಪಾಜೆ ಚಡಾವು ಬಳಿ ಅಪಘಾತ: ಲಾರಿ ಡಿಕ್ಕಿಗೆ ಬೈಕ್ ಸವಾರ ಗಂಭೀರ ಗಾಯ
- ಬೆಳ್ತಂಗಡಿ: ನಶೆಯಲ್ಲಿದ್ದ ವ್ಯಕ್ತಿಗೆ ವೈದ್ಯಕೀಯ ಪರೀಕ್ಷೆ- ಪೊಲೀಸರ ವಿಚಾರಣೆಯಲ್ಲಿ ಮಾದಕ ವಸ್ತು ಸೇವನೆ ಒಪ್ಪಿಕೊಂಡ ವ್ಯಕ್ತಿ
- ಕಾಸರಗೋಡು:ವಿವಾದಾತ್ಮಕ ರಸಪ್ರಶ್ನೆ ತಯಾರಿಸಿದ ಆರೋಪ: ಶಿಕ್ಷಕ ಅಮಾನತು
- ಭಟ್ಕಳ: ಪೊಲೀಸರ ಮೇಲೆಯೇ ರೌಡಿಶೀಟರ್ ತಂಡದ ಚಾಕು ದಾಳಿ: ಇಬ್ಬರು ಸಿಬ್ಬಂದಿ ಗಂಭೀರ









