Friday, April 26, 2024
spot_imgspot_img
spot_imgspot_img

ಭಾರತ- ನ್ಯೂಜಿಲೆಂಡ್ ನಡುವೆ ಇಂದು ಹೈವೋಲ್ಟೇಜ್ ಪಂದ್ಯ: ಐತಿಹಾಸಿಕ ಗೆಲುವಿನತ್ತ ಕೊಹ್ಲಿ ಕಣ್ಣು

- Advertisement -G L Acharya panikkar
- Advertisement -

ಐಸಿಸಿ ಟಿ20 ವಿಶ್ವಕಪ್ ನಲ್ಲಿ ಪಾಕಿಸ್ತಾನ ವಿರುದ್ಧ ಸೋತು ಅಭಿಯಾನ ಆರಂಭಿಸಿರುವ ಭಾರತ ಹಾಗೂ ನ್ಯೂಜಿಲೆಂಡ್ ತಂಡ ಇಂದಿನ 28ನೇ ಪಂದ್ಯದಲ್ಲಿ ಮುಖಾಮುಖಿ ಆಗುತ್ತಿದೆ. ವಿರಾಟ್ ಕೊಹ್ಲಿ ಹಾಗೂ ಕೇನ್ ವಿಲಿಯಮ್ಸನ್ ಪಡೆಯ ಕಾದಾಟಕ್ಕೆ ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ವೇದಿಕೆ ಸಿದ್ದವಾಗಿದೆ. ಪಾಕಿಸ್ತಾನದ ವಿರುದ್ಧ ಟೀಮ್ ಇಂಡಿಯಾ 10 ವಿಕೆಟ್‌ಗಳಿಂದ ಹೀನಾಯ ಸೋಲು ಅನುಭವಿಸಿತ್ತು. ಆ ಮೂಲಕ ಟೂರ್ನಿಯಲ್ಲಿ ಭಾರತ ತಂಡ ನೀರಸ ಆರಂಭ ಕಂಡಿತ್ತು.

ಹೀಗಾಗಿ ಸೆಮೀಸ್ ಹಂತಕ್ಕೇರುವ ದೃಷ್ಟಿಯಿಂದ ಎರಡು ತಂಡಗಳಿಗೂ ಈ ಪಂದ್ಯ ಕ್ವಾರ್ಟಫೈನಲ್ ಹಣಾಹಣಿಯಂತಿದೆ. ಟಿ20 ವಿಶ್ವಕಪ್ ಟೂರ್ನಿಗಳಲ್ಲಿ ಭಾರತ ತಂಡ ಇದುವರೆಗೂ ನ್ಯೂಜಿಲೆಂಡ್ ಎದುರು ಗೆದ್ದಿಲ್ಲ, ಅಲ್ಲದೆ, ಕಳೆದ 18 ವರ್ಷಗಳಿಂದ ಐಸಿಸಿ ಟೂರ್ನಿಗಳಲ್ಲಿ ಕಿವೀಸ್ ತಂಡಕ್ಕೆ ಶರಣಾಗುತ್ತಾ ಬಂದಿರುವ ಭಾರತ ತಂಡ ಗೆಲುವಿನ ಬರ ಎದುರಿಸುತ್ತಿದೆ. ಇದೀಗ ಮಹತ್ವದ ಪಂದ್ಯದಲ್ಲಿ ಗೆಲುವಿನೊಂದಿಗೆ ಐತಿಹಾಸಿಕ ಗೆಲುವು ಕಾಣುತ್ತಾ ನೋಡಬೇಕಿದೆ.

ಈ ಪಂದ್ಯದಲ್ಲಿ ಸೊತ ತಂಡವು ಮುಂದಿನ ಮೂರು ಪಂದ್ಯಗಳಲ್ಲಿ ಜಯಿಸಬೇಕು. ಅದೇ ರೀತಿ ಈ ಪಂದ್ಯದಲ್ಲಿ ಗೆದ್ದ ತಂಡವು ಮುಂದಿನ ಮೂರು ಹಣಾಹಣಿಗಳಲ್ಲಿ ಒಂದರಲ್ಲಿ ಸೋಲಬೇಕು. ಆದರೆ ಕ್ರಿಕೆಟ್ ಲೋಕದಲ್ಲಿ ಈಗ ತಮ್ಮ ಅಸ್ತಿತ್ವ ರೂಪಿಸಿಕೊಳ್ಳಲು ಪ್ರಯತ್ನಿಸುತ್ತಿರುವ ತಂಡಗಳ ಎದುರು ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಗೆಲ್ಲುವ ಸಾಧ್ಯತೆಯೇ ಅತಿ ಹೆಚ್ಚು. ಆದ್ದರಿಂದ ಇಂದಿನ ನಡೆಯುವ ಪಂದ್ಯವು ಕುತೂಹಲದ ಗಣಿಯಾಗಿದೆ.

- Advertisement -

Related news

error: Content is protected !!