Wednesday, September 23, 2026
spot_imgspot_img
spot_imgspot_img

ಮಂಗಳೂರು: ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ನಿವೃತ್ತ ಅಧ್ಯಾಪಕ ಸಾವು

- Advertisement -
- Advertisement -

ಮಂಗಳೂರು: ತಲಪಾಡಿ ಟೋಲ್ ಗೇಟ್‌ ಬಳಿ ಬೈಕ್’ಗಳ ನಡುವೆ ಉಂಟಾದ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದ ನಿವೃತ್ತ ಅಧ್ಯಾಪಕರೋರ್ವರು ಅಸುನೀಗಿದ್ದಾರೆ. ವರ್ಕಾಡಿ ಗುಡ್ಡೊಡಿಯ ನಾಗಪ್ಪ (68) ಮೃತಪಟ್ಟವರು.

ಕೊಡ್ಲ ಮೊಗರು ವಾಣಿವಿಜಯ ಶಾಲೆಯಲ್ಲಿ ಅಧ್ಯಾಪಕ ರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ ಮಂಜೇಶ್ವರ ದ ಮೆಡಿಕಲ್ ಶಾಪ್’ನ ಮಾಲಕರಾಗಿದ್ದರು. ಪ್ರಸ್ತುತ ಎಕ್ಕೂರಿನಲ್ಲಿ ವಾಸವಾಗಿದ್ದ ಇವರು ಫೆಬ್ರವರಿ 28 ರಂದು ತಲಪಾಡಿ ಟೋಲ್’ಗೇಟ್ ಬಳಿ ಬೈಕ್’ಗಳ ನಡುವೆ ಅಪಘಾತ ನಡೆದು ಗಂಭೀರ ಗಾಯಗೊಂಡಿದ್ದ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಅಸುನೀಗಿದ್ದಾರೆ.

- Advertisement -

Related news

error: Content is protected !!