- Advertisement -
- Advertisement -

ಮಂಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಈಶ್ವರಪ್ಪ ಮೇಲೆ ಆರೋಪ ಕೇಳಿ ಬಂದ ಹಿನ್ನೆಲೆ, ಅವರನ್ನು ಬಂಧಿಸಲು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಸಚಿವ ಈಶ್ವರಪ್ಪ ವಿರುದ್ದ ಸಂತೋಷ್ ಪಾಟೀಲ್ ಕಮಿಷನ್ ಆರೋಪ ಮಾಡಿದ ಹಿನ್ನೆಲೆ, ಈ ಕೂಡಲೇ ಸಚಿವ ಈಶ್ವರಪ್ಪ ರಾಜೀನಾಮೆ ನೀಡಬೇಕು, ಅವರನ್ನು ಬಂಧಿಸಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಮುಖಂಡ ಮಿಥುನ್ ರೈ ನೇತೃತ್ವದಲ್ಲಿ ಕೈ ಕಾರ್ಯಕರ್ತರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದ್ದ ಖಾಸಗಿ ಹೊಟೇಲ್ ಗೆ ನುಗ್ಗಲು ಯತ್ನಿಸಿದರು.

ಸಿಎಂ ಬೊಮ್ಮಾಯಿ ಖಾಸಗಿ ಹೊಟೇಲ್ ನಲ್ಲಿ ಸಭೆ ನಡೆಸುತ್ತಿದ್ದರು. ಪ್ರತಿಭಟನೆ ಮಾಡುತ್ತಾ, ಸಿಎಂ ಇದ್ದ ಹೊಟೇಲ್ ಗೆ ನುಗ್ಗಲು ಯತ್ನಿಸಿದ ಕೈ ಕಾರ್ಯಕರ್ತರನ್ನು ತಕ್ಷಣ ಪೊಲೀಸರು ನಿಯಂತ್ರಿಸಿ ಬಂಧಿಸಿ ಕರೆದುಕೊಂಡು ಹೋಗಿದ್ದಾರೆ.

ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಬೆಳಗಾವಿ, ಬೆಂಗಳೂರು ಸೇರಿದಂತೆ ಹಲವೆಡೆ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ


- Advertisement -








