Thursday, April 25, 2024
spot_imgspot_img
spot_imgspot_img

ಮಂಗಳೂರು: ಜ.14 ರಿಂದ ಜ. 26ರವರೆಗೆ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಹಾಗೂ ಶತಚಂಡಿಕಾಯಾಗ

- Advertisement -G L Acharya panikkar
- Advertisement -

ಮಂಗಳೂರು: ಇಲ್ಲಿನ ರಥಬೀದಿಯಲ್ಲಿರುವ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನವು ಸಹಸ್ರಾರು ವರ್ಷಗಳ ಇತಿಹಾಸವನ್ನು ಹೊಂದಿದೆ.

ವಿಶ್ವಬ್ರಾಹ್ಮಣ ಸಮಾಜ ಬಾಂಧವರ ಧಾರ್ಮಿಕ ಶ್ರದ್ಧಾಕೇಂದ್ರವಾದ ಶ್ರೀ ಕ್ಷೇತ್ರವು ಜಗನ್ಮಾತೆ ಶ್ರೀ ಕಾಳಿಕಾಂಬೆ, ಶ್ರೀ ವಿನಾಯಕ, ಶ್ರೀ ಸುಬ್ರಹ್ಮಣ್ಯ, ಭಗವಾನ್ ಶ್ರೀ ವಿಶ್ವಕರ್ಮ, ಶ್ರೀ ವೀರಭದ್ರ, ಜಗದ್ಗುರು ಶ್ರೀ ನಾಗಲಿಂಗ ಸ್ವಾಮಿ, ಪಂಜುರ್ಲಿ ದೈವ, ಶ್ರೀ ನಾಗದೇವರು, ನವಗ್ರಹ ಮಂದಿರ, ಗುಳಿಗ ದೈವ, ಪರಿವಾರ ಶಕ್ತಿಗಳ ಸಾನ್ನಿಧ್ಯವನ್ನು ಹೊಂದಿರುತ್ತದೆ.

vtv vitla

ಶ್ರೀಮಜ್ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಜ. 14ರಿಂದ ಮೊದಲ್ಗೊಂಡು ಜ.26ರವರೆಗೆ ಶ್ರೀ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಲಕ್ಷ್ಮೀಕಾಂತ ಶರ್ಮ ಸಾಲಿಗ್ರಾಮ ಆಚಾರ್ಯತ್ವದಲ್ಲಿ ನೂತನ ಶಿಲಾಮಯ ಸುತ್ತು ಪೌಳಿ ಸಮರ್ಪಣೆ, ಶ್ರೀ ಶಿವ ಮತ್ತು ಶ್ರೀ ಸುಬ್ರಹ್ಮಣ್ಯ ದೇವರ ಪ್ರತಿಷ್ಠೆ ಶ್ರೀ ಕಾಳಿಕಾಂಬಾ ವಿನಾಯಕ ದೇವರಿಗೆ ಅಷ್ಟಬಂಧ ಬ್ರಹ್ಮಕಲಶ ಪುಣೋತ್ಸವ ಹಾಗೂ ಶತಚಂಡಿಕಾಯಾಗವು ನಡೆಯಲಿದೆ.

ಕಾರ್ಯಕ್ರಮಗಳ ವಿವರ:

ಜ.13ರಂದು – ಬೆಳಿಗ್ಗೆ ಗಂಟೆ 10-00ಕ್ಕೆ: ಶ್ರೀಗುರುಗಳನ್ನು ಶ್ರೀಕ್ಷೇತ್ರಕ್ಕೆ ಸ್ವಾಗತಿಸುವುದು ಹಾಗೂ ಶ್ರೀಕ್ಷೇತ್ರದ ವತಿಯಿಂದ ಶ್ರೀ ಗುರು ಪಾದಪೂಜೆ, ಸಂಜೆ ಗಂಟೆ 4-00ರಿಂದ: ಶಿಲ್ಪಿ ಗೌರವ ಆಲಯ ಪರಿಗ್ರಹ ನಡೆಯಲಿದೆ.

vtv vitla

ಜ. 14ರಂದು– ಶ್ರೀ ಕಾಳಿಕಾಂಬೆಯ ಪ್ರೀತ್ಯರ್ಥ ಬ್ರಹ್ಮಕಲಶ ಪರ್ಯಂತ, ನಿತ್ಯ ನವಕ ಕಲಶಾಭಿಷೇಕ, ಆಚಾರ್ಯ ಸ್ವಾಗತ, ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ಪುಣ್ಯಾಹ, ದೇವನಾಂದಿ, ಋತ್ವಿಕ್‌ವರಣ, ಕಂಕಣಬಂಧ, ಬ್ರಹ್ಮಕೂರ್ಚಹೋಮ, ಅಥರ್ವಶೀರ್ಷಗಣಯಾಗ, ವೇದ ಪಾರಾಯಣಾರಂಭ, ಮಧ್ಯಾಹ್ನ ಮಹಾಪೂಜೆ,

ಸಂಜೆ ಗಂಟೆ 4 ರಿಂದ: ಸಪ್ತಶುದ್ದಿ, ಮೃತ್ತಿಕಾಹರಣ, ಅಂಕುರಾರ್ಪಣೆ, ಪ್ರಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಪೂಜೆ, ವಾಸ್ತು ಹೋಮ, ವಾಸ್ತು ಬಲಿ ದಿಗ್ಬಲಿ ರಾತ್ರಿ ಮಹಾಪೂಜೆ, ಸಂಜೆ 4.30 ಕ್ಕೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆ ಉದ್ಘಾಟನೆ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಜ. 15ರಂದು ಶ್ರೀ ವಿನಾಯಕ ಪ್ರೀತ್ಯರ್ಥ ಬ್ರಹ್ಮಕಲಶಾಭಿಷೇಕ ಪರ್ಯಂತ ದ್ವಾದಶ ನಾರೀಕೇಳ ಗಣಯಾಗ ಶ್ರೀ ಶಿವ ಮತ್ತು ಶ್ರೀಸುಬ್ರಹ್ಮಣ್ಯ ದೇವರ ಬಿಂಬ ಶುದ್ಧಿ ಶಾಂತಿ ಹೋಮಾದಿಗಳು, ಸಂಜೆ ಗಂಟೆ 4ರಿಂದ: ಶಂಕರ ಪ್ರೋಕ್ತ ಪ್ರಾಯಶ್ಚಿತ್ತ ಹೋಮ ಸ್ಕಂದ ಪ್ರೋಕ್ತ ಪ್ರಾಯಶ್ಚಿತ್ತ ಹೋಮ ಗುರುಮಠದ ಶ್ರೀ ವಿಶ್ವಕರ್ಮ ಸಾನಿಧ್ಯದಲ್ಲಿ ಮತ್ತು ರಾಕ್ಷೋಘ್ನ ಹೋಮ ಮಂಟಪ ಸಂಸ್ಕಾರ ಇತ್ಯಾದಿ ನಡೆಯಲಿದೆ.

ಜ.16ರಂದು ಪ್ರಾಯಶ್ಚಿತ ಹೋಮಾದಿಗಳು ಶ್ರೀ ಶಿವ ಮತ್ತು ಶ್ರೀ ಸುಬ್ರಹ್ಮಣ್ಯ ದೇವರಿಗೆ ಶಕ್ತಿ ಹೋಮ ಮೃತ್ಯುಂಜಯ ಹೋಮ ನವಗ್ರಹ ಹೋಮ ಅಕ್ಷತ ಹೋಮ, ಅಪರಾಹ್ನ ಗಂಟೆ 3ಕ್ಕೆ: ಮೆರವಣಿಗೆಯೊಂದಿಗೆ ಹೊರೆ ಕಾಣಿಕೆ ಸಮರ್ಪಣೆ, ಸಂಜೆ ಗಂಟೆ 4ರಿಂದ: ಶ್ರೀ ಶಿವ ಮತ್ತು ಶ್ರೀ ಸುಬ್ರಹ್ಮಣ್ಯ ದೇವರ ಬಿಂಬಧಿವಾಸ ಶಿರಸ್ತತ್ವ ಹೋಮ ಶಯ್ಯಾ ಕಲ್ಪನಂ ಅಧಿವಾಸ ಹೋಮಾದಿಗಳು

ಶ್ರೀ ಶಿವ ಮತ್ತು ಶ್ರೀ ಸುಬ್ರಹ್ಮಣ್ಯ ದೇವರ ಪೀಠ ನ್ಯಾಸ ಪೂರ್ವಕ ಗರ್ಭಗೇಹಾದಿವಾಸ ಶ್ರೀ ಶಿವನಿಗೆ ಏಕ ನೀತಿ (81) ದ್ರವ್ಯಮಿಳಿತ, ಚತುರುತ್ತರ ಪಂಚ ಶತ (504) ಪರಿಕಲಶ ಸಹಿತ ಬ್ರಹ್ಮಕಲಶಾಧಿವಾಸ ಶ್ರೀ ಸುಬ್ರಹ್ಮಣ್ಯ ದೇವರಿಗೆ ಅಷ್ಟಚತ್ವಾರಿಂಶದುತ್ತರ ದ್ವಿಶತ (248) ಪರಿಕಲಶ ಸಹಿತ ಬ್ರಹ್ಮಕಲಶಾಧಿವಾಸ ಅಧಿವಾಸ ಹೋಮಾದಿಗಳು ಇತ್ಯಾದಿ, ಸಂಜೆ ಗಂಟೆ 5ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿರುವುದು. ಜನವರಿ 17 ರಿಂದ ಜನವರಿ 26 ರವರೆಗೆ ಶ್ರೀ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ಹಾಗೂ ಶತಚಂಡಿಕಾಯಾಗ ನಡೆಯಲಿರುವುದು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಗಣ್ಯರು ಭೇಟಿ ನೀಡಲಿದ್ದಾರೆ

suvarna gold
vtv vitla
vtv vitla
- Advertisement -

Related news

error: Content is protected !!