- Advertisement -
- Advertisement -

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಹೊಸ ನಿಯಮ ಪೊಲೀಸ್ ಇಲಾಖೆ ಜಾರಿಗೆ ತರಲಿದೆ. ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆಯಿಂದ ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರಿರಿಗೆ ಅವಕಾಶವಿಲ್ಲ ಎಡಿಜಿಪಿ ಅಲೋಕ್ ಕುಮಾರ್ ಮಂಗಳೂರಿನಲ್ಲಿ ತಿಳಿಸಿದ್ದಾರೆ.

ಹದಿನೆಂಟು ವರ್ಷದ ಕೆಳಗಿನ ಮಕ್ಕಳು, ಹಿರಿಯ ನಾಗರಿಕರು ಮತ್ತು ಮಹಿಳೆಯರಿಗೆ ಈ ನಿಯಮದಿಂದ ರಿಯಾಯಿತಿ ನೀಡಲಾಗಿದೆ. ಕೇವಲ ಪುರುಷ ಹಿಂಬದಿ ಸವಾರರಿಗೆ ಮಾತ್ರ ಈ ನಿಯಮ ಅನ್ವಯಿಸಲಿದೆ. ಮುಂದಿನ ಒಂದು ವಾರದ ಮಟ್ಟಿಗೆ ಜಿಲ್ಲೆಯಲ್ಲಿ ಈ ನಿಯಮವನ್ನು ಪಾಲನೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.

ಕೆಲವು ಬಾರಿ ಹಿಂಬದಿ ಸವಾರರು ಸಮಸ್ಯೆ ಉಂಟು ಮಾಡ್ತಾರೆ. ಬೇರೆ ರಾಜ್ಯದಲ್ಲೂ ಈ ನಿಯಮ ಜಾರಿಗೆ ತರಲಾಗಿತ್ತು. ಆಗ ಎಲ್ಲಾ ಪುರಷ ಹಿಂಬದಿ ಸವಾರರಿಗೆ ದ್ವಿಚಕ್ರ ವಾಹನದಲ್ಲಿ ಸಂಚರಿಸಲು ಅವಕಾಶ ನಿರಾಕರಿಸಲಾಗಿತ್ತು ಇಲ್ಲಿ ಮಹಿಳೆಯರು, ಹಿರಿಯ ನಾಗರಿಕರು,ಮಕ್ಕಳಿಗೆ ರಿಯಾಯಿತಿ ನೀಡಲಾಗಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.

- ಬೆಂಗಳೂರು: ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಯ ಬಂಧನ
- ಸೌರಶಕ್ತಿಯಲ್ಲಿ ಅಮೆರಿಕಾವನ್ನೇ ಮೀರಿಸಿ, ಜಾಗತಿಕವಾಗಿ 2ನೇ ಸ್ಥಾನಕ್ಕೇರಿದ ಭಾರತ – ಪ್ರಹ್ಲಾದ್ ಜೋಶಿ
- ನೆಹರು ದಾಖಲೆ ಮುರಿದು ಹೊಸ ಇತಿಹಾಸ ಸೃಷ್ಟಿಸಲು ಮುಂದಾದ ಪ್ರಧಾನಿ ಮೋದಿ!
- ಮಧ್ಯಪ್ರದೇಶ: ಗೋಡೆಗೆ ಡಿಕ್ಕಿಯಾಗಿ ಹೊತ್ತಿ ಉರಿದ ಕಾರು – ಕೂದಲೆಳೆ ಅಂತರದಲ್ಲಿ ಪಾರಾದ ಶಾಸಕ ಯೋಗೇಂದ್ರ ಸಿಂಗ್ ಬಾಬಾ
- ಕಲಬುರಗಿ: ಕಾರಿನೊಳಗೆ ಉಸಿರುಗಟ್ಟಿ 3 ವರ್ಷದ ಮಗು ಸಾವು

- Advertisement -








