Saturday, April 27, 2024
spot_imgspot_img
spot_imgspot_img

ಮಂಗಳೂರು: ದೀಪಾವಳಿಗೂ KSRTCಯಿಂದ ದೇಗುಲ ದರ್ಶನಕ್ಕೆ ಪ್ಯಾಕೇಜ್ ಟೂರ್

- Advertisement -G L Acharya panikkar
- Advertisement -

ಮಂಗಳೂರು : KSRTC ದಸರಾ ಸಂದರ್ಭದಲ್ಲಿ ಪ್ಯಾಕೇಜ್ ಟೂರ್ ಮಾಡಿದಂತೆ ದೀಪಾವಳಿಗೂ ದಕ್ಷಿಣಕನ್ನಡ ಜಿಲ್ಲೆಯ ದೇಗುಲಗಳ ದರ್ಶನಕ್ಕೆ ಪ್ಯಾಕೇಜ್ ಟೂರ್ ಮಾಡಲು ಮುಂದಾಗಿದೆ ಎಂದು ಕೆ.ಎಸ್. ಆರ್ ಟಿ ಸಿ ಅಧ್ಯಕ್ಷ ಎಂ. ಚಂದ್ರಪ್ಪ ತಿಳಿಸಿದ್ದಾರೆ.

ಪ್ಯಾಕೇಜ್ ಟೂರ್ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆ ಮಂಗಳೂರು ವಿಭಾಗದ ಕೆ ಎಸ್ ಆರ್ ಟಿಸಿ ಯಿಂದ 5-10 ಬಸ್ಸುಗಳನ್ನು ಬಿಡಲಾಗುತ್ತಿದೆ, ಮುಂದೆ ವೀಕೆಂಡ್ ಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ದೇವಾಲಯಗಳ ದರ್ಶನಕ್ಕೆ ಅನುಕೂಲವಾಗುವಂತೆ ಪ್ಯಾಕೇಜ್ ಟೂರ್ ರೂಪಿಸಲಾಗಿದೆ ಎಂದು ಅವರು ಹೇಳಿದ್ದರು.

ದಸರಾ ಸಂದರ್ಭದಲ್ಲಿ ಪ್ಯಾಕೇಜ್ ಟೂರ್ ಮಾಡಲಾಗಿತ್ತು. ಇದಕ್ಕೆ ಒಳ್ಳೆಯ ರೆಸ್ಪಾನ್ಸ್‌ ಸಿಕ್ಕಿತ್ತು. ಈ ಹಿನ್ನೆಲೆ ದೀಪಾವಳಿ ಪ್ಯಾಕೇಜ್ ಟೂರ್ ಹಾಕಲು ಕೆ.ಎಸ್.ಆರ್.ಟಿ.ಸಿ ನಿರ್ಧರಿಸಿದೆ. ಸದ್ಯ, 5 ರಿಂದ 10 ಬಸ್ ಬಿಡುತ್ತಿದ್ದೇವೆ, ಮುಂದಿನ ದಿನಗಳಲ್ಲಿ ಹಚ್ಚುವರಿ ಬಸ್ ಸೇವೆ ನೀಡಲಿದ್ದೇವೆ ಎಂದು ಕೆ.ಎಸ್‌.ಆರ್.ಟಿ.ಸಿ. ಅಧ್ಯನ ಎಂ ಚಂದ್ರಪ್ಪ ಹೇಳಿದ್ದಾರೆ.

ಅಕ್ಟೋಬರ್ 21 ರಿಂದ 27 ರವರೆಗೆ ದೀವಾವಳಿ ಪ್ರವಾಸ ಪಾಕೇಟ್ ಇರಲಿದ್ದು, ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಾಲಯ ಮತ್ತು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯಗಳನ್ನೊಳಗೊಂಡ ಪ್ರಮುಖ ದೇವಾಲಯಗಳು ಈ ಪ್ಯಾಕೇಜ್‌ನಲ್ಲಿರಲಿದೆ. ಅದೇ ರೀತಿ ಕರ್ನಾಟಕ ರಸ್ತೆ ಸಾರಿಗೆ ನಿಗಮ 50 ವೋಲ್ಟೋ ಬಸ್ ಸೇರಿದಂತೆ 650 ಹೊಸ ಬಸ್ ಗಳನ್ನು ಖರೀದಿಸುವ ಪ್ರಸ್ತಾವವಿದೆ ಎಂದು ಮಾಹಿತಿ ನೀಡಿದ್ದಾರೆ.

- Advertisement -

Related news

error: Content is protected !!